ಲಕ್ಕಿ ಅಲಿ 
ಸಿನಿಮಾ ಸುದ್ದಿ

ಲಕ್ಕಿ ಅಲಿ ದಾಳಿಗೆ ಸಂಚು ರೂಪಿಸಿದವರ ಬಂಧನ

ಬಾಲಿವುಡ್ ನಟ, ಗಾಯಕ ಲಕ್ಕಿ ಅಲಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ...

ಬೆಂಗಳೂರು: ಬಾಲಿವುಡ್ ನಟ, ಗಾಯಕ ಲಕ್ಕಿ ಅಲಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಎಂಟು ದುಷ್ಕರ್ಮಿಗಳನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ತಡ ರಾತ್ರಿ ಯಲಹಂಕ ಸಮೀಪದ ಲಕ್ಕಿ ಅಲಿ ಅವರ ಫಾರ್ಮ್‌ಹೌಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಇವರನ್ನು ಬಂಧಿಸಲಾಗಿದೆ. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ರೌಡಿಗಳಾದ ಹರೀಶ್, ನವೀನ್, ಅವರ 6 ಸಹಚರರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಮುನ್ನಾ, ಆಸಿಫ್ ಅಲಿ ಎಂಬುವರ ಸೂಚನೆ ಮೇರೆಗೆ ಲಕ್ಕಿ ಅಲಿ ಅವರ ಮೇಲೆ ದಾಳಿ ನಡೆಸಲು ಬಂದಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಆದರೆ, ಭಾನುವಾರ ಕಾರ್ಯಕ್ರಮವೊಂದರರಲ್ಲಿ ಭಾಗವಹಿಸಲು ಲಕ್ಕಿ ಅಲ್ಲಿ ಅವರು ದೆಹಲಿಗೆ ತೆರಳಿದ್ದು, ಫಾರ್ಮ್‌ಹೌಸ್‌ನಲ್ಲಿರಲಿಲ್ಲ.

ಯಲಹಂಕ ಸಮೀಪದ ಲಕ್ಕಿ ಅಲಿ ಅವರ ಪಿತ್ರಾರ್ಜಿತ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ನಡೆಯುತ್ತಿದೆ. ಕಾನೂನು ಸಮರದಲ್ಲಿ ಲಕ್ಕಿ ಅಲಿ ಅವರು ಯಶಸ್ಸು ಗಳಿಸುವುದನ್ನು ತಪ್ಪಿಸಿ, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿರುವವರೇ ಈ ದಾಳಿ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಈ ಹಿಂದೆ ಒಮ್ಮೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದ ಲಕ್ಕಿ ಅಲಿ, ತಮ್ಮ ಜೀವಕ್ಕೆ ಬೆದರಿಕೆ ಇರುವುದರಿಂದ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ತನಿಖೆ ವೇಳೆ ದುಷ್ಕರ್ಮಿಗಳ ಉದ್ದೇಶ ಏನೆಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, 'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ಹಾರ್ಮುಜ್ ನಿಂದ ದೇಶಕ್ಕೆ ತೈಲ ಹಡಗುಗಳ ಸುಗಮ ಸಂಚಾರ: ಇರಾನ್ ನ ಭಾರತ ಒಪ್ಪಿಸಿದ್ದು ಹೇಗೆ?: ಜೈಶಂಕರ್ ಬಿಚ್ಚಿಟ್ಟ ಮಾಹಿತಿ ಇದು...

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

ಗಡುವು ಮೀರಿ 5 ತಿಂಗಳಾದರೂ ಮುಕ್ತಾಯಗೊಳ್ಳದ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನವೀಕರಣ ಕಾಮಗಾರಿ!

ರಾಜ್ಯಸಭೆಗೆ 26 ಮಂದಿ ಅವಿರೋಧ ಆಯ್ಕೆ: 3ರಾಜ್ಯಗಳಲ್ಲಿ ಬಿಗ್ ಫೈಟ್; ಮೇಲ್ಮನೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ!

SCROLL FOR NEXT