ಬಾನಾಡಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

`ಬಾನಾಡಿ’ ಮತ್ತು `ಗೋಲ್ ಗೊಂಬಜ್’ಈ ವಾರ ತೆರೆಗೆ

ಧೃತಿ ಸಿನೆಮಾ ಲಾಂಛನದಲ್ಲಿ ಎಂ.ನಾಗರಾಜು ಅವರು ನಿರ್ಮಿಸಿರುವ `ಬಾನಾಡಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.    ನಾಗರಾಜ ಕೋಟೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ರಾಮನಗರ, ಶ್ರೀಂಗಪಟ್ಟಣ, ಚನ್ನಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

 ಕಾರ್ತಿಕ್‍ಶರ್ಮ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಸನ ಮಂಜು ಸಹ ನಿರ್ದೇಶನವಿರುವ `ಬಾನಾಡಿ’ಗೆ ಸಭಾಕುಮಾರ್ ಅವರ ಛಾಯಾಗ್ರಹಣವಿದೆ. ನಾಗರಾಜ ಕೋಟೆ ಅವರ `ಉಸಿರು’ ಕೃತಿ ಆಧಾರಿತವಾಗಿರುವ ಈ ಚಿತ್ರಕ್ಕೆ ಗೂಡಿನಿಂದ ಗಗನದೆಡೆಗೆ ಎಂಬ ಅಡಿಬರಹವಿದೆ.  ದತ್ತಣ್ಣ, ರಾಜೇಶ್, ಅಭಿನಯ, ಮಾಸ್ಟರ್ ಪ್ರಪುಲ್ ವಿಶ್ವಕರ್ಮ, ಕುಮಾರಿ ಧೃತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

`ಗೋಲ್ ಗೊಂಬಜ್’
ವಿ.ವಿ.ಎಂ ಸಿನಿಮಾಸ್ ಸಂಸ್ಥೆ ಲಾಂಛನದಲ್ಲಿ ಮುತ್ತುರಾಜ್ ಅವರು ನಿರ್ಮಿಸಿರುವ `ಗೋಲ್ ಗುಂಬಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಧನುಷ್ ಈ ಚಿತ್ರದ ನಯಕನಾಗೂ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿರುವ ಧನುಷ್ ಸಂಗೀತವನ್ನು ನೀಡಿದ್ದಾರೆ. ಕೆ.ಡಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನುಷ್, ಪೂರ್ಣಿಮಾ, ನಕುಲ್, ಶಿವು, ರಾಜು, ವೆಂಕಟೇಶಪ್ಪ, ಲಚ್ಚಿ, ಅನಿಲ್ ಮುಂತಾದವರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT