ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ತೆಲುಗಿನಲ್ಲಿ ಸೀಲೊತ್ತಿದ ಚಂದ್ರು

Lingaraj Badiger
Updated On : 5 Jun 2014, 4:00 am

ಕನ್ನಡ ಸಿನಿಮಾ ಮಾಡೋದು ಇದ್ದೇ ಇರುತ್ತೆ. ಆದರೆ ನಾವ್ಯಾಕೆ ಬೇರೆ ಕಡೆ ನಮ್ಮ ಅದೃಷ್ಠ ಪರೀಕ್ಷೆ ಮಾಡಬಾರದು ಎನ್ನುತ್ತಾ ನಿರ್ದೇಶಕರಿಗೆ ಇಲ್ಲಿ 'ಬೆಲೆ' ಇಲ್ಲ ಎಂಬುದನ್ನು ಹೇಳಿಕೊಳ್ಳುತ್ತಿದ್ದ ನಿರ್ದೇಶಕ ಆರ್. ಚಂದ್ರು ಕಡೆಗೂ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಅವರೀಗ ತೆಲುಗು ಚಿತ್ರರಂಗದಲ್ಲಿ ಒಂದು ಕಾಲನ್ನಿಟ್ಟಿದ್ದಾರೆ. ತಮ್ಮ ತನವನ್ನು ಎಲ್ಲೂ ಬಿಟ್ಟು ಕೊಡಲ್ಲ ಎಂಬಂತೆ ತೆಲುಗು ಚಿತ್ರದ ಪೋಸ್ಟರ್‌ಗಳಲ್ಲೂ ತಮ್ಮ ಸೀಲು ಇರುವಂತೆನೋಡಿಕೊಂಡಿದ್ದಾರೆ ಚಂದ್ರು. ಹಾಗಾಗಿ ಕನ್ನಡದ ಪ್ರಮುಖ ನಿರ್ದೇಶಕರೊಬ್ಬರು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಚಿತ್ರ ನಿರ್ದೇಶನ ಮಾಡುವ ಹಂತಕ್ಕೆ ಬೆಳೆದಂತಾಗಿದೆ.  ಹೌದು. ಆರ್. ಚಂದ್ರು ತಮ್ಮ ಚಾರ್‌ಮಿನಾರ್ ಚಿತ್ರವನ್ನು ತೆಲುಗಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಂಡು ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಹೆಸರು 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ'. ತೆಲುಗಿನ 'ಪ್ರೇಮಕಥಾ ಚಿತ್ರಂ'ನ ಯಶಸ್ವೀ ಜೋಡಿಯಾದ ಸುಧೀರ್ ಬಾಬು ಮತ್ತು ನಂದಿತಾ ಈಗ ಚಂದ್ರು ಅವರ ಈ ಹೊಸ ಚಿತ್ರದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಒಂದಾಗಿದ್ದಾರೆ. ಆಂಧ್ರದ ಮೆಹಬೂಬ್ ನಗರದಲ್ಲಿ ನಡೆಯುವ ಕಥೆ ಹೊಂದಿರುವ ಚಿತ್ರಕ್ಕೆ ಲಗಡಪತಿ ಶ್ರೀಧರ್ ನಿರ್ಮಾಪಕರು. ಕನ್ನಡದ ಚಾರ್‌ಮಿನಾರ್ ಚಿತ್ರಕ್ಕೆ ಸಂಗೀತ ನೀಡಿ ಮಧುರವಾದ ಹಾಡುಗಳನ್ನು ಕೊಟ್ಟು ಹಿಟ್ ಆಗಿದ್ದ ಹರಿ, ಚಾರ್‌ಮಿನಾರ್‌ನ ತೆಲುಗು ಅವತರಣಿಕೆಗೂ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಸದ್ಯಕ್ಕೆ ಆರ್ ಚಂದ್ರು ಅಲ್ಲಿ ಬ್ಯುಸಿಯಾಗಿದ್ದಾರೆ.

-ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement