ಸಿನಿಮಾ ಲೇಖನ

ದಾಸ್ವಾಳ ಐಟಂ

ನಿಮ್ ಕಿವಿಗೂ ಒಂದು ಫ್ಲವರ್ ಹಿಡ್ತಿನಿ ಬನ್ನಿ ಎಂದ 'ದಾಸ್ವಾಳ' ಚಿತ್ರ ಈ ಬಾರಿ ಮಾಧ್ಯಮಗಳ ಮುಂದೆ ಬಂದಾಗ 'ಹೊಸ ಐಟಂ'...

ನಿಮ್ ಕಿವಿಗೂ ಒಂದು ಫ್ಲವರ್ ಹಿಡ್ತಿನಿ ಬನ್ನಿ ಎಂದ 'ದಾಸ್ವಾಳ' ಚಿತ್ರ ಈ ಬಾರಿ ಮಾಧ್ಯಮಗಳ ಮುಂದೆ ಬಂದಾಗ 'ಹೊಸ ಐಟಂ' ಕೈಯಲ್ಲಿಡಿದುಕೊಂಡಿತ್ತು. ಐದು ದಿನಗಳಿಂದ ಈ ಐಟಂ ಜೊತೆ ಆಟವಾಡಿದ್ದು ನಟ ಪ್ರೇಮ್ ಹಾಗೂ ರಂಗಾಯಣ ರಘು ಸುಸ್ತಾದವರಂತೆ ಕಾಣಲಿಲ್ಲ ಎನ್ನುವುದು ಕುತೂಹಲಕಾರಿ ವಿಷಯ.  ಎಂ.ಎಸ್. ರಮೇಶ್ ನಿರ್ದೇಶನದ, ಅಣಜಿ ನಾಗರಾಜ್ ನಿರ್ಮಾಣದ 'ದಾಸ್ವಾಳ' ಚಿತ್ರದ ಹೊಸ ಐಟಂ ಬೇರ್ಯಾರೂ ಅಲ್ಲ, ನಟಿ ಅನಿತಾ ಭಟ್. 'ತಿಪ್ಪಾಜಿ ಸರ್ಕಲ್‌'ನಲ್ಲಿ ದೇವದಾಸಿಯಾಗಿ ಕಾಣಿಸಿಕೊಳ್ಳುತ್ತಾರೆಂದು ಸುದ್ದಿ ಮಾಡಿದ್ದ ಅನಿತಾ, ಸರ್ಕಲ್‌ನಿಂದ ಔಟ್ ಆದ ಮೇಲೆ ದಾಸ್ವಾಳ ಹೂವನ್ನು ಕಿವಿಯಲ್ಲಿಟ್ಟುಕೊಂಡು ಕಾಲಿಗೆ ಗಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿದ್ದರು. ಹೌದು, ಅನಿತಾ ಭಟ್ ಐಟಂ ಹಾಡಿಗೆ ಪ್ರೇಮ್ ಮತ್ತು ರಂಗಾಯಣ ರಘು ಜೊತೆ ಕುಣಿದಿದ್ದಾರೆ ಎಂಬುದು 'ದಾಸ್ವಾಳ' ಚಿತ್ರದ ಹೊಸ ಐಟಂ.
ಕಳೆದ ಐದು ದಿನಗಳಿಂದ ಅನಿತಾ ಭಟ್ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಕೊನೆ ದಿನ ಐಟಂ ಸೆಟ್‌ನಲ್ಲೇ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದ 'ದಾಸ್ವಾಳ' ತಂಡದ ಜೊತೆಗೆ ಭಟ್ಟರ ಹುಡುಗಿ ಆಗಲೇ ಹೊಸ ಅಡುಗೆ ಶುರು ಮಾಡಿದ್ದರು. ಕೈಯಲ್ಲಿ ಎರಡು ಮೊಟ್ಟೆ ಹಿಡಿದು, 'ಹುಯೋ ಹುಯೋ ಪರ್ವಾಗಿಲ್ಲ, ಹೋದ್ರೆ ಲಿವರ್ ಅಷ್ಟೇನೇ' ಎನ್ನುತ್ತ ಕುಣಿಯುತ್ತಿದ್ದರೆ, ಪ್ರೇಮ್ ಮತ್ತು ರಘು ಸಹ ಕಲಾವಿದರ ಜೊತೆ ಸಖತ್ ಪೋರ್ಸ್ ಆಗಿ ಹೆಜ್ಜೆ ಹಾಕುತ್ತಿದ್ದರು. ಅದು ಕಂಠೀರವ ಸ್ಟುಡಿಯೋದ ಡಾಬಾ ಸೆಟ್. ಹಾಡಿನ ಚಿತ್ರೀಕರಣದ ನಡುವೆ ನಿರ್ದೇಶಕ ರಮೇಶ್ ಮಾತಿಗೆ ಸಿಕ್ಕರು. 'ಇದು ಪಕ್ಕಾ ಸಿಚುವೇಶನ್ ಸಾಂಗ್. ಬೇಕೂ ಅಂತಲೇ ಐಟಂ ಹಾಡು ಇಟ್ಟಿನಲ್ಲ. ಕಥೆಗೆ ಇದು ಬೇಕಿತ್ತು. ಪ್ರೇಮ್ ಮತ್ತು ರಂಗಾಯಣ ರಘು ಕಂಠ ಪೂರ್ತಿ ಕುಡಿದು ಜೀವನ, ಸಂಬಂಧಗಳ ಬಗ್ಗೆ ತುಂಬಾ ಮಾತನಾಡುತ್ತಾರೆ. ಅದೇ ಸಂದರ್ಭದಲ್ಲಿ ಅವರೂ ಪ್ರೇಮ ಬಂಧಕ್ಕೆ ಬಿದ್ದಿರುತ್ತಾರೆ. ಆಗ ಈ ಹಾಡು ಪ್ರವೇಶವಾಗುತ್ತದೆ. ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿದೆ. ಕೇಳುಗರಿಗೆ ಮತ್ತು  ನೋಡುಗರಿಗೆ ಇಬ್ಬರಿಗೂ ಕಿಕ್ ಕೊಡುತ್ತದೆ' ಎಂದರು ನಿರ್ದೇಶಕರು.
ಕೊಂಚ ಹಾಟ್ ಎನಿಸುವ ಉಡುಗೆಯಲ್ಲಿ ನಿರ್ದೇಶಕರ ಪಕ್ಕದಲ್ಲೇ ಕೂತಿದ್ದ ಅನಿತಾ ಭಟ್‌ರನ್ನು ನೋಡಿದರೆ ಗೊತ್ತಾಗುತ್ತದೆ ಚಿತ್ರ ನೋಡುವ ಪ್ರೇಕ್ಷಕರಿಗೆ ಕಿಕ್  ಗ್ಯಾರಂಟಿ ಅಂತ. ಅಂದಹಾಗೆ ಈ ಹಾಡಿಗೆ ತ್ರಿಭುವನ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಪೋಲಿ ಹುಡುಗನಂತೆ ಹುಡುಗಿ ಜೊತೆ ಹೆಜ್ಜೆ ಹಾಕಿ ಬಂದ  ರಂಗಾಯಣ ರಘು ಅದೇ ಜೋಶ್‌ನಲ್ಲಿ 'ಅಬ್ಬಾ...! ಹಾಡು ಸೂಪರ್. ಎಲ್ಲರು ಈ ಚಿತ್ರವನ್ನು ಸಿಕ್ಕಾಪಟ್ಟೆ ಮೆಚ್ಚಿಕೊಳ್ಳುವುದು ಗ್ಯಾರಂಟಿ. ಎಂ.ಎಸ್. ರಮೇಶ್, ಪ್ರೇಮ್, ಅಣಜಿ ನಾಗರಾಜ್ ನಿರ್ಮಾಣ ಅಂದರೆ ಅದು ಸಹಜವಾಗಿ ಒಳ್ಳೆಯ ಸಿನಿಮಾ ಆಗಿರುತ್ತದೆ' ಎಂದರು ರಘು. ಪ್ರೇಮ್ ಎಂದಿನಂತೆ 'ಸೂಪರ್ ಬಾಸೂ. ಸಿನ್ಮಾ ನಾವ್ ಅಂದುಕೊಂಡಂತೆ ಮೂಡಿ ಬಂದಿದೆ. ಪ್ರೇಕ್ಷಕರಿಗೆ ಮನರಂಜನೆ ಬೇಕು. ಅದಕ್ಕೆ ನಮ್ಮ ಚಿತ್ರದಲ್ಲಿ ಎಲ್ಲವೂ ಇದೆ' ಎಂದರು. ಜೀವನದಲ್ಲಿ ನಾಲ್ಕು ಮಂದಿ ಜೊತೆಯಾಗಿಸಿಕೊಳ್ಳಬೇಕು ಎನ್ನುವ ಮಾತಿನ ಜಾಡು ಹಿಡಿದು ಸಾಗುವ 'ದಾಸ್ವಾಳ' ಚಿತ್ರದ್ದು ವೇದಾಂತಿಯ ಕಥೆಯಾದರೂ ಹಾಸ್ಯಕ್ಕೆ ಬರ ಇಲ್ಲವಂತೆ. ಇತ್ತೀಚೆಗೆ ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾಗಳಲ್ಲಿ ಐಟಂ ಹಾಡುಗಳು ಸೂಪರ್ ಹಿಟ್ ಆಗುತ್ತಿವೆ. ಹೀಗಾಗಿ  'ದಾಸ್ವಾಳ'ದ ಈ ಹಾಡು ಪ್ರೇಕ್ಷಕನಿಗೆ ರೀಚ್ ಆಗುತ್ತದೆ ಎನ್ನುವ ನಂಬಿಕೆಯಲ್ಲಿ ಅಣಜಿ ನಾಗರಾಜ್ ಕರೆದ ಕೂಡಲೇ ಬಂದು ಅಭಿನಯಿಸಿದ್ದೇನೆ ಎಂಬುದು ಅನಿತಾ ಭಟ್‌ರ ಮಾತು. ಅನಿತಾಗೆ ಇದು ಮೊದಲ ಐಟಂ ಹಾಡು.
ಇದೇ ತಿಂಗಳು ಚಿತ್ರದ ಆಡಿಯೋ  ಬಿಡುಗಡೆ ನಡೆಯಲಿದೆ. ಬಹುಶಃ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಚಿತ್ರದಲ್ಲಿ ಹಾಸ್ಯ ಪ್ರಧಾನ ಅಂಶಗಳು ಹೆಚ್ಚಾಗಿರುವುರಿಂದ ಎಂ.ಎಸ್. ರಮೇಶ್‌ರ ಎಂದಿನ ಶೈಲಿಯ ಸಂಭಾಷಣೆಯನ್ನು ಇಲ್ಲಿ ನಿರೀಕ್ಷೆ ಮಾಡಲಾಗದು. ತುಂಬಾ ಫನ್ನಿ ಎನಿಸುವ   ಸಂಭಾಷಣೆಗಳು ಕೇಳಬಹುದು. 'ಮೊದಲ ಬಾರಿಗೆ ಬೇಗ ಚಿತ್ರದ ನಿರ್ಮಾಣ ಮುಗಿಸಿದ್ದೇನೆ. ಎಲ್ಲ ವರ್ಗದ ಪ್ರೇಕ್ಷಕರೂ ನೋಡುವಂಥ ಚಿತ್ರವಿದು' ಎಂದರು ಅಣಜಿ ನಾಗರಾಜ್. ಕೇರಳಾದ ಕುಟ್ಟಿ ಐಶ್ವರ್ಯ ಅಲಿಯಾಸ್ ಅಕ್ಷರ ಇಲ್ಲಿ ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)