ನಾಯಕ ನಟ ಅಜೇಯ್ ರಾವ್ 
ಸಿನಿಮಾ ಸುದ್ದಿ

ಅಜೇಯ್ ರಾವ್ ಗಿಂದು ಕಂಕಣಭಾಗ್ಯ

ಸಾಂಡಲ್ವುಡ್ ನಾಯಕ ನಟ ಅಜೇಯ್ ರಾವ್ ಅವರ ಮದುವೆ ಕೊಪ್ಪಳ ತಾಲೂಕಿನ...

ಕೊಪ್ಪಳ: ಸಾಂಡಲ್ ವುಡ್ ನಾಯಕ ನಟ ಅಜೇಯ್ ರಾವ್ ಅವರ ಮದುವೆ ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ ಇಂದು ಸರಳವಾಗಿ ನಡೆಯಲಿದೆ.

ಮದುವೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಪೊಲೀಸ್ ಬಂದೋಬಸ್ತ್ ನೆರವು ಪಡೆಯಲಾಗಿದೆ. ಪ್ರೀತಿಸಿ ಕುಟುಂಬದ ಸಮ್ಮತಿ ಪಡೆದು ಮದುವೆಯಾಗುತ್ತಿರುವುದು ವಿಶೇಷ. ಹುಲಿಗೆಮ್ಮ ದೇವಸ್ಥಾನದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬೆಳಿಗ್ಗೆ 10 ರಿಂದ 10.30ರ ಮುಹೂರ್ತದಲ್ಲಿ ಮದುವೆ ನಡೆಯಲಿದೆ.

ವಧುವಿನ ಹೆಸರನ್ನು ಗೌಪ್ಯವಾಗಿ ಇಡಲಾಗಿದ್ದು, ಹೊಸಪೇಟೆ ಮೂಲದ ಎಂಜಿನಿಯರ್ ಒಬ್ಬರ ಮಗಳು ಎಂದು ಹೇಳಲಾಗುತ್ತಿದೆ. ಡಿ.20 ರಂದು ಬೆಂಗಳೂರಿನಲ್ಲಿ ಆರತಕ್ಷತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಅವರೇ ನಟಿಸಿರುವ ಜೈ ಬಜರಂಗ ಬಲಿ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಲಿದೆ. ಅಜೇಯ್ ಹೊಸಪೇಟೆಯವರು.

ಈ ಕುರಿತಂತೆ ದೇವಸ್ಥಾನ ಆಡಳಿತ ಮಂಡಳಿ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದು, ಮುನಿರಾಬಾದ್ ನಲ್ಲಿ ಈಗಾಗಲೇ ಒಂದು ಕೆಎಸ್ಆರ್ ಪಿ ತುಕಡಿ ಹಾಗೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುಂಬಾ ಲೇಟ್ ಆಯಿತು': ಇರಾನ್​ ಮಾತುಕತೆ ಪ್ರಸ್ತಾಪಕ್ಕೆ ಟ್ರಂಪ್ ತಿರುಗೇಟು

ಯುದ್ಧದಲ್ಲಿ ಭಾಗಿಯಾಗದಂತೆ ಯುರೋಪಿಯನ್ ದೇಶಗಳಿಗೆ ಇರಾನ್ ಎಚ್ಚರಿಕೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ IPL ಫ್ರಾಂಚೈಸಿಗಳು!

ಅಮೆರಿಕ ದಾಳಿಯಿಂದ ಇರಾನ್‌ನ ನಟಾಂಜ್ ಪರಮಾಣು ಸ್ಥಾವರಕ್ಕೆ ಹಾನಿ: ದೃಢಪಡಿಸಿದ IAEA

'ಅವರು ಒಬ್ಬ ಅನುಭವಿ ವ್ಯಕ್ತಿ ಎಂದು ಭಾವಿಸಿದ್ದೆ': ಕುಮಾರಸ್ವಾಮಿಗೆ ಡಿ.ಕೆ ಶಿವಕುಮಾರ್ ಟಾಂಗ್

SCROLL FOR NEXT