ಸಿನಿಮಾ ಲೇಖನ

ಸುನಿಯೇ ಜೀ

ಬದಲಾವಣೆ ಜಗದ ನಿಯಮ ಎನ್ನುತ್ತಾ 'ಫರ್ಕ್ ಪಡ್ತಾ ಹೈ ಜೀ' ಎಂಬ ಆಶಾವಾದದೊಂದಿಗೆ ಇಂದು ತಮ್ಮ ಎರಡನೇ ...

ಬದಲಾವಣೆ ಜಗದ ನಿಯಮ ಎನ್ನುತ್ತಾ 'ಫರ್ಕ್ ಪಡ್ತಾ ಹೈ ಜೀ' ಎಂಬ ಆಶಾವಾದದೊಂದಿಗೆ ಇಂದು ತಮ್ಮ ಎರಡನೇ ಸಿನಿಮಾ 'ಬಹುಪರಾಕ್‌'ನ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ ಸಿಂಪಲ್ ಸುನಿ. ಪ್ರೇಮಿಗಳಿಗೊಂದು ಲವ್‌ಸ್ಟೋರಿ, ಪಡ್ಡೆಗಳಿಗೊಂದು ಮಚ್ಚು, ಲಾಂಗ್ ಸ್ಟೋರಿ,  ಮೆಚ್ಯೂರ್ಡ್ ಪ್ರೇಕ್ಷಕರಿಗೆ ಒಂದು ಫಿಲಾಸಫಿ ಇರೋ ಸ್ಟೋರಿ ಇರುವ ಚಿತ್ರ ಬಹುಪರಾಕ್. ಚಿತ್ರದ ಪೋಸ್ಟರ್‌ಗಳು, ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳು, ಭರತ್ ಅವರ ಹಾಡುಗಳು ಮತ್ತು ಚಿತ್ರದ ಪ್ರಮೋಷನ್ ಎಲ್ಲವೂ ಸೇರಿ ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿ  ಇರುವವರೆಲ್ಲರಿಗೂ ಈ ಸಿನಿಮಾ ನೋಡ್‌ಬೇಕು ಎನ್ನಿಸುವಂಥ ವಾತಾವರಣ ಸೃಷ್ಠಿಯಾಗಿದೆ. ಚಿತ್ರದ ಟಿವಿ ರೈಟ್ಸ್ ಕೂಡ ಒಳ್ಳೆಯ ರೇಟಿಗೆ ಸೇಲಾಗಿದೆ. ಪುನೀತ್‌ರ ಪವರ್, ಶಿವರಾಜ್‌ಕುಮಾರ್ ಅವರ ಆರ್ಯನ್, ದರ್ಶನ್‌ರ ಅಂಬರೀಶ ಚಿತ್ರಗಳು ಬಿಡುಗಡೆಯ ಹೊಸ್ತಿಲಲ್ಲಿರುವಾಗ ಚಿತ್ರಮಂದಿರಕ್ಕೆ ಬರುತ್ತಿರುವ ಬಹುಪರಾಕ್ ಎಷ್ಟರಮಟ್ಟಿಗೆ ಸುದ್ದಿ ಮಾಡುತ್ತದೆ ಎಂಬ ಕುತೂಹಲ ಗಾಂಧಿನಗರದಲ್ಲಿದೆ. ಹೊಸದೇನೂ ಅಲ್ಲ, ಹಳೆಯದನ್ನೇ ಹೊಸರೀತಿಯ ಟಚ್‌ನೊಂದಿಗೆ ಹೇಳಿದ್ದೇನೆ ಎನ್ನುವ ಸುನಿ ಅವರ ಪರಾಕ್‌ಸ್ಪರ್ಶ ಇದು. ಈ ಸಂದರ್ಭದಲ್ಲಿ ಬಹುಪರಾಕ್ ನಿರ್ದೇಶಕ ಸುನಿ ಏನಂತಾರೆ ಎನ್ನುವುದನ್ನು ಅವರ ಮಾತುಗಳಲ್ಲೇ ಸುನಿಯೇ ಜೀ.

ನಿಮ್‌ದೇ ಬ್ಯಾನರ್‌ನಲ್ಲಿ ಬಂದ ಉಳಿದವರು ಕಂಡಂತೆ ಅನ್ನೋ ಪ್ರಯೋಗಾತ್ಮಕ ಸಿನಿಮಾ ಸೋಲ್ತು. ಈಗ ನೀವೂ ಪ್ರಯೋಗ ಮಾಡಿದ್ದೀರ. ಸೋಲೋ ಭಯ ಇದೆಯಾ?

ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಗೆಲುವು ಮತ್ತು ಉಳಿದವರು ಕಂಡಂತೆ ಸೋಲು ಎರಡೂ ಕನ್‌ಫ್ಯೂಸ್ ಮಾಡುವಷ್ಟು ಸ್ಟ್ರಾಂಗ್ ಆಗಿದ್ದರೂ ಎರಡನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಈ ಚಿತ್ರದಲ್ಲಿ ಪ್ರಯೋಗವನ್ನು ಕಮರ್ಷಿಯಲ್ ಆಗಿ ಹೇಳಿದ್ದೇನೆ. ಮೊದಮೊದಲು ಕಥೆಯ ಪೂರ್ತಿ ಜಡ್ಜ್‌ಮೆಂಟ್ ಸಿಗದೇ ಇರೋ ಪ್ರೇಕ್ಷಕ ಕೂಡ ದೃಶ್ಯಗಳನ್ನು ಎಂಜಾಯ್ ಮಾಡುತ್ತಾನೆ. ಕಾಲೇಜು ಹುಡುಗರಿಗೆ ಲವ್ವೂ ಇದೆ. ಮಾಸ್ ಅಪೀಲ್ ಕೂಡ ಇದೆ. ಸ್ನೇಹಿತರ ಮಾತು ಕೇಳಿದರೆ ನನಗಂತೂ ನಂಬಿಕೆ ಹುಟ್ಟುತ್ತಿದೆ. ಆದರೆ  ಜೊತೆಗೆ ಭಯನೂ ಇದೆ.

ಮೊದಲ ಸಿನಿಮಾದ ಬಿಡುಗಡೆ ಸಮಯಕ್ಕೂ ಎರಡನೇ ಸಿನಿಮಾ ಬಿಡುಗಡೆ ಸಮಯಕ್ಕೂ ನಿಮ್ಮ ಮನಸ್ಥಿತಿಯ ವಿಷಯದಲ್ಲಿ ಏನು ವ್ಯತ್ಯಾಸ ಕಾಣಿಸ್ತಿದೆ?
ನಮ್ ಅಸಿಸ್ಟೆಂಟ್ ಡೈರೆಕ್ಟರ್ ಹೇಳೋ ಪ್ರಕಾರ ನಾನು ಹಾಗೇ ಇದೀನಿ. ಆದರೆ ಆಗ ಜನ ಹೊಸ ಹುಡುಗರು ಏನ್ ಮಾಡಿದಾರೆ ಅನ್ನೋ ಕುತೂಹಲದಿಂದ ಬಂದ್ರು. ಈಗ ಸುನಿ ಏನ್ ಮಾಡಿದಾನೆ ಅಂತ ಬರ್ತಾರೆ. ಹಾಗಾಗಿ ಅದರ ಬಗ್ಗೆ ಸ್ವಲ್ಪ ಆತಂಕ ಇದೆ.

ನಿಮ್ ಸಿನಿಮಾಗೆ ಟಾರ್ಗೆಟ್ ಆಡಿಯೆನ್ಸ್ ಯಾರು?
ಎಲ್ಲರೂ. ಆದ್ರೆ ಯಾರಿಗೇ ಆಗಲೀ, ಪೂರ್ತಿ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಹ್ಯಾಂಗ್ ಓವರ್‌ನಲ್ಲಿ ಬಂದ್ರೆ ಸ್ವಲ್ಪ ಬೇಸರ ಆಗಬಹುದು. ಆದ್ರೆ ಬೇರೆ ರೀತಿ ನಿರೀಕ್ಷೆ ಇರೋರಿಗೆ ಬೋನಸ್ ಸಿಗುತ್ತೆ.

ಬದಲಾವಣೆ ಜಗದ ನಿಯಮ ಅನ್ನುತ್ತೆ ನಿಮ್ಮ ಸಿನಿಮಾ. ಎರಡನೇ ಸಿನಿಮಾದಲ್ಲೇ ಮೂರು ಮೂರು ಕಥೆ ಹೇಳೋ ಎಕ್ಸ್‌ಪರಿಮೆಂಟ್ ಬೇಕಿತ್ತಾ?

ಬಹುಪರಾಕ್ ಟೇಕ್‌ಆಫ್ ಆದಾಗ ಉಳಿದವರು ಕಂಡಂತೆ ಬಂದಿರಲಿಲ್ಲ. ಸಿಂಪಲ್ಲಾಗೊಂದ್...ಹಿಟ್ ಆದಾಗ ಜೋಷ್‌ನಲ್ಲಿದ್ದೆ. ಆಗ ಶುರು ಮಾಡಿದ್ದು ಇದು. ನನ್ನ ಪ್ರೇಕ್ಷಕರು ಅಂತ ಇದಾರೆ. ಅವರು ಬರ್ತಾರೆ ಅಂತ ಗ್ಯಾರಂಟಿ ಇತ್ತು. ಆದರೂ ಹೋಗ್ತಾ ಹೋಗ್ತಾ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಮರ್ಷಿಯಲ್ ಅಂಶಗಳನ್ನು ತುಂಬಿಸಿದ್ದೇನೆ. ಇಲ್ಲಿಯವರೆಗೂ ಯಾರೂ ಮಾಡಿಲ್ಲದಂಥದ್ದೇನೂ ನಾನು ಮಾಡಿಲ್ಲ. ಎಲ್ಲರೂ ಮಾಡಿರೋದನ್ನೇ ಸ್ವಲ್ಪ ಬೇರೆ ಥರಾ ಮಾಡಿದ್ದೇನೆ ಅಷ್ಟೆ.

ನಿಮ್ಮ ಪ್ರಕಾರ ಬಹುಪರಾಕ್‌ನಲ್ಲಿ ಕ್ಲಿಕ್ ಆಗೋ ಎಲಿಮೆಂಟ್ ಏನು?

'ನಾನ್ಯಾರೆಂಬುದು ನಾನಲ್ಲ' ಹಾಡು ಮತ್ತು ಅಲ್ಲಿಂದ ಕ್ಲೈಮ್ಯಾಕ್ಸ್ ಮುಗಿಯೋವರೆಗೂ ಇರೋ ಪೋರ್ಷನ್. ಎಂಥವನಿಗೂ ಮೈ ಝುಮ್ ಅನ್ಸುತ್ತೆ. ಬರೀ ಕ್ಲೈಮ್ಯಾಕ್ಸ್‌ಗೇನೇ ಒಂದು ಒಳ್ಳೆ ಕಥೆಯ ಲಕ್ಷಣ ಇದೆ ಅನ್ನೋದು ನನ್ನ ಅನಿಸಿಕೆ.

ಭರತ್ ಹಾಡುಗಳು ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಥರಾನೇ ಸೌಂಡ್ ಮಾಡ್ತಿವೆ. ತಮ್ಮ ಟ್ಯಾಲೆಂಟ್‌ನ ಮತ್ತೆ ಪ್ರೂವ್ ಮಾಡಿದಾರೆ ಅವರು. ಎಲ್ಲಿ ಹುಡುಕಿದ್ರಿ ಇಂಥ ಪ್ರತಿಭೆನಾ?

ಭರತ್ ಸಿಂಪಲ್ಲಾಗೊಂದ್...ಗಿಂತ ಜಾಸ್ತಿನೇ ಪ್ರತಿಭೆ ತೋರಿಸಿದ್ದಾರೆ ಇಲ್ಲಿ. ಹಾಗೆ ನೋಡಿದರೆ ಅವರ ನಿಜವಾದ ಬೆಲೆ ಗೊತ್ತಾಗೋದು ಈ ಚಿತ್ರದಲ್ಲಿ ಅವರ ರೀರೆಕಾರ್ಡಿಂಗ್ ನೋಡಿದ ಮೇಲೆ. 'ಹಾಫ್ ಮೆಂಟ್ಲು' ಟೀಮ್‌ನಿಂದ ಭರತ್ ನನಗೆ ಪರಿಚಯ. ಸಿಂಪಲ್ಲಾಗೊಂದ್....ಸಿನಿಮಾ ಲಾಂಚ್ ಆಗೋಕೆ 20 ದಿನ ಮುಂಚೆ ನಾನು ಭರತ್ ಅವರನ್ನು ಬುಕ್ ಮಾಡಿದ್ದು.

ಬಹುಪರಾಕ್ ಚಿತ್ರದ ಟ್ರೈಲರ್‌ನಲ್ಲಿ ರಕ್ಷಿತ್ ಶೆಟ್ಟಿ ಅವರದ್ದೊಂದು ಗೆಸ್ಟ್ ಅಪಿಯರೆನ್ಸ್ ಇತ್ತು. ಅದಾದ ಮೇಲೆ ನಿಮ್ಮಿಬ್ಬರ ಮಧ್ಯೆ  ಒಂದಿಷ್ಟು ಕಿರಿಕ್ ಆಯ್ತು. ಈಗ ಸಿನಿಮಾದಲ್ಲಿ ರಕ್ಷಿತ್ ಅವರ ಪೋರ್ಷನ್ ಇರುತ್ತಾ ಇಲ್ವಾ?
ಅದಕ್ಕೂ ಸಿನಿಮಾಗೂ ಏನು ಸಂಬಂಧ ಇಲ್ಲ. ಅದು ಪರ್ಸನಲ್ ಜಗಳ. ಅದು ಸಿನಿಮಾದಲ್ಲಿ ರಿಫ್ಲೆಕ್ಟ್ ಆಗಲ್ಲ. ಅವರ ಪೋರ್ಷನ್ ಹಾಗೇ ಇದೆ.

ನಿಮ್ಮ ಮುಂದಿನ ಸಿನಿಮಾ ಶಿವರಾಜ್‌ಕುಮಾರ್ ಅವರ 'ಮನಮೋಹಕ'ನೇ ಆಗಿರುತ್ತಾ ಅಥವಾ ಬೇರೆಯದ್ದಾ?
'ಮನಮೋಹಕ'ನೇ ಆಗಿರುತ್ತೆ. ಆದ್ರೆ ಅದರ ಜೊತೆಗೆ ಒಂದು ಸಣ್ಣ ಬಜೆಟ್‌ನ, ಲವ್‌ಸ್ಟೋರಿ ಇರೋ ಸಿನಿಮಾದ ಯೋಚನೆಯೂ ಇದೆ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!