ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸ್ಟಿಲ್ 
ಸಿನಿಮಾ ಸುದ್ದಿ

ಶತಕದ ಸಂಭ್ರಮದಲ್ಲಿ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ

ಸತತ ಗೆಲವುಗಳನ್ನು ಕಾಣುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಯಶಸ್ವಿ 100 ದಿನಗಳನ್ನು ಪೂರೈಸಿದೆ.

ಸತತ ಗೆಲವುಗಳನ್ನು ಕಾಣುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಯಶಸ್ವಿ 100 ದಿನಗಳನ್ನು ಪೂರೈಸಿದೆ.

ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ರಾಮಾಚಾರಿ' ಗಳಿಕೆಯಲ್ಲಿ ಯಶ್ ಅಭಿನಯದ ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಯನ್ನು ಮುರಿದಿದ್ದು, ಶತದಿನೋತ್ಸವ ಪೂರೈಸಿದೆ.

ಚಿತ್ರ ಶತದಿನೋತ್ಸವ ಕಾಣುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಯಶ್, ರಾಮಚಾರಿ ಚಿತ್ರಕಥೆ ಕೇಳಿದಾಗ ಮೊದ ಮೊದಲು ಹಳತು ಅನಿಸಿತ್ತು. ಆದರೂ ನಿರ್ದೇಶಕರ ಬಯಕೆಯಂತೆ ಚಿತ್ರದಲ್ಲಿ ನಟಿಸಿದೆ. ಆದರೆ ಅಭಿಮಾನಿಗಳು ಚಿತ್ರವನ್ನು ಮುಗಿಬಿದ್ದು ನೋಡುತ್ತಿರುವುದನ್ನು ಕಂಡರೆ ಖುಷಿಯಾಗುತ್ತಿದೆ. ರಿಪೀಟ್ ಆಡಿಯನ್ಸ್ ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿರುವುದುರಿಂದ ಚಿತ್ರ ನೂರು ದಿನ ಪೂರೈಸಿದೆ. ಜತೆಗೆ ಚಿತ್ರ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ ಎಂದರು.

ರಾಮಾಚಾರಿ ಚಿತ್ರ ನೂರು ದಿನ ಪೂರೈಸಿದ ನಂತರವೂ ಚಿತ್ರವನ್ನು ಪದೇ ಪದೇ ವೀಕ್ಷಿಸಲು ಜನರು ಕಾತರರಾಗಿರುವ ಸುದ್ದಿಗಳು ಕೇಳಿದ್ದೇನೆ. ಕಥೆ ಎಂತವರಿಗೂ ಹತ್ತಿರವಾಗಿರುವುದರಿಂದ ಈ ಮಟ್ಟದ ಯಶಸ್ಸು ಸಿಗಲು ಕಾರಣವಾಯಿತು ಎಂದರು. ಚಿತ್ರಮಂದಿರಗಳತ ಮುಖ ಮಾಡದೇ ಟಿವಿಗಲಲ್ಲೇ ಮಗ್ನರಾಗಿದ್ದವರನ್ನು ಚಿತ್ರಮಂದಿರಗಳ ಕರೆದುಕೊಂಡು ಬರುವಂತೆ ರಾಮಾಚಾರಿ ಚಿತ್ರ ಮಾಡಿದೆ ಎಂದರು.

ರಾಮಾಚಾರಿ ಚಿತ್ರ ಅದ್ದೂರಿ ಯಶಸ್ಸು ಕಂಡಿದ್ದು, ಈ ಶ್ರೇಯಸ್ಸು ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೆ ಸಲ್ಲುತ್ತದೆ ಎಂದರು.

'ರಾಮಾಚಾರಿ' ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಯಶ್ ಅವರು ವಿಷ್ಣು ಅಭಿಮಾನಿಗಳನ್ನೂ ಸೆಳೆಯುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮನೋಜ್ಞ ಅಭಿನಯವೂ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಬಿಡುಗಡೆಯಾದ ಪ್ರಥಮ ದಿನದಂದೇ 3 ಕೋಟಿ ಕಲೆಕ್ಷನ್ ಗಳಿಸಿ ದಾಖಲೆ ಬರೆದಿದ್ದ 'ರಾಮಾಚಾರಿ' ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರದ ಕಲೆಕ್ಷನ್ ಗೂ ಕೊಂಚ ಹೊಡೆತ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT