ಸಿನಿಮಾ ಸುದ್ದಿ

ಹಿರಿಯ ಛಾಯಾಗ್ರಾಹಕ ಜಾನಕಿರಾಮ್ ನಿಧನ

Srinivasamurthy VN

ಹೈದರಾಬಾದ್: ಹಿರಿಯ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕ ಜಾನಿಕಿರಾಮ್ (89 ವರ್ಷ)ಅವರು ಬುಧವಾರ ನಿಧನರಾಗಿದ್ದು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಜಾನಿಕಿರಾಮ್ ಅವರನ್ನು ಇದೇ ಡಿಸೆಂಬರ್ 5ರಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದ ಜಾನಕಿರಾಮ್ ಅವರನ್ನು ವೈದ್ಯರು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದರು. ಮತ್ತೊಂದು ಮೂಲಗಳ ಪ್ರಕಾರ ಜಾನಕಿರಾಮ್ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಕೋಮಾ ಸ್ಥಿತಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಜಾನಕಿರಾಮ್ ಅವರು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದ ಜಾನಕಿರಾಮ್ ಅವರು, ಮಾನವ ದಾನವ, ಹಿಮಘಟ್ಟ, ಪೋಲಿ ಹುಡುಗ, ಕಾಸಿದ್ರೆ ಕೈಲಾಸ, ಅಜ್ಞಾತವಾಸ, ಬಲು ಅಪರೂಪ ನಮ್ ಜೋಡಿ ಹಾಗೂ ಸೆಂಟ್ರಲ್ ಜೈಲ್‌ನಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದರು. 80ರ ದಶಕದ ಯಶಸ್ವಿ ಛಾಯಾಗ್ರಾಹಕರ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವ ಜಾನಕಿರಾಮ್ ಅವರ ನಿಧನದಿಂದಾಗಿ ಚಿತ್ರರಂಗ ಆಘಾತಕ್ಕೊಳಗಾಗಿದ್ದು, ಚಿತ್ರರಂಗದ ವಿವಿಧ ಗಣ್ಯರು ಅವರ ಆತ್ಮಕ್ಕೆ ಶಾಂತಿಕೋರಿದ್ದಾರೆ.

SCROLL FOR NEXT