ಬಾಲಿವುಡ್ ರಾಕ್!
ಕನ್ನಡಕ್ಕಿದು ಪರ್ವಕಾಲ. ನಮ್ಮವರು ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಬಿ. ಸುರೇಶ್ ಹಿಂದಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ ಮತ್ತು ಅದನ್ನು ಯೋಗರಾಜ ಭಟ್ ನಿರ್ದೇಶಿಸುತ್ತಾರೆ ಎನ್ನುವುದು ಖಚಿತವಾದ ಬೆನ್ನಲ್ಲಿಯೇ ಇನ್ನೊಂದು ಸಿಹಿಸುದ್ದಿ ಹೊರಬಿದ್ದಿದೆ. ಅದು 'ಧೀರ' ರಾಕ್ಲೈನ್ ವೆಂಕಟೇಶ್ ಕೂಡ ಬಾಲಿವುಡ್ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ ಎನ್ನುವುದು.
ಬಿ ಟೌನ್ಗೆ ಕಾಲಿಡಲು ತಕ್ಕ ಸಮಯಕ್ಕೆ ಕಾಯುತ್ತಿದ್ದರು ರಾಕ್ಲೈನ್. ಅದಕ್ಕೀಗ ಕಾಲ ಕೂಡಿ ಬಂದಿದೆ.
ಕನ್ನಡದವರೇ ಆದ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರು ರಾಕ್ಲೈನ್ಗೆ ಸಾಥ್ ನೀಡುತ್ತಿದ್ದಾರೆ. ತಮಿಳಿನ ಸೂಪರ್ಹಿಟ್ ಸಿನಿಮಾ 'ಸೂಧು ಕವ್ವುಮ್' ಅನ್ನು ರಾಕ್ಲೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೋಹಿತ್ ಶೆಟ್ಟಿ ಪ್ರೊಡಕ್ಷನ್ಗಳು ಜಂಟಿಯಾಗಿ ಹಿಂದಿಯಲ್ಲಿ ನಿರ್ಮಿಸಲಿವೆ. 'ತಾರಾಗಣದ ಆಯ್ಕೆ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ. ಅದು ಪೂರ್ಣಗೊಂಡ ತಕ್ಷಣ ಚಿತ್ರೀಕರಣ ಶುರು' ಎಂದಿದ್ದಾರೆ ವೆಂಕಟೇಶ್.
ರಾಕ್ಲೈನ್ ಅವರು 'ಸೂಧು ಕವ್ವುಮ್'ನ ಕನ್ನಡ ಮತ್ತು ಹಿಂದಿ ರೀಮೇಕ್ ಹಕ್ಕುಗಳನ್ನು ಖರೀದಿಸಿದ್ದರು. ಆದರೆ 'ಚೆನ್ನೈ ಎಕ್ಸ್ಪ್ರೆಸ್' ಖ್ಯಾತಿಯ ರೋಹಿತ್ ಶೆಟ್ಟಿ ಕೂಡ ಇದೇ ಸಿನಿಮಾವನ್ನು ಹಿಂದಿಯಲ್ಲಿ ಮಾಡುವ ಉತ್ಸಾಹ ಹೊಂದಿದ್ದರು. ಅಷ್ಟರಲ್ಲಾಗಲೇ ರಾಕ್ಲೈನ್ ರೀಮೇಕ್ ಹಕ್ಕು ಖರೀದಿಸಿಯಾಗಿತ್ತು. ಕೊನೆಗೆ ಇಬ್ಬರೂ ಜಂಟಿಯಾಗಿ ನಿರ್ಮಿಸುವ ನಿರ್ಧಾರಕ್ಕೆ ಬಂದರು.
ಕೆಲವು ಸಮಯದ ಬಳಿಕ ಇದೇ ಸಿನಿಮಾವನ್ನು ಕನ್ನಡದಲ್ಲೂ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ ರಾಕ್ಲೈನ್.
- ರಾಜೇಶ ಮುಂಡಿಗೇಸರ