ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮುಂಬೈ ಮೂಲದ ವರ್ಷಾ ಚಿತ್ರ ನಿರ್ಮಾಣ ಸಂಸ್ಥೆಯ ಮಧ್ಯೆ ಇದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ. ಮದ್ರಾಸ್ ಹೈಕೋರ್ಟ್‍ನಲ್ಲಿ ಒಪ್ಪಂದ ಮಾಡುವ ಮೂಲಕ ಸಮಸ್ಯೆ ಬಗೆಹರಿದಿದ್ದು, ಚಿತ್ರವನ್ನು ಬೇರೆ ಹೆಸರಿನಿಂದ ಬಿಡುಗಡೆಗೊಳಿಸುವುದಾಗಿ ನಿರ್ಮಾಣ
ಸಂಸ್ಥೆ ತಿಳಿಸಿದೆ. `ಮೈ ಹೂ ರಜನಿಕಾಂತ್' ಎಂಬ ಚಿತ್ರದಲ್ಲಿ ತಮ್ಮ ಅನುಮತಿಯಿಲ್ಲದೆ ಹೆಸರು, ವ್ಯಂಗ್ಯ ಚಿತ್ರ ಮತ್ತು ಇತರ ಫೋಟೋಗಳನ್ನು ಬಳಸಲಾಗಿದೆ. ಹೀಗಾಗಿ,
ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ತಮಿಳು ಸೂಪರ್ ಸ್ಟಾರ್ ಮದ್ರಾಸ್ ಹೈಕೋರ್ಟ್‍ಗೆ ಮನವಿ ಮಾಡಿದ್ದರು.