ಸಿನಿಮಾ ಲೇಖನ

ಡ್ರಾಮಾ ಕ್ವೀನ್ ನಾಪತ್ತೆ?

'ನನಗೆ ಆಗದವರು ಇಂಥ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಅಂತ ಒಂದೇ ಮಾತಿನಲ್ಲಿ ಈ ನಾಪತ್ತೆ ಬ್ರೇಕಿಂಗ್ ನ್ಯೂಸ್‌ಗೆ ಬ್ರೇಕ್ ...

ಗಾಂಧಿನಗರದಲ್ಲಿ ಸದ್ದಿಲ್ಲದೆ ಎರಡು ಪ್ರಕರಣಗಳು ಸಂಭವಿಸಿವೆ. ಒಂದು ನಾಪತ್ತೆಯಾದ ಪ್ರಕರಣವಾದರೆ, ಮತ್ತೊಂದು 'ಪತ್ತೆ'ಗೊಂಡಿರುವ ಕೇಸು. ಈ ಎರಡೂ ಘಟನೆಗಳು ಪೊಲೀಸ್ ಇಲಾಖೆಯ ಕ್ರೈಮ್ ಪುಸ್ತಕದಲ್ಲಿ ದಾಖಲಾಗುವಷ್ಟು ಗಂಭೀರ ಅಲ್ಲದಿದ್ದರೂ,'ಚಿತ್ರಗುಪ್ತ'ರ ವರದಿಗಳಲ್ಲಿ ಜಾಗ ಗಿಟ್ಟಿಸಿಕೊಂಡಿರುವ ಸುದ್ದಿಗಳಂತೂ ಹೌದು. ಇಲ್ಲಿ ನಾಪತ್ತೆ ಕಾಲಂನಲ್ಲಿ ನಟಿ ರಾಧಿಕಾ ಪಂಡಿತ್ ಹೆಸರು ಸೇರಿಕೊಂಡಿದ್ದರೆ, ಪತ್ತೆಯಾದ ಸನ್ನಿವೇಶದಲ್ಲಿ ನಟಿ ಸೌಂದರ್ಯ ಜಯಮಾಲ ಹೆಸರು ದಾಖಲಾಗುತ್ತಿದೆ.


'ನನಗೆ ಆಗದವರು ಇಂಥ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಅಂತ ಒಂದೇ ಮಾತಿನಲ್ಲಿ ಈ ನಾಪತ್ತೆ ಬ್ರೇಕಿಂಗ್ ನ್ಯೂಸ್‌ಗೆ ಬ್ರೇಕ್ ಹಾಕಬಹುದು. ಆದರೆ, ಈಕೆಯ ಕೆರಿಯರ್ ಗ್ರಾಫ್ ನೋಡಿದಾಗ ನಾಪತ್ತೆ ವಿಷಯವನ್ನು ಅವರ ಅಭಿಮಾನಿಗಳು ಒಂಚೂರು ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತೆ. ಅಂದಹಾಗೆ ಇಲ್ಲಿ ಮಾತನಾಡುತ್ತಿರುವುದು ನಟಿ ರಾಧಿಕಾ ಪಂಡಿತ್‌ರ ಕುರಿತು. 'ಡ್ರಾಮಾ' ಕ್ವೀನ್ ಎಲ್ಲಿ? ಎನ್ನುವ ಮಟ್ಟಿಗೆ ರಾಧಿಕಾ ಪಂಡಿತ್ ಸೈಲೆಂಟ್ ಆಗಿರುವುದು ಯಾಕೆ? ಎನ್ನುವ ಪ್ರಶ್ನೆ ಗಾಂಧಿನಗರದಲ್ಲಿ 'ಅಲೆಮಾರಿ'ಯಂತೆ ಓಡಾಡುತ್ತಿದೆ.
 ಒಂದು ರಾಜ್ಯ ಪ್ರಶಸ್ತಿ, ಮೂರು ಫಿಲ್ಮ್ ಫೇರ್ ಅವಾರ್ಡ್‌ಗಳನ್ನು ಗಿಟ್ಟಿಸಿಕೊಂಡು ಅತ್ಯುತ್ತಮ ನಟಿ ಪಟ್ಟ ಧರಿಸಿದ ರಾಧಿಕಾ ಪಂಡಿತ್ ಅಭಿನಯದ ಯಾವ ಚಿತ್ರವೂ ಈ ವರ್ಷ ಬಿಡುಗಡೆಯಾಗಿಲ್ಲ. ಸುಮಂತ್ ಶೈಲೇಂದ್ರ ಬಾಬು ಅಭಿನಯದ 'ದಿಲ್‌ವಾಲ' ಚಿತ್ರದ ನಂತರ ಪಂಡಿತ್‌ಳ ಮತ್ತೊಂದು ಪಾಂಡಿತ್ಯ ಚಿತ್ರ ಬಂದಿಲ್ಲ. ಕಳೆದ ವರ್ಷಕ್ಕೆ ರಾಧಿಕಾಳ ಬಿಡುಗಡೆ ಸಂಭ್ರಮ ಮುಗಿದಿದೆ. 'ಮೊಗ್ಗಿನ ಮನಸ್ಸು' ಚಿತ್ರದ ನಂತರ ತನ್ನ ಕೆರಿಯರ್ ಗ್ರಾಫ್ ಹೆಚ್ಚಿಸಿಕೊಳ್ಳುತ್ತಲೇ ಬಂದ ರಾಧಿಕಾ ಪಂಡಿತ್, ಇಲ್ಲಿವರೆಗೂ 17 ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ಪೈಕಿ ಮೂರು ಚಿತ್ರಗಳು ಬಿಡುಗಡೆಯಾಗಬೇಕಿದೆ. ತೆರೆ ಕಂಡ ಎಲ್ಲ ಚಿತ್ರಗಳೂ ಸೂಪರ್ ಹಿಟ್ ಆಗದಿದ್ದರೂ ಅವರೇಜ್ ಸಕ್ಸಸ್ ಅಂತೂ ಕಂಡಿವೆ. ಆದರೆ, ಪ್ರತಿ ಚಿತ್ರದಲ್ಲೂ ರಾಧಿಕಾ ಪಂಡಿತ್‌ಳ ಅಭಿನಯಕ್ಕೆ ಪ್ರೇಕ್ಷಕರು ಹೆಚ್ಚು ಮಾರ್ಕ್ಸ್ ಹಾಕಿದ್ದಾರೆ.
 ಪ್ರತಿ ಚಿತ್ರದಲ್ಲೂ ಪ್ರೇಕ್ಷಕರಿಂದ ರ್ಯಾಂಕ್ ಹಾಗೂ ಫರ್ಸ್ಟ್ ಕ್ಲಾಸ್ ಸ್ಟೂಡೆಂಟ್ ಎನಿಸಿಕೊಳ್ಳುತ್ತಿದ್ದ ರಾಧಿಕಾ ಪಂಡಿತ್ ಅಭಿನಯದ ಚಿತ್ರಗಳು ಬಿಡುಗಡೆಯಾಗಿ ಹೆಚ್ಚು ಕಮ್ಮಿ ಒಂದು ವರ್ಷ ಮುಗಿಯುತ್ತಿದ್ದರೂ ಮತ್ತೆ ಪ್ರೇಕ್ಷಕರ ಮುಂದೆ ಬರುವ ಭಾಗ್ಯ ಈಕೆಗೆ ಸಿಕ್ಕಿಲ್ಲ. ನಂ.1 ಪಟ್ಟವನ್ನು ಬಹುಬೇಗ ಅಲಂಕರಿಸಿಕೊಂಡಿದ್ದ ರಾಧಿಕಾ, ಚಿತ್ರಮಂದಿರಗಳಿಂದ ಹೀಗೆ ನಾಪತ್ತೆಯಾಗಿರುವುದು ಯಾಕೆ? ಎನ್ನುವ ಕುತೂಹಲ ಸಹಜ. 'ದಿಲ್‌ವಾಲ' ಚಿತ್ರ ಯಶಸ್ಸು ಕಾಣದಿರುವುದೇ ರಾಧಿಕಾ ಪಂಡಿತ್‌ಳ ಬೇಡಿಕೆ ಕುಸಿಯಲು ಕಾರಣವೇ? ಅಥವಾ ನಟ ಯಶ್ ಜೊತೆಗಿನ ಗಾಸಿಪ್‌ಗಳಿಂದ ಈಕೆಗೆ ಮಾರುಕಟ್ಟೆಯ ಬೇಡಿಕೆ ಇಳಿಯಿತೇ? ಗೊತ್ತಿಲ್ಲ. ಹಾಗೆ ನೋಡಿದರೆ 'ಬಹದ್ದೂರ್‌' ಚಿತ್ರ ತೆರೆಕಂಡು ಸಕ್ಸಸ್ ಆಗಿದ್ದರೆ ಶತ ದಿನ ಬಾರಿಸಬೇಕಿತ್ತು. ಆದರೆ, ಆ ಚಿತ್ರದ ಆಡಿಯೋ ಬಿಡುಗಡೆಯೂ ಆಗಿಲ್ಲ. ಇನ್ನು 'ಎಂದೆಂದಿಗೂ' ಚಿತ್ರ ಯಾವ ಹಂತದಲ್ಲಿದೆಯೋ ತಿಳಿಯದು. ಇದರ ನಡುವೆ ಶುರುವಾಗಿರುವ ಜಯಣ್ಣ ಕಂಬೈನ್ಸ್‌ನ 'ಮಿ ಆಂಡ್ ಮಿಸಸ್ ರಾಮಾಚಾರಿ' ಚಿತ್ರ ಕೂಡ ಶೂಟಿಂಗ್ ಸೆಟ್‌ನಲ್ಲಿದೆ. ಒಂದು ಮೂಲದ ಪ್ರಕಾರ ರಾಧಿಕಾ ಪಂಡಿತ್‌ಳಿಗೆ ಈ 'ರಾಮಾಚಾರಿ' ಚಿತ್ರವೇ ಬಿಡುಗಡೆಯ ಭಾಗ್ಯ ಯೋಜನೆ ದಯಪಾಲಿಸಬೇಕು. ಅಲ್ಲಿವರೆಗೂ ರಾಧಿಕಾ ನಾಪತ್ತೆಯಾಗಿರಬೇಕೇ? ಕೇಳೋಣ ಅಂದ್ರೆ ಆಕೆಯ ಫೋನ್ ನಾಟ್ ರೀಚೇಬಲ್.

ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ