ಇಷಾ ಕೊಪ್ಪೀಕರ್ 
ಸಿನಿಮಾ ಸುದ್ದಿ

ಕುಣಿ ಕುಣಿ ಬಾಣಂತಿ

ಹಳೇ ನಟಿಯರಿಗೂ ಐಟಂ ಸಾಂಗುಗಳಿಗೂ ಆಗಿ ಬರಲ್ಲ. ಯಾಕೆಂದರೆ ಅವರು ಮಾಡ್ತೀನಿ ಅಂದ್ರೂ ಚಾನ್ಸ್ ಕೊಡುವವರು...

ಹಳೇ ನಟಿಯರಿಗೂ ಐಟಂ ಸಾಂಗುಗಳಿಗೂ ಆಗಿ ಬರಲ್ಲ. ಯಾಕೆಂದರೆ ಅವರು ಮಾಡ್ತೀನಿ ಅಂದ್ರೂ ಚಾನ್ಸ್ ಕೊಡುವವರು ಬೇಕಲ್ಲ. ಹಾಗಂತ ಹೊಸ ನಟಿಯರು ಐಟಂ ಸಾಂಗು ಮಾಡಲು ಮುಂದೆ ಬರಬೇಕೆಂದೇನೂ ಇಲ್ಲ. ಆದರೆ ರಮ್ಯಾರಂಥ ಕೆಲವರು ಬಹುಬೇಡಿಕೆಯ ಹಂತದಲ್ಲಿರುವಾಗಲೇ ಒಂದು ಐಟಂಸಾಂಗಿಗೆ ಹೆಜ್ಜೆ ಹಾಕಿ ಡಿಫರೆಂಟ್ ಅನಿಸಿ ಬಿಡುತ್ತಾರೆ.

ಕೆಲವರು ಮಾತ್ರ ಅದ್ಹೇಗೋ  ಚಾರ್ಮ್ ಉಳಿಸಿಕೊಳ್ತಾರೆ. ರಮ್ಯ ಕೃಷ್ಣ, ಸುಮನ್ ರಂಗನಾಥ್ ಥರದವರು. ಅವರ ಸಾಲಿಗೆ ಹೊಸತಾಗಿ ಸೇರುವವಳು ಇಷಾ ಕೊಪ್ಪೀಕರ್.ಈಕೆ ಗೊತ್ತಲ್ಲ? ವಿಷ್ಣು ವರ್ಧನ್ ಜತೆ 'ಸೂರ್ಯವಂಶ' ದಲ್ಲಿ ನಾಯಕಿಯಾಗಿ ನಟಿಸಿದವಳು. ಸುಮಾರು ಹದಿನಾಲ್ಕು ವರ್ಷಗಳ ಗ್ಯಾಪ್‌ನ ಬಳಿಕ ಇಷಾ ಕನ್ನಡಕ್ಕೆ ಮರಳಿದ್ದಾಳೆ.

ಕನ್ನಡ ಚಿತ್ರ ರಸಿಕರಿಗೆ ಇಷಾ ಬಹಳ ಚೆನ್ನಾಗಿ ಪರಿಚಯ ಇರುವ ಹೀರೋಯಿನ್. ಇದೀಗ 'ಲೂಟಿ' ಸಿನಿಮಾದಲ್ಲಿ ಮತ್ತೆ ಬಣ್ಣಹಚ್ಚಿದ್ದಾರೆ. ಕ್ರೇಜಿಸ್ಟಾರ್‌ನ 'ಓ ನನ್ನ ನಲ್ಲೆ'ಯಲ್ಲೂ ನಾಯಕಿಯಾಗಿ ಮಿಂಚಿದ್ದಳು. ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ' ಸಿನಿಮಾವನ್ನು ಮಾಡಿಹೋಗಿದ್ದಳು. ಇದೆಲ್ಲ 14 ವರ್ಷ ಹಿಂದಿನ ಮಾತು. ಈಗ ಲೂಟಿಯಲ್ಲಿ ಐಟಂ ಸಾಂಗಿಗೆ ಹೆಜ್ಜೆ ಹಾಕುವಾಗ ಆಕೆ ಮೂರು ತಿಂಗಳ ಬಾಣಂತಿ!

ಹೌದು, ಇಷಾ ಮೂರು ತಿಂಗಳ ಹಿಂದಷ್ಟೇ  ತಾಯಿಯಾಗಿದ್ದಾಳೆ. ಚಿತ್ರದ ಹಾಡನ್ನು ಮುಗಿಸುವ ಸಲುವಾಗಿ ಬಾಣಂತನವನ್ನೂ ಲೆಕ್ಕಿಸದೆ ಇಷಾ ಹೆಜ್ಜೆ ಹಾಕಿರುವುದು ವಿಶೇಷ. ಹಾಡು  ಕಲರ್‌ಫುಲ್ ಆಗಿ ಮೂಡಿ ಬಂದಿದ್ದು  ಶೀಘ್ರದಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಬಾಣಂತಿಯಾದರೂ ತಮ್ಮ ಸೊಂಟವನ್ನು ಹದಿನಾರರ ಬಾಲೆಯರು ನಾಚುವಂತ ಬಳುಕಿಸಿದ್ದಾರೆ ಅನ್ನೋದು ಆಗಿರುವ, ಆಗಲಿರುವ ಬಾಣಂತಿಯರ ಗಮನಕ್ಕೆ.  ಚಿತ್ರದಲ್ಲಿ  ಅವರದು ಪೊಲೀಸ್ ಆಫೀಸರ್ ಪಾತ್ರ. ಖಳನಟರ ಅಡ್ಡಕ್ಕೆ ಎಂಟ್ರಿಕೊಡುವ ಕಾಲ್ಪನಿಕ ಸಾಂಗ್ ಇದು. ಅಂಡರ್  ಕವರ್ ಕಾಪ್ ಆಗಿ ಬಂದು ಹಾಡಿನಲ್ಲಿ ಹೆಜ್ಜೆ ಹಾಕುವ ಸನ್ನಿವೇಶ ಎನ್ನುತ್ತಾರೆ  ನೃತ್ಯ ಸಂಯೋಜನೆ ಮಾಡಿರುವ ಇಮ್ರಾನ್ ಸರ್ದಾರಿಯಾ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ. ಗಿರೀಶ್ ಕಂಪ್ಲಾಪುರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video