ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಪವರ್‌ಸ್ಟಾರ್ ಬಿರುದು ನನ್ನಿಂದಲೇ

Lingaraj Badiger
Updated On : 2 Jan 2014, 6:28 am

ಪುನೀತ್‌ರಾಜ್‌ಕುಮಾರ್‌ಗೆ ಪವರ್‌ಸ್ಟಾರ್ ಎಂಬ ಹೆಸರು ಕೊಟ್ಟಿದ್ದು ಯಾರು? ಅದು ಖುದ್ದು ಅಪ್ಪು ಅವರ ಅಣ್ಣ ಸೆಂಚುರಿಸ್ಟಾರ್ ಶಿವಣ್ಣ. ಹೌದು ಮೊನ್ನೆ ನಿನ್ನಿಂದಲೇ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಈ ವಿಷಯವನ್ನು ಸ್ವತಃ ಶಿವರಾಜ್‌ಕುಮಾರ್ ಅವರೇ ಹೇಳಿಕೊಂಡರು. ಅಪ್ಪು ಚಿತ್ರದಲ್ಲಿ ಅವನ ಎನರ್ಜಿ ನೋಡಿ, ರಾಘುಗೆ ಹೇಳಿದೆ, ಇವನಿಗೆ ಪವರ್‌ಸ್ಟಾರ್ ಅಂತ ಕರೀಬೇಕು ಅಂತ ಎಂದ ಶಿವಣ್ಣ ಪಕ್ಕದಲ್ಲೇ ನಿನ್ನಿಂದಲೇ ಚಿತ್ರದ ನಾಯಕಿ ಎರಿಕಾ ಫರ್ನಾಂಡಿಸ್‌ರ ಎತ್ತರವನ್ನು ನೋಡಿ ಅವನು ಪವರ್‌ಸ್ಟಾರ್ ಆದರೆ, ಈ ಹುಡುಗಿಯನ್ನು ಟವರ್‌ಸ್ಟಾರ್ ಎನ್ನಬಹುದು ಎಂದು ನಗೆ ಚಟಾಕಿ ಹಾರಿಸಿದರು.
ಇಷ್ಟೆಲ್ಲಕ್ಕೂ ಕಾರಣವಾಗಿದ್ದು ನಿನ್ನಿಂದಲೇ ಚಿತ್ರದ ನಿರ್ದೇಶಕ ಜಯಂತ್ ಪರಾಂಜಿ ಅವರ ಹೇಳಿಕೆ. ತೆಲುಗಿನಲ್ಲಿ 12 ಚಿತ್ರಗಳನ್ನು ನಿರ್ದೇಶಿಸಿರುವ ಜಯಂತ್ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನನಗೆ ಪುನೀತ್ ಅವರನ್ನು ಯಾಕೆ ಪವರ್‌ಸ್ಟಾರ್ ಅಂತಾರೆ ಅನ್ನೋದು ಅರ್ಥ ಆಯಿತು ಎಂದು ಹೇಳಿದ್ದಕ್ಕೆ ಶಿವಣ್ಣ ಮೇಲಿನ ವಿಷಯ ಜ್ಞಾಪಿಸಿಕೊಂಡರು.
ಅಂದಹಾಗೆ ಪುನೀತ್ ಈ ಚಿತ್ರದಲ್ಲಿ ಹಾಲಿವುಡ್ ಸ್ಟಂಟ್‌ಮನ್‌ಗಳ ಸಹಾಯದಿಂದ ಆಕಾಶದಲ್ಲೇ ಕೆಲವು ವಿಶಿಷ್ಟ ಸ್ಟಂಟ್ಸ್ ಮಾಡಿದ್ದಾರಂತೆ. ಹಾಗಾಗಿ ಅದು ನಿನ್ನಿಂದಲೇ ಚಿತ್ರದ 'ಹೈ'ಲೈಟ್ ಆಗಬಹುದೇನೋ.

 ಇನ್ನು ನಿನ್ನಿಂದಲೇ ಚಿತ್ರಕ್ಕೆ ಮಣಿಶರ್ಮ ಅವರ ಸಂಗೀತದ ಹಾಡುಗಳ ಮತ್ತು ಟ್ರೈಲರ್‌ನ ಪ್ರದರ್ಶನವೂ ಅಲ್ಲಿತ್ತು. ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ಗಂಗರಾಜು, ಚಿನ್ನೇಗೌಡರು, ಶಿವಣ್ಣ ಮತ್ತು ಚಿತ್ರತಂಡದೊಂದಿಗೆ ನಿನ್ನಿಂದಲೇ ಚಿತ್ರಗಳ ಹಾಡುಗಳ ಬಿಡುಗಡೆ ಮಾಡಿದರು. ಇದಕ್ಕೆ ಪೂರಕವಾಗಿ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ತೆಲುಗಿನ ಮಹೇಶ್‌ಬಾಬು ಪುನೀತ್‌ಗೆ ತಮ್ಮ ವಿಡಿಯೋ ಮೂಲಕವೇ ಶುಭಹಾರೈಸಿದ್ದು ವಿಶೇಷ.
ವಿಜಯ್ ನಿರ್ಮಾಣದ ನಿನ್ನಿಂದಲೇ ಮುಂದಿನ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಒಂದಿಷ್ಟು ಗ್ಯಾಪ್‌ನ ನಂತರ ಪುನೀತ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement