ಸಿನಿಮಾ ಸುದ್ದಿ

ನಟಿಯಾಗಿ, ನನಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ: ನಟಿ ರೇವತಿ

ಮುಂಬೈ: ನಟಿಯಾಗಿ ತಮಗೆ ಸಿಗುತ್ತಿರುವ ಪಾತ್ರವನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡುತ್ತಿದ್ದ, ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮನ ಗೆದ್ದಿದ್ದ ರೇವತಿಗೆ ಇದೀಗ ತಮಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ವಯಸ್ಸಿಗೆ ತಕ್ಕಂತೆ ನನಗೆ ಪಾತ್ರಗಳು ಸಿಗುತ್ತಿವೆ. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಆದರೆ ಸಿಗುತ್ತಿರುವ ಪಾತ್ರ ಸವಾಲು ಎಂಬ ಭಾವನೆ ಹುಟ್ಟಿಸುತ್ತಿಲ್ಲ. ಎಷ್ಟು ಸಿನಿಮಾ ಮಾಡಿದ್ದೇನೆ ಎಂಬುದಕ್ಕಿಂತ ಪಾತ್ರಗಳ ಮೌಲ್ಯ ಮುಖ್ಯವಾಗುತ್ತದೆ. ಅಂತಹ ಮೌಲ್ಯಯುತ ಪಾತ್ರ ಮಾಡಲು ನನಗೆ ಬಹಳ ಇಷ್ಟ.ಅಂತಹ ಪಾತ್ರಗಳನ್ನು ಹುಡುಕುತ್ತಿರುವುದರಿಂದಲೇ ಇಂದು ನಾನು 2 ವರ್ಷಗಳಿಗೊಮ್ಮೆ 1 ಚಿತ್ರದಲ್ಲಿ ಅಭಿನಯಿಸುತ್ತಿರುವುದು.

ಬಾಲಿವುಡ್ ಕಲ್ಕಿ ಕೊಚ್ಲಿನ್ರ ಮಾರ್ಗರಿಟಾ ಚಿತ್ರದ ಯಶಸ್ಸಿ ಸಂತೋಷದಲ್ಲಿರುವ ರೇವತಿ, ಇದೇ ವೇಳೆ ತಮ್ಮ ಚಿತ್ರದ ಕುರಿತಂತೆ ಮಾತನಾಡಿದ್ದು, ಕಲ್ಕಿ ಕೊಚ್ಲಿನ್ ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವವನ್ನು ನೀಡಿದೆ. ಕಲ್ಕಿ ಚಿತ್ರದಲ್ಲಿ ನಟನೆ ಕಷ್ಟಕರ ಅನಿಸಲಿಲ್ಲ. ಪಾತ್ರದೊಂದಿಗೆ ನಮ್ಮನ್ನು ತೊಡಗಿಸಿಕೊಂಡಾಗ ನಟನೆ ಸಾಧಾರಣವಾಗಿಯೇ ಬಂದುಬಿಡುತ್ತದೆ. ಪ್ರಸ್ತುತ ನನ್ನ ಕೈಯಲ್ಲಿ 2 ಚಿತ್ರಗಳಿವೆ. ಇದರಲ್ಲಿ ಒಂದು ಚಿತ್ರ 45 ವಯಸ್ಸಿನ ಮಹಿಳೆಗೆ ಸಂಬಂಧಿಸಿದ್ದು ಎಂದು ರೇವತಿ ಹೇಳಿದ್ದಾರೆ.

SCROLL FOR NEXT