ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಹೆಂಡತಿ ಪ್ರಾಣ ಹಿಂಡುತಿ ಚಿತ್ರಕ್ಕೆ ಮುಹೂರ್ತ

Mainashree
Updated On : 15 May 2014, 12:42 pm

ಸಂಸಾರದಲ್ಲಿ ಪತಿ-ಪತ್ನಿಯರ ನಡುವೆ ಸಾಮರಸ್ಯವಿಲದೇ ಹೋದಾಗ, ಒತ್ತಡ ಜಾಸ್ತಿಯಾದಾಗ ಏನೇನೆಲ್ಲಾ ಆಗಬಹುದು ಎಂಬ ಕಲ್ಪನೆಯೊಂದಿಗೆ ನಿರ್ದೇಶಕ ಎಸ್.ಎ.ಭಾರಧ್ಯಾಜ್ ಹಾಸ್ಯಭರಿತವಾಗಿ ನಿರೂಪಿಸ ಹೊರಟಿರುವ ಚಿತ್ರ ಹೆಂಡತಿ ಪ್ರಾಣ ಹೆಂಡತಿ.  ನಿರ್ದೇಶಕರು ಕಳೆದ ವಾರ ವಿಜಯನಗರ ಮನೆಯೊಂದರಲ್ಲಿ ಈ ಚಿತ್ರದ ಮೂಹೂರ್ತಮಾಡಿ ಈಗಾಗಲೇ 5 ದಿನಗಳ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರೆ. ನಾಯಕ ಭರತ್ ಭೂಷಣ್ ತನ್ನ ಮಗನಿಗೆ ಶಾಲೆಗೆ ಸೇರಿಸಲು ಹಣವಿಲ್ಲದಿದ್ದಾಗ ತನ್ನ ತಂದೆಗೆ ಬರುವ ಪೆನ್ಷನ್ ಹಣ ಪಡೆದು ಸೇರಿಸುತ್ತಾನೆ. ಇದಲ್ಲದೆ ಅನೇಕ ಹಾಸ್ಯಮಯ ದೃಶ್ಯಗಳನ್ನು ಸಹ ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರಕ್ಕೆ ಎಲ್.ಎನ್.ಗೂಚಿ ಸಂಗೀತ, ಜಾನ್ ಛಾಯಾಗ್ರಹಣ, ಭರತ್ ಭೂಷಣ್ ಸಂಭಾಷಣೆ, ಇದೆ.  ಭರತ್ಭೂಷಣ್, ನಚಿಕೇತ್, ಹಂಶಿ, ಓಂಪ್ರಕಾಶ್, ಮನ್‌ದೀಪ್‌ರಾಯ್, ಕವಿತಾಶೆಟ್ಟಿ, ಎಂ.ಆರ್.ಎಸ್.ಅಯ್ಯಂಗಾರ್, ಶ್ರೀಚರಣ್, ಕುಂಬೇಶ್, ತೇಜಸ್ ಭೂಷಣ್ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement