ಸಿನಿಮಾ ಸುದ್ದಿ

ಚಿತ್ರ ನಿರ್ಮಾಣ ಸಹಾಯಕನಾದ ಏಂಜಲೀನ ಜೋಲಿಯ ೧೩ ವರ್ಷದ ಮಗ

Guruprasad Narayana

ಲಂಡನ್: ಹಾಲಿವುಡ್ ದಂಪತಿ ಬ್ರಾಡ್ ಪಿಟ್ ಮತ್ತು ಏಂಜಲೀನ ಅವರ ಹಿರಿಯ ಕುಮಾರ 'ಬೈ ದ ಸೀ' ಸಿನೆಮಾದಲ್ಲಿ ಸಹಾಯಕನಾಗಿ ಕೆಲಸ ಮಾಡಲಿದ್ದಾನೆ ಎಂದು ತಿಳಿದು ಬಂದಿದೆ.

೧೩ ವರ್ಷದ ಬಾಲಕ ಮೆಡ್ಡಾಕ್ಸ್ ನಿರ್ಮಾಣ ಕಾರ್ಯಗಳಲ್ಲಿ ಸಹಾಯಕನಾಗಿ ಕೆಲಸ ಮಾಡಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷ ಬಿಡುಗಡೆಯಾದ 'ಮೆಲೆಫಿಶಿಯಂಟ್' ಚಿತ್ರದ ನಾಯಕ ನಟಿ ಮತ್ತು ನಿರ್ದೇಶಕಿ ಏಂಜಲೀನ ಜೋಲಿ ಈ ವರ್ಷದ ಶುರುವಿನಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾದ 'ಅನ್ ಬ್ರೋಕನ್' ಸಿನೆಮಾ ಸೆಟ್ ನಲ್ಲಿ ತನ್ನ ಮಗನಿಗೆ ಮೆಡ್ಡಾಕ್ಸ್ ನಿಗೆ ಮೊದಲ ಕೆಲಸ ಕೊಟ್ಟಿದ್ದರಂತೆ.

ಮೆಡ್ಡಾಕ್ಸ್ ಸಿಡ್ನಿಯಾ ಸಿನೆಮಾ ಸೆಟ್ಟಿನಲ್ಲಿ ಓಡಾಡಿಕೊಂಡು, ಚಿತ್ರ ನಟರ ಜೊತೆ ಮಾತನಾಡಿಕೊಂಡು ಆಗುಹೋಗುಗಳನ್ನು ವಿಚಾರಿಸುತ್ತಿದ್ದ ದೃಶ್ಯಗಳು ಕಂಡು ಬಂದಿದ್ದವು.

SCROLL FOR NEXT