ಅಪೂರ್ವ ರೈ 
ಸಿನಿಮಾ ಸುದ್ದಿ

ಹಿಟ್ ವಿಕೆಟ್ ಮೂಲಕ ಅಪೂರ್ವ ಬೆಳ್ಳಿತೆರೆಗೆ ಪಾದಾರ್ಪಣೆ

ಸಂದೀಪ್ ಗೌಡ ನಿರ್ದೇಶನದ, ದಿಂಗತ್ ಮುಖ್ಯಪಾತ್ರದಲ್ಲಿರುವ ಹಿಟ್ ವಿಕೆಟ್ ಚಲನಚಿತ್ರದ ಮೂಲಕ ೧೯ ವರ್ಷದ ಚೆಲುವೆ ಅಪೂರ್ವ ರೈ

ಬೆಂಗಳೂರು: ಸಂದೀಪ್ ಗೌಡ ನಿರ್ದೇಶನದ, ದಿಂಗತ್ ಮುಖ್ಯಪಾತ್ರದಲ್ಲಿರುವ ಹಿಟ್ ವಿಕೆಟ್ ಚಲನಚಿತ್ರದ ಮೂಲಕ ೧೯ ವರ್ಷದ ಚೆಲುವೆ ಅಪೂರ್ವ ರೈ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. "ನಾನು ಮಾಡೆಲ್ ಆಗಬೇಕೆಂದು ಇಷ್ಟಪಟ್ಟಿದ್ದೆ. ೨೦೧೫ ಫೆಮಿನಾ ಮಿಸ್ ಇಂಡಿಯಾದಲ್ಲೂ ಭಾಗವಹಿಸಿದ್ದೆ. ಅಲ್ಲಿ ಸೆಮಿಫೈನಲ್ ವರೆಗೂ ಹೋಗಿದ್ದಿದ್ದರಿಂದ ನನ್ನ ಫೋಟೊ ದಿನಪತ್ರಿಕೆಯಲ್ಲಿ ಬಂದಿತ್ತು. ಹಾಗೆಯೆ ನಟನೆಯ ಪಾಠಗಳನ್ನು ತೆಗೆದುಕೊಳ್ಳುತ್ತಿದೆ, ಇದೇ ಸಮಯದಲ್ಲಿ ನನಗೆ ನಟನೆಯ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ" ಎನ್ನುತ್ತಾರೆ ಅಪೂರ್ವ.

ಏಪ್ರಿಲ್ ೨೭ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು ಅಪೂರ್ವ ಸಹ ನಟರ ಜೊತೆ ಮಾತುಕತೆಯಲ್ಲಿ ತೊಡಗಿದ್ದಾರೆ. "ಇದು ನನ್ನ ಮೊದಲನೆಯ ಚಿತ್ರವಾಗಿರುವುದರಿಂದ, ಚಲನಚಿತ್ರದ ಎಲ್ಲ ನಟರು ಮತ್ತು ತಂತ್ರಜ್ಞರನ್ನು ಭೇಟಿ ಮಾಡುವುದು ಸೂಕ್ತ ಎನಿಸಿತು. ಸಂದೀಪ್ ಬಿಸಿಲೆ ಜೊತೆ ದಿಗಂತ್ ಹಿಂದೆ ನಟಿಸಿದ್ದಾರೆ. ಇದು ಅವರಿಗೆ ಎರಡನೆಯ ಸಿನೆಮಾ. ಹೊಸಬಳಾಗಿ ಎಲ್ಲರೂ ನನಗೆ ಸಹಾಯ ಮಾಡುತ್ತಿದ್ದಾರೆ" ಎನ್ನುತ್ತಾರೆ ಅಪೂರ್ವ.

ಅಪೂರ್ವ ಹೇಳುವ ಹಾಗೆ ಈ ಸಿನೆಮಾ ಕ್ರಿಕೆಟ್ ಮತ್ತು ಪ್ರೀತಿ ಕುರಿತದ್ದು. ಅನಂತ ನಾಗ್ ಅವರ ತಂದೆಯ ಪಾತ್ರ ಮಾಡುತ್ತಿದ್ದಾರೆ. "ನನಗೆ ತಿಳಿದಿರುವ ಹಾಗೆ ನನ್ನ ಪಾತ್ರದ ಚಿತ್ರೀಕರಣ ಬೆಂಗಳೂರು, ಲೇಹ್ ಲಡಾಕ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ನಡೆಯಲಿದೆ" ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT