ಅಮೆರಿಕನ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಶಿಯನ್‌ಳನ್ನು ಸಂತೈಸಲು ದುಬೈನಲ್ಲಿ ಅಭಿಮಾನಿಗಳು ಕ್ಯೂ ನಿಂತಿದ್ದಾರಂತೆ. ಅಷ್ಟಕ್ಕೂ ಅವಳಿಗೆ ಅಪ್ಪಳಿಸಿರುವ ದುಃಖವಾದರೂ ಗೊತ್ತಲ್ಲ...ಅದೇ ರೀ ಆಕೆಗೆ ಅಂದುಕೊಂಡಂತೆ ಆಗಿರುತ್ತಿದ್ದರೆ ಸಲ್ಮಾನ್‌ಖಾನ್ ಬಿಗ್‌ಬಾಸ್‌ನಲ್ಲಿ ಕಿಮ್ ಪಾಲ್ಗೊಳ್ಳಬೇಕಿತ್ತು. ಇದೇ ಬೇಸರದಲ್ಲಿ ಈಕೆ ಟ್ವಿಟರ್ ಮುಂದೆ ಕೂತಿದ್ದಾಳೆ.
ಭಾರತೀಯ ಅಭಿಮಾನಿಗಳಿಗೆ ತಾನು ನಿರಾಳೆಗೊಳಿಸಿರುವ ಬಗ್ಗೆ ಕ್ಷಮೆ ಯಾಚಿಸಿದ್ದಾಳೆ. 'ಚಿಂತೆ ಬಿಡಿ, ಮತ್ತೊಮ್ಮೆ ಭಾರತದ ಭೇಟಿಗೆ ಪ್ರಯತ್ನಿಸುತ್ತೀನಿ' ಅಂತಲೂ ಹೇಳಿದ್ದಾಳೆ. ಸದ್ಯ ದುಬೈ ಪ್ರವಾಸದಲ್ಲಿರುವ ಕಿಮ್‌ಗೆ ಎಲ್ಲಿ ಹೋದರೂ ಈ ದುಃಖ ಕಾಡುತ್ತಿದೆಯಂತೆ. ಅಭಿಮಾನಿ ಆಪ್ತರಿಗೆ ಈಕೆಗೆ ಸಾಂತ್ವನ ಹೇಳುವುದೇ ದೊಡ್ಡ ಕೆಲಸವಾಗಿದೆ. ಭೇಟಿಗೆ ಪ್ರಯತ್ನಿಸುತ್ತೀನಿ' ಅಂತಲೂ ಹೇಳಿದ್ದಾಳೆ. ಸದ್ಯ ದುಬೈ ಪ್ರವಾಸದಲ್ಲಿರುವ ಕಿಮ್‌ಗೆ ಎಲ್ಲಿ ಹೋದರೂ ಈ ದುಃಖ ಕಾಡುತ್ತಿದೆಯಂತೆ. ಅಭಿಮಾನಿ ಆಪ್ತರಿಗೆ ಈಕೆಗೆ ಸಾಂತ್ವಾನ ಹೇಳುವುದೇ ದೊಡ್ಡ ಕೆಲಸವಾಗಿದೆ