ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

'ಶಹಬಾಸ್ ನಾಯ್ಡು' ಆಗೋದಕ್ಕೆ ತಯಾರಿ ನಡೆಸಿದ್ದಾರೆ ಕಮಲ್ ಹಾಸನ್

ಬಹುಬಾಷ ನಟ ಹಾಗೂ ನಿರ್ಮಾಪಕ ಕಮಲ್ ಹಾಸನ್ ಮೂರು ಭಾಷೆಗಳಲ್ಲಿ ಶಹಬಾಸ್ ನಾಯ್ಡು ಎಂಬ...

ಕಮಲ ಹಾಸನ್
Shilpa D
Updated On : 29 Apr 2016, 12:22 pm

ಚೆನ್ನೈ: ಬಹುಬಾಷ ನಟ ಹಾಗೂ ನಿರ್ಮಾಪಕ ಕಮಲ್ ಹಾಸನ್  ಮೂರು ಭಾಷೆಗಳಲ್ಲಿ ಶಹಬಾಸ್ ನಾಯ್ಡು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹೊರಹಾಕಿರುವ ಕಮಲ್ ಹಾಸನ್ ಶಹಬಾಸ್ ನಾಯ್ಡು ಚಿತ್ರವನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.

ಟಿ.ಕೆ ರಾಜೀವ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಮೂರು ಭಾಷೆಗಳಲ್ಲೂ ಏಕಕಾಲದಲ್ಲಿ ಚಿತ್ರೀಕರಣ ನಡೆಸುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ. ಇನ್ನು ತೆಲುಗು ಮತ್ತು ತಮಿಳಿನಲ್ಲಿ ಶಹಬಾಸ್ ನಾಯ್ಡು ಎಂಬ ಟೈಟಲ್ ಇದ್ದು ಹಿಂದಿಗೆ ಶಹಬಾಸ್ ಕುಂಡು ಎಂದು ಹೆಸರಿಡಲಾಗಿದೆ.

ರಾಜ್ ಕಮಲ್ ಇಂಟರ್ ನ್ಯಾಷನಲ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಕಮಲ ಹಾಸನ್ಸ ರಮ್ಯಾ ಕೃಷ್ಣ, ಶೃತಿ ಹಾಸನ್ ಹಾಗೂ ಬ್ರಹ್ಮಾನಂದಂ ಮುಖ್ಯ ಭೂಮಿಕೆಯಲ್ಲಿದ್ದಾರೆ.

2008 ರಲ್ಲಿ ತೆರೆಕಂಡ ದಶವತಾರಂ ಕಾಮಿಡಿ ಆಕ್ಷನ್ ಚಿತ್ರದಂತೆ ಶಹಬಾಸ್ ನಾಯ್ಡು ಚಿತ್ರದಲ್ಲೂ ಕಮಲ್ ಹಾಸನ್ ಮತ್ತು ತೆಲುಗು ಹಾಸ್ಯನಟ ಬ್ರಹ್ಮಾನಂದಂ ಮತ್ತೆ ತಮ್ಮ ಕಾಮಿಡಿ ಕಮಾಲ್ ತೋರಲಿದ್ದಾರೆ.  ಮೇ 2ನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಇಳಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments