ಸಾಧು ಕೋಕಿಲ 
ಸಿನಿಮಾ ಸುದ್ದಿ

ಸಾಧುವಿನ ಹಾದಿಯಲ್ಲಿ

ರಕ್ತಕಣ್ಣೀರು ಚಿತ್ರವನ್ನು ನಿರ್ಮಿಸುವಾಗ ಸ್ವಾಮಿಯೊಬ್ಬರ ಮಾತುಕೇಳಿದ ನಿರ್ಮಾಪಕ ಮುನಿರತ್ನ 'ಕ'ಕಾರ ಮೊದಲಿರಬೇಕೆಂದು ಇವರ ಹೆಸರನ್ನು ಕೋಕಿಲ ಸಾದು ಮಾಡಿಬಿಟ್ಟರು.

ಮೊದಲೇ ರೋಮನ್ ಕ್ಯಾಥಲಿಕ್ ಧರ್ಮಾನುಯಾಯಿಗಳು ಸಾಧು ಸ್ವಭಾವಕ್ಕೆ ಹೆಸರು.

ಅದೇ ವಂಶಜರಾದ ಸಹಾಯಶೀಲನ್ ಬಾಲ್ಯದಲ್ಲಿ ತುಂಬಾನೇ ಮುಗ್ದನಾಗಿದ್ದ. ಅದನ್ನು ಕಂಡ ತಂದೆ ಈತನನ್ನು ಸಾಧು ಎಂದೇ ಕರೆಯುತ್ತಿದ್ದರು. 'ಶ್' ಚಿತ್ರದಲ್ಲಿ ಉಪೇಂದ್ರ ಇವರ ಕೋಗಿಲೆಯಂಥ ಸಂಗೀತ ಪ್ರತಿಭೆ ಕಂಡು 'ಕೋಕಿಲ' ಎಂಬ ಪದವನ್ನು ಜೊತೆಗೆ ಸೇರಿಸಿ ದರು.

ರಕ್ತಕಣ್ಣೀರು ಚಿತ್ರವನ್ನು ನಿರ್ಮಿಸುವಾಗ ಸ್ವಾಮಿಯೊಬ್ಬರ ಮಾತುಕೇಳಿದ ನಿರ್ಮಾಪಕ ಮುನಿರತ್ನ 'ಕ'ಕಾರ ಮೊದಲಿರಬೇಕೆಂದು ಇವರ ಹೆಸರನ್ನು ಕೋಕಿಲ ಸಾದು ಮಾಡಿಬಿಟ್ಟರು. ಚಿತ್ರದ ಯಶಸ್ಸನ್ನು ಕಂಡ ಸ್ವತಃ ಸಾಧು ಕೂಡ ಅದನ್ನೇ ಮುಂದುವರಿಸಿದರು. ಆದರೆ ಆ ಮ್ಯಾಜಿಕ್ ಮತ್ತೆ ಮರುಕಳಿಸದೆ ಹೋದಾಗ ಮತ್ತೆ ಸಾಧು ಕೋಕಿಲರಾಗಿಯೇ ಉಳಿದರು.

ತಾಯಿ ಮಂಗಳಾ ಮೇರಿ ಸಂಗೀತ ನಿರ್ದೇಶಕರಾದ ರಾಜನ್ ನಾಗೇಂದ್ರ ರಂಥ ಮಹಾರಥರ ಬಳಿ ಕೋರಸ್ ಹಾಡುಗಾರ್ತಿಯಾಗಿದ್ದವರು. ತಂದೆ ನಟೇಶನ್ ಅಲ್ಲೇ ವಯೊಲಿನ್ ನುಡಿಸುತ್ತಿದ್ದರು. ದಂಪತಿಯ ಮೂವರು ಮಕ್ಕಳಲ್ಲಿ ಲಯೇಂದ್ರ ಡ್ರಮ್ಮರಾಗಿ, ನಟರಾಗಿ, ಸಂಗೀತ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ. (ಇವರ ಪುತ್ರ ಮ್ಯಾಥ್ಯುಸ್ ಮನು ಕೂಡ ಸಂಗೀತ ನಿರ್ದೇಶಕ ಎಂಬುದು ಗಮನಾರ್ಹ) ಎರಡನೆಯವರಾದ ಸಾಧು ಭಾರತದ ವೇಗದ ಕೀಬೋರ್ಡ್ ಪ್ಲೇಯರ್ಗಳನ್ನು ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ.

ಮೂರನೇಯವರಾದ ಬೆನೆಡಿಕ್ಟ್ ಹಂಸಲೇಖಾರ ವಾದ್ಯದ ತಂಡದಲ್ಲಿ ಗುರುತಿಸಿಕೊಂಡಿದ್ದವರು. ಕಿಡ್ನಿ ವೈಫಲ್ಯದಿಂದ ಮೃತರಾದರು. ತಂಗಿ ಉಷಾ ಕೂಡ ಟ್ರ್ಯಾಕ್ ಸಿಂಗರ್ ಆಗಿ ಜನಪ್ರಿಯರು. ಇಷ್ಟು ಸಂಗೀತ ಸಾಲದೆಂಬಂತೆ ಮೇರಿ ಸಲೀಮ್ ಎಂಬ ಯುವತಿ ಚೆನ್ನಾಗಿ ಹಾಡುತ್ತಾಳೆಂಬ ಕಾರಣದಿಂದಲೇ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಸಾಧು.

ಇವರ ರಿಯ ಪುತ್ರ ಸುರಾಗ್ಗೆ 18 ವರ್ಷ. ಆತನೂ ಸಂಗೀತ ನಿರ್ದೇಶಕನಾಗುವ ಪ್ರಯತ್ನ ನಡೆಸಿದ್ದಾನೆ. ಎರಡನೆಯ ಪುತ್ರ ಸೃಜನ್ಗೂ ಸಂಗೀತದಲ್ಲಿ ಆಸಕ್ತಿ. ಒಟ್ಟು ಸಂಗೀತ ಸಮೃದ್ಧವಾದ ಸಂಸಾರ ಸಮುದ್ರದಲ್ಲಿ ಸಾಧುನದ್ದು ಮಾತ್ರ ಸಹಸ್ರ ಮುಖ. ಮೇಲ್ನೋಟಕ್ಕೆ ಗಾಯಕ, ನಟ, ಸಂಗೀತ ನಿರ್ದೇಶಕ ಮತ್ತು ಸಿನೆಮಾ ನಿರ್ದೇಶಕರಾಗಿ ಗುರುತಿಸಲ್ಪಡುವುದರ ಜೊತೆಗೆ ಅನಧಿಕೃತವಾಗಿ ಸಿನೆಮಾದ ಎಲ್ಲ ಭಾಗದಲ್ಲಿಯೂ ತೊಡಗಿಸಿಕೊಳ್ಳಬಲ್ಲ ಮೇಧಾವಿ.

  • ಹಾಸ್ಯದ ರಸವುಕ್ಕಿಸುವ ನಿಮ್ಮ ನಿರೀಕ್ಷೆಯ ಪಾತ್ರ ಯಾವುದು?
  • ನಿಮ್ಮ ಬಹುಮುಖ ವೃತ್ತಿಗಳಲ್ಲಿ ನಿಮಗೆ ತುಂಬ ಇಷ್ಟವೆನಿಸುವುದು ಯಾವುದು?
  • ಸಂಗೀತ ನಿರ್ದೇಶಕರಾಗಿ ನಿಮಗೆ ಸಿಗಬೇಕಾದ ಪರಿಗಣನೆ ಸಿಕ್ಕಿಲ್ಲ ಅಂತ ಅನಿಸಿದ್ದಿದೆಯಾ?
  • ಇತ್ತೀಚೆಗೆ ನಿರ್ದೇಶಿಸಿದ ಸೂಪರ್ ರಂಗಕ್ಕೆ ನೀವೇ ಸಂಗೀತ ನೀಡಬಹುದಿತ್ತಲ್ಲ?
  • ನೀವು ನಿರ್ದೇಶಿಸುವ ಸಿನೆಮಾಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?
  • ವಿಕಿ ಪಿಡಿಯಾದಲ್ಲಿ ನೀವು ಜನಿಸಿದ್ದು ಲಖ್ನೋದಲ್ಲಿ ಎಂದು ಬರೆಯಲಾಗಿದೆ. ನಿಜವೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT