ಬೆಂಗಳೂರು: ಟ್ವಿಟ್ಟರ್ ಮತ್ತು ಯೂಟ್ಯೂಬಿನಲ್ಲಿ ನಟ ಯಶ್ ಅವರ ಮುಂಬರಲಿರುವ ಚಲನಚಿತ್ರ 'ಮಾಸ್ಟರ್ ಪೀಸ್' ನ ಟೀಸರ್ ಹಲವು ಅಭಿಮಾನಿಗಳ ಗಮನ ಸೆಳೆದಿದೆ. ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಹಾಗು ಮಾರುಕಟ್ಟೆ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿ ಸಿನೆಮಾದ ನಿರ್ಮಾತೃಗಳು ಜನರ ಕುತೂಹಲ ಹೆಚ್ಚಿಸಿದ್ದಾರೆ.
ಏಪ್ರಿಲ್ ೧೫ ರಂದು ಚಿತ್ರೀಕರಣ ಪ್ರಾರಂಭವಾದಾಗ, ಗಾಂಧಿಬಜಾರಿನ ರಸ್ತೆಯಲ್ಲಿ ನೆರಿದಿದ್ದ ೫೦೦೦ಕ್ಕೂ ಹೆಚ್ಚು ಜನರ ನಡುವೆ ಯಶ್ ಮಾತು ಚಿಕ್ಕಣ್ಣ ಚಿತ್ರೀಕರಣ ನಡೆಸಿದ್ದಾರೆ. "ಇದು ಮೆರವಣಿಗೆ ದೃಶ್ಯವಾಗಿತ್ತು. ಅದಕ್ಕಾಗಿ ನಮ್ಮ ಜನರನ್ನೇ ನಾವು ಕರೆದುಕೊಂಡು ಬಂದಿದ್ದೆವು. ಆದರೆ ನಂತರ ನೆರೆದಿದ್ದ ಎಲ್ಲ ಜನರನ್ನೂ ಚಿತ್ರೀಕರಣಕ್ಕೆ ಬಳಸಿಕೊಂಡೆವು. ಇದು ಈ ದೃಶ್ಯಕ್ಕೆ ಹೆಚ್ಚು ನೈಜತೆಯನ್ನಿ ತಂದಿದೆ. ಇನ್ನೂ ರಸ್ತೆಗಳಲ್ಲೇ ಚಿತ್ರೀಕರಣ ನಡೆಸುತ್ತಿದ್ದೇವೆ" ಎಂದು ನಿರ್ದೇಶಕ ಮಂಜು ಮಾಂಡವ್ಯ ತಿಳಿಸಿದ್ದಾರೆ.
ಚಲನಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ. "ನಾನು ಅವರ ಸಂಗೀತವನ್ನು ಯಾವಾಗಲು ಇಷ್ಟಪಟ್ಟಿದ್ದೇನೆ. ಸಿನೆಮಾಗೆ ಐದು ಹಾಡುಗಳನ್ನು ಅವರು ಯೋಜಿಸುತ್ತಿದ್ದಾರೆ. ಯಶ್ ಅವರ ಸಾಕಷ್ಟು ಕುಣಿತ ಸಿನೆಮಾದಲ್ಲಿದೆ" ಎಂದಿದ್ದಾರೆ ಮಂಜು.
ಮುಂಬೈ ಬೆಡಗಿ ಶಾನ್ವಿ ಶ್ರೀವಾಸ್ತವ್ ಚಲನಚಿತ್ರದ ನಾಯಕ ನಟಿ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ