'ಓ ಕಾದಲ್ ಕಣ್ಮಣಿ' ಚಲನಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ನಾಲ್ಕು ದಿನಗಳಲ್ಲಿ ೧೪ಕೋಟಿ ಬಾಚಿದ 'ಓ ಕಾದಲ್ ಕಣ್ಮಣಿ'

ಪ್ರೇಕ್ಷಕರು ಮತ್ತು ವಿಮರ್ಶಕರ ಮನ್ನಣೆ ಪಡೆದಿರುವ ನಿರ್ದೇಶಕ ಮಣಿರತ್ನಂ ಅವರ ಇತ್ತೀಚಿನ ತಮಿಳು ಚಲನಚಿತ್ರ 'ಓ ಕಾದಲ್ ಕಣ್ಮಣಿ' ವಿಶ್ವಾದದ್ಯಂತ

ಚೆನ್ನೈ: ಪ್ರೇಕ್ಷಕರು ಮತ್ತು ವಿಮರ್ಶಕರ ಮನ್ನಣೆ ಪಡೆದಿರುವ ನಿರ್ದೇಶಕ ಮಣಿರತ್ನಂ ಅವರ ಇತ್ತೀಚಿನ ತಮಿಳು ಚಲನಚಿತ್ರ 'ಓ ಕಾದಲ್ ಕಣ್ಮಣಿ' ವಿಶ್ವಾದದ್ಯಂತ ಬಿಡುಗಡೆಯಾಗಿ ೪ ದಿನಗಳಲ್ಲಿ ೧೪ ಕೋಟಿ ಹಣ ಗಳಿಸಿದೆ.

"ತಮಿಳಿನಲ್ಲಿ ನಿರ್ಮಾಣವಾಗಿರುವ ಹಾಗೂ ತೆಲುಗಿನಲ್ಲಿ ಡಬ್ ಆಗಿರುವ 'ಓ ಕಾದಲ್ ಕಣ್ಮಣಿ' ವಿಶ್ವದಾದ್ಯಂತ ೧೪.೭೩ ಕೋಟಿ ಗಳಿಸಿದೆ. 'ಕಾಂಚನ -೨' ರ ಬಿಡುಗಡೆಯ ಹೊರತಾಗಿಯೂ ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು ಮಣಿರತ್ನಂ ಸಿನೆಮಾ ಸೆಳೆದಿದೆ" ಎಂದು ಸಿನೆಮಾ ಮಾರಾಟ ಪಂಡಿತರೊಬ್ಬರು ತಿಳಿಸಿದ್ದಾರೆ.

ಪ್ರಣಯ ಚಿತ್ರಗಳಿಗೆ ಮಣಿರತ್ನಂ ಹಿಂದಿರುಗಿದ್ದಾರೆ ಎಂದೇ ಬಣ್ಣಿಸಲಾದ ಈ ಸಿನೆಮಾದ ಕಥೆ ಮುಂಬೈನಲ್ಲಿ ನಡೆಯುತ್ತದೆ. ಯುವ ಜೋಡಿ ಆದಿ ಮತ್ತು ತಾರಾ ಮದುವೆಗೂ ಮುಂಚಿತವಾಗಿ ಒಟ್ಟಿಗೆ ಬದುಕುವ ಕಥೆಯ ಎಳೆಯನ್ನು ಈ ಸಿನೆಮಾ ಹೊಂದಿದೆ.

ದಲ್ಕ್ವೆರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಓ ಕಾದಲ್ ಕಣ್ಮಣಿ', ಮಣಿರತ್ನಂ ಅವರಿಗೆ ನಷ್ಟ ತಂದೊಡ್ಡಿದ್ದ 'ಕಾದಲ್' ಸಿನೆಮಾಗೆ ವಿರುದ್ಧವಾಗಿ ಹಣದ ಮಹಾಪೂರವನ್ನೇ ಹರಿಸಿದೆ ಎನ್ನಲಾಗಿದೆ.

ವಿದೇಶಗಳಲ್ಲೂ ಈ ಸಿನೆಮಾ ಒಳ್ಳೆಯ ಹಣ ಗಳಿಸಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!