ಸಿನಿಮಾ ಸುದ್ದಿ

ಮಸ್ತ್ ಮಸ್ತ್ ಗೋವಿಂದಾ

Vishwanath S

ನಿಮ್ಮ ಫೇವರಿಟ್ ಕೋಸ್ಟಾರ್ ಯಾರು? ಎಂದು ಕೇಳಿದರೆ 'ಗೋವಿಂದಾ' ಎಂದು ಯಾವ ವೇದಿಕೆಯಲ್ಲಿ ಬೇಕಾದರೂ ಹೇಳಬಲ್ಲೆ. ಇದು ಅವರ ಹುಟ್ಟುಹಬ್ಬದ ಸಂದರ್ಭ ಅನ್ನೋ ಕಾರಣಕ್ಕೆ ಈ ಮಾತು ಹೇಳ್ತಾ ಇಲ್ಲ. ನಾನು ಅವರೊಂದಿಗೆ ಆರು ಚಿತ್ರಗಳಲ್ಲಿ ನಟಿಸಿದ್ದೇನೆ.

ಅವರ ನಟನೆ, ನೃತ್ಯ, ಎನರ್ಜಿ ನೋಡಿ ದಂಗಾಗಿದ್ದೇನೆ. ಈಗಲೂ ಅವರಿಗೆ 51 ವರ್ಷ ಅಂದರೆ ನಂಬಲಾಗುತ್ತಿಲ್ಲ. ಅವರ ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಗೋವಿಂದಾರ ಎನರ್ಜಿ, ಉತ್ಸಾಹ ಮತ್ತು ಪ್ಯಾಶನ್ ಅವಳಲ್ಲಿ ಕಾಣಲು ಬಯಸುತ್ತೇನೆ.

ಹೀಗೆ ಒಂದೇ ಸಮನೆ ಮಾತನಾಡಿದ್ದು ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್. ಗೋವಿಂದಾ ಜೊತೆ ಕುಣಿದಿದ್ದ ದುಲ್ಹೇ ರಾಜಾ ಮತ್ತು ಬಡೇಮಿಯಾ ಛೋಟೇಮಿಯಾ ಚಿತ್ರದ ಹಾಡುಗಳು ಇಂದಿಗೂ ಆಕೆಯ ಫೇವರಿಟ್ ಅಂತೆ.

ಗೋವಿಂದಾ ಜೊತೆ ಇದ್ದರೆ, ಎಂಥವರಿಗೂ ಡ್ಯಾನ್ಸ್ ಬಂದುಬಿಡುತ್ತದೆ ಎನ್ನುವ ರವೀನಾ, ಬೇರೆ ಕೋಸ್ಟಾರ್‌ಗಳೊಂದಿಗೆ ನಟಿಸಲು ಕಷ್ಟ ಪಡುತ್ತಿದ್ದಳಂತೆ. ಆದರೆ ಗೋವಿಂದಾ ಜೊತೆ ಎಂಥ ಕಷ್ಟದ ಸ್ಟೆಪ್ಪಿರುವ ಹಾಡುಗಳೂ ಒಂದೇ ದಿನದಲ್ಲಿ ಶೂಟ್ ಮುಗಿದುಹೋಗುತ್ತಿದ್ದೆಂದು ಗೋವಿಂದಾ ಕಮಾಲ್ ಬಗ್ಗೆ ರವೀನಾ ನೆನಪಿಸಿಕೊಳ್ಳುತ್ತಾಳೆ. ಅಂದಹಾಗೆ ಗೋವಿಂದಾಗೆ 51 ಅಂದ್ರೆ ನೀವು ನಂಬ್ತೀರಾ? ಹಾಗಾದ್ರೆ ರವೀನಾ ಏಜೆಷ್ಟು ಅಂತ ಗೆಸ್ ಮಾಡಿ ನೋಡೋಣ!

SCROLL FOR NEXT