ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಗೆ ಈಗ ಹೊಸ ಸೇರ್ಪಡೆ. ಬಾಲಿವುಡ್ ಬಾದಶಾಃ ಶಾರುಕ್ ಖಾನ್ ತಮ್ಮ ಕಿರಿಯ ಮಗ ಅಬ್ರಾಂ ಖಾನ್ ಕೈಯಲ್ಲಿ ಪೊರಕೆ ಹಿಡಿದು ನಿಂತಿರುವ ಚಿತ್ರವನ್ನು ಭಾನುವಾರ ಪೋಸ್ಟ್ ಮಾಡಿ, ಸ್ಚಚ್ಚ ಭಾರತ ಅಭಿಯಾನಕ್ಕೆ ಸೇರಿದ ಅತಿ ಕಿರಿಯ ಎಂದಿದ್ದಾರೆ.
ಈ ಚಿತ್ರದ ಜೊತೆ ಒಂದು ಸಂದೇಶವನ್ನು ಕೂಡ ನೀಡಲಾಗಿದೆ.
ಪೊರಕೆ ಈ ಪೋರನಿಗಿಂತ ದೊಡ್ಡದಾಗಿದ್ದರೂ ಫೋಟೋಗೆ ಮಾತ್ರ ಚೆನ್ನಾಗಿ ಪೋಸ್ ನೀಡಿದ್ದಾನೆ.
ಸ್ವಚ್ಛ ಭಾರತ ಅಭಿಯಾನ ಎಂದು ಟ್ಯಾಗ್ ಮಾಡಲಾಗಿರುವ ಈ ಚಿತ್ರ, 'ಇವನಿಂದ(ಅಬ್ರಾಂ) ಹಿಡಿದು, ಭಾರತದ ಯುವಪಡೆ ಸ್ವಚ್ಛ ಭಾರತದಲ್ಲಿ ನಂಬಿಕೆ ಇಟ್ಟಿದೆ... ಹಸಿರು ಭಾರತ...!!" ಎಂಬ ಸಂದೇಶ ಇದೆ.