ಮಾಸ್ಟರ್ ಲೋಹಿತ್, ಮಂಜುನಾಥ್, ವಿಜಯರಾಘವೇಂದ್ರ, ಆನಂದ್, ಬೇಬಿ ಶಾಮಿಲಿ, ಬೇಬಿ ರೇಖಾ ಮುಂತಾದ ಹಲವು ಬಾಲಕಲಾವಿದರನ್ನು ಕನ್ನಡ ಚಿತ್ರರಂಗ ಕಂಡಿದೆ. ಬಾಲನಟನಟಿಯರನ್ನೇ ಬಳಸಿದ ಅದ್ಭುತ ಕಮರ್ಷಿಯಲ್ ಚಿತ್ರಗಳು ನಮ್ಮಲ್ಲಿ ಬಂದಿವೆ. ಆದರೆ ಆ ತಲೆಮಾರಿನ ಬಾಲನಟರು ಬೆಳೆದು ನಾಯಕ ನಾಯಕಿಯರಾದ ನಂತರ ಅಥವಾ ನೇಪಥ್ಯಕ್ಕೆ ಸರಿದ ನಂತರ ಚಿತ್ರರಂಗದಲ್ಲಿ ಮಕ್ಕಳ ಚಿತ್ರ ಎಂಬುದು ಕೇವಲ ಪ್ರಶಸ್ತಿ ಸಬ್ಸಿಡಿಗೆ ಸೀಮಿತವಾಗಿ ಹೋಯ್ತು. ಬಾಲನಟರಿಗೆ ಕಮರ್ಷಿಯಲ್ ಚಿತ್ರಗಳಲ್ಲಿ ಪಾತ್ರಗಳೇ ಸೃಷ್ಟಿಯಾಗದೇ ಅವಕಾಶಗಳು ಕಮ್ಮಿಯಾಗಿ ಹೋದವು. ಅಪ್ಪಿತಪ್ಪಿ ಪಾತ್ರಗಳಿದ್ದರೂ ಅವುಗಳಲ್ಲಿ ಲವ್ವು ಡವ್ವು ಥರದ ದೊಡ್ಡದೊಡ್ಡ ಮಾತುಗಳೋ, ಡಬಲ್ ಮೀನಿಂಗ್ ಸಂಭಾಷಣೆಗಳೋ ಇದ್ದು , ಮಕ್ಕಳು ತಮ್ಮ ಅಭಿನಯದ ಚಿತ್ರವನ್ನು ತಾವೇ ನೋಡದಂತಾಗಿ ಹೋಯ್ತು. ಅಭಿನಯಕ್ಕೆ ಮಕ್ಕಳನ್ನು ಕಲಿಸಲು ಹಿಂಜರಿಯುವ ಸನ್ನಿವೇಶವೂ ಸೃಷ್ಟಿ ಆಯ್ತು. ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಸಿನಿಮಾ ಬದಲು ಬೇರೆಬೇರೆ ವೇದಿಕೆ ಸೃಷ್ಟಿಯಾದವು. ಆದರೆ ಈಗ ಚಕ್ರ ಮತ್ತೆ ತಿರುಗಿದೆ. ಇದೀಗ ಮತ್ತೆ ಮಕ್ಕಳ ಪ್ರತಿಭೆಗೆ ಬೇಡಿಕೆ ಶುರುವಾಗಿದೆ. ಹೊಸಹೊಸ ಬಾಲಪ್ರತಿಭೆಗಳು ಸಾಧನೆ ಮೆರೆಯುತ್ತಿವೆ.
'ಮರಿತಾರೆ' ಅಂಕಣದಡಿ ಇಂದು ಕಾಣಿಸಿಕೊಳ್ಳುತ್ತಿರುವ ಪ್ರತಿಭೆಯ ಹೆಸರು ಪ್ರಕೃತಿ ಪ್ರಸಾದ್.
ಇದೀಗ ಏಳನೇ ಕ್ಲಾಸ್ ಪರೀಕ್ಷೆಗೆ ರೆಡಿಯಾಗುತ್ತಿರುವ ಈ ಪುಟಾಣಿ ಎರಡು ಚಲನಚಿತ್ರ ರಾಜ್ಯ ಪ್ರಶಸ್ತಿಯ ಒಡತಿ. ಟಿ.ಎನ್ ಸೀತಾರಾಮ್ ಮತ್ತು ಬಿ.ಸುರೇಶ ಗರಡಿಯಲ್ಲಿ ಕಿರುತೆರೆಯಲ್ಲಿ ಪಳಗಿ ಸೈ ಅನಿಸಿಕೊಂಡ ಈಕೆ ಅಭಯಸಿಂಹ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಗುಬ್ಬಚ್ಚಿಗಳು ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾಳೆ.
ಪ್ರಕಾಶ್ ರೈ ನಿರ್ದೇಶನದ ನಾನು ನನ್ನ ಕನಸು, ಬಿ ಸುರೇಶ ನಿರ್ದೇಶನದ ಪುಟ್ಟಕ್ಕನ ಹೈವೆ ಚಿತ್ರದಲ್ಲಿ ನಟಿಸಿ ಗೆದ್ದ ಈ ಕೂಸು, ಹೆಜ್ಜೆಗಳು ಮತ್ತು ಗುಬ್ಬಚ್ಚಿಗಳು ಚಿತ್ರಕ್ಕಾಗಿ ಶ್ರೇಷ್ಠ ಬಾಲನಟಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ಟಿವಿಯಲ್ಲಿ ವಾರ್ತೆ ಓದಿದ್ದೂ ಆಯ್ತು, ಕಾರ್ಯಕ್ರಮ ನಿರೂಪಣೆ ಮಾಡಿದ್ದೂ ಆಯಿತು, ರಂಗಭೂಮಿಗೆ ಕಾಲಿಟ್ಟು ರಬ್ಡಿ ಎಂಬ ನಾಟಕ ಮಾಡಿ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಪಡೆದದ್ದೂ ಆಯ್ತು. ಇದೀಗ ಕಾದಂಬರಿ ಕಣಜ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಕೃತಿ ಜೊತೆಗೆ ಶೂಟಿಂಗ್ ಸ್ಪಾಟಲ್ಲಿ ಒಂದು ಚಿಟ್ಚಾಟ್ ಮಾತುಕತೆ.
ಪ್ರಕೃತಿ.. ಪರೀಕ್ಷೆ ಇಟ್ಕೊಂಡು ಶೂಟಿಂಗ್ ಮಾಡ್ತಾ ಇದ್ದೀಯ?
- ಆ ದಿನದ ಪಾಠ ಆ ದಿನಾನೇ ಓದಿ ಮುಗಿಸ್ತೀನಿ. ಅದಕ್ಕೆ ನಂಗೆ ಪರೀಕ್ಷೆ ಭಯ ಇಲ್ಲ.
ಆದರೂ ಸ್ಕೂಲ್ಗೆ ಚಕ್ಕರ್ ಹಾಕಿ ಶೂಟಿಂಗ್ ಬರ್ತೀಯಲ್ಲ. ತಪ್ಪಲ್ವಾ?
- ಇಲ್ಲ. ತಿಂಗಳಲ್ಲಿ ಆರರಿಂದ ಏಳು ದಿನ ಅಷ್ಟೇ ಶೂಟಿಂಗ್. So ಸ್ಕೂಲಲ್ಲಿ ಪರ್ಮಿಶನ್ ಕೊಡ್ತಾರೆ.
ಹೋಂ ವರ್ಕ್ ಎಲ್ಲ ಇದ್ರೆ ಶೂಟಿಂಗ್ ಸ್ಪಾಟಿಗೆ ತಂದು ಮಾಡ್ಕೊತೀಯಾ?
- ಇಲ್ಲಪ್ಪಾ... ಹೋಂ ವರ್ಕ್ ಏನಿದ್ರೂ ಹೋಮಲ್ಲಿ.
ಸ್ಕೂಲಲ್ಲಿ ಎಲ್ರೂ ನಿನ್ನನ್ನ ಸ್ಟಾರ್ ಥರ ನೋಡ್ತಾರಾ?
- ಹೂಂ. ಕೆಲವರು ಹಾಗೆ ಟ್ರೀಟ್ ಮಾಡ್ತಾರೆ. ಆದರೆ ನಾನು ಅವ್ರಿಗೆ ಫ್ರೆಂಡ್ ಅಗಿಬಿಡ್ತೀನಿ. ಆಗ ನಾರ್ಮಲ್ ಆಗ್ತಾರೆ.
ನಿನ್ನ ಫ್ರೆಂಡ್ಸ್ ಎಲ್ಲ ನಿನ್ನ ಸೀರಿಯಲ್ಸ್ ಮತ್ತು ಸಿನಿಮಾ ನೋಡ್ತಾರಾ?
- ಕೆಲವರು ನಾನು ಬಂದ್ರೆ ಮಾತ್ರ ನೋಡ್ತಾರೆ. ಮರುದಿನ ನಾ ಅಲ್ಲಿ ಹೇಳಿದ ಡೈಲಾಗ್ ಇಲ್ಲಿ ಅವ್ರು ಹೇಳಿ ರೇಗಿಸ್ತಾರೆ.
ನಿಮ್ಮ ಮಿಸ್ ನಿನ್ನ ಸೀರಿಯಲ್ ನೋಡಿ ಕಮೆಂಟ್ ಮಾಡ್ತಾರಾ?
- ಅಪರೂಪಕ್ಕೆ ಯಾವತ್ತಾದರೂ ನೋಡಿರ್ತಾರೆ. ಆಗೆಲ್ಲ ಹೊಗಳ್ತಾರೆ.
ಎಕ್ಸಾಮಲ್ಲಿ ಕಮ್ಮಿ ಮಾರ್ಕ್ಸ್ ತಗೊಂಡ್ರೆ 'ನಿಂಗೆ ಓದೋ ಕಡೆ ಗಮನ ಕಮ್ಮಿ ಆಯಿತು ಆ್ಯಕ್ಟಿಂಗ್ ಕಡೆ ಜಾಸ್ತಿ ಆಯಿತು' ಅಂತ ಬಯ್ದಿದ್ದು ಉಂಟಾ?
- ಹಾಗೆ ಬಯ್ಯೋಕೆ ಅವಕಾಶನೇ ಕೊಟ್ಟಿಲ್ಲ ನಾನು. ನಾನು 95 ಪರ್ಸೆಂಟ್ಗಿಂತ ಕಮ್ಮಿ ಮಾರ್ಕ್ಸ್ ತಗೊಂಡೇ ಇಲ್ಲವಲ್ಲ.
ಓದೋದು.. ಶೂಟಿಂಗು ಅಂತ ನಿಂಗೆ ಫ್ರೆಂಡ್ಸ್ ಜೊತೆ ಆಟ ಆಡೋಕೆ ಅಪ್ಪ ಅಮ್ಮ ಜೊತೆ ಇರೋಕೆ ಟೈಮ್ ಸಿಗುತ್ತಾ?
- ಓಹೋ ಸಿಗತ್ತೆ ನಾನು ದಿನಾ ನನ್ನ ಮನೆ ಹತ್ರ ಇರೋ ನನ್ ಗ್ಯಾಂಗ್ ಕಟ್ಕೊಂಡು ಆಟ ಆಡ್ತೀನಿ. ಅಪ್ಪನ ಮೊಬೈಲ್ ತಗೊಂಡು ಕ್ಯಾಂಡಿ ಕ್ರಶ್ ಆಡ್ತೀನಿ.
ಯಾರು ನಿನ್ನ ಫೇವರಿಟ್ ನಟ ?
ನಟಿ?
ಫೇವರಿಟ್ ಫಿಲ್ಮ್?
ಅದು ಬಿಟ್ಟು?
- ಅನಿಮೇಟೆಡ್ ಫಿಲಂಸ್ ಎಲ್ಲ ನನಗಿಷ್ಟ.
ಎಷ್ಟ್ ಭಾಷೆ ಬರತ್ತೆ ನಿಂಗೆ?
- ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ. ನಾಲ್ಕು ಭಾಷೆ .
ನೀನು ಮುಂದಿನ ವರ್ಷದಿಂದ ಹೈಸ್ಕೂಲ್ . ನಿನ್ನ ವಯಸ್ಸಿಗೆ ಸುಧಾರಾಣಿ ಶಿವಣ್ಣನಿಗೆ ಹೀರೋಯಿನ್ ಆಗಿದ್ಲು. ನೀನಿನ್ನೂ ಚೈಲ್ಡ್ ಆರ್ಟಿಸ್ಟ್ ಆಗಿದೀಯಲ್ಲ. ಹೀರೋಯಿನ್ ಆಗೊಲ್ವಾ?
- ಇಲ್ಲಪ್ಪ. ಇನ್ನು ಹೆಚ್ಚು ಗಮನ ಓದೋ ಕಡೆಗೆ. ಚೆಂದ ಓದಿ ಆಮೇಲೆ ಸಿನಿಮಾ ಕಡೆಗೆ. ಸಮಯ ಸಿಕ್ಕಾಗ ಮಾತ್ರ ನಟನೆ.
ಸರಿ ಪುಟ್ಟ... ಎಕ್ಸಾಮ್ ಚೆನ್ನಾಗಿ ಮಾಡು. ಬಾಲನಟಿ ಯಾಗಿ ಇನ್ನೊಂದು ಫಿಲ್ಮ್ ಮಾಡಿ ಬೇಗ ಹ್ಯಾಟ್ರಿಕ್ ಅವಾರ್ಡ್ ತಗೋ. ಆಲ್ ದ ಬೆಸ್ಟ್.
- ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics