ಪ್ರಕಾಶ್ ಕುಮಾರ್ 
ಸಿನಿಮಾ ಸುದ್ದಿ

ದಯಾಮರಣದ ಬಗ್ಗೆ ಲಂಬಾಣಿ ಚಿತ್ರ 'ಆಂಸು' (ಕಣ್ಣೀರು)

'ದಯಾಮರಣ' ಈಗ ಪ್ರಪಂಚದಾದ್ಯಂತ ಬಹು ಚರ್ಚಿತವಾಗುತ್ತಿರುವ ವಿಷಯ. ಇದೇ ಅಂಶವನ್ನಿಟ್ಟುಕೊಂಡು ಈಗ ಲಂಬಾಣಿ ಭಾಷೆಯಲ್ಲಿ 'ಆಂಸು' (ಕಣ್ಣೀರು) ಎಂಬ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ. ಈ ಹಿಂದೆ ಓಂ ಪ್ರಕಾಶ್ ನಾಯಕ್ ಆಗಿ ಹಲವಾರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದ ಪ್ರಕಾಶ್ ಕುಮಾರ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ತನ್ನ ಅಂತಿಮ ದಿನಗಳನ್ನು ಎದುರು ನೋಡುತ್ತಿರುವ ವೃದ್ಧ ತಂದೆಯ ನೋವು ವೇದನೆಯನ್ನು ನೋಡಲಾಗದೆ ತಳಮಳಿಸುವ ಮಗನ ಪಾತ್ರವನ್ನು ಪ್ರಕಾಶ್ ಕುಮಾರ್ ನಿರ್ವಹಿಸಿದ್ದಾರೆ.

ಹಿರಿಯ ವಿತರಕ 82 ವರ್ಷದ ಶಾಂತಾರಾಂ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಗಂಗಾವತಿ ಜಿಲ್ಲೆಯ ಚಿರ್ಚಿನಗುಡ್ಡ ತಾಂಡಾವೊಂದರಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.

ಮಹದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಟಿ.ಲಲಿತಾ ನಾಯಕ್ ಅರ್ಪಿಸುವ ಈ ಚಿತ್ರಕ್ಕೆ ತರ್ಜುನ್, ಪ್ರಕಾಶ್ ಕುಮಾರ್, ಛಾಯಾಗ್ರಹಣ, ಕ್ರೇಜಿಬಾಯ್ಸ್ ತಂಡದ ಸಂಗೀತ ಸಂಯೋಜನೆ, ಶಿವಕುಮಾರ್ ಸ್ವಾಮಿ ಸಂಕಲನವಿದೆ. ಪ್ರಕಾಶ್ ಕುಮಾರ್, ಜ್ಯೋತಿ, ಶಾಂತರಾಂ, ಶಿವಕುಮಾರ್, ಸಂತೋಷ್ ಮೇದಪ್ಪ, ರೂಪಸಿಂಗ್ ಬಿಜಾಪುರ, ಮೋಹನ್, ಮಾ. ಅಬ್ದುಲ್ ತಾರಾಬಳಗದಲ್ಲಿದ್ದಾರೆ. ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ