ಸಿನಿಮಾ ಸುದ್ದಿ

ಸಚಿನ್ ಪುತ್ರಿ ಸಾರಾ ಬಾಲಿವುಡ್ ಗೆ ಎಂಟ್ರಿ?

Vishwanath S

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮುದ್ದಿನ ಮಗಳು ಸಾರಾ ತೆಂಡೂಲ್ಕರ್ ಇದೀಗ ಬಾಲಿವುಡ್ ಪ್ರವೇಶಿಸುವ ಸಾಧ್ಯತೆ ಇದೆ.

ನಟ ಶಾಹಿದ್ ಕಪೂರ್ ಜತೆ 18ರ ಹರೆಯದ ಮುದ್ದು ಮುಖದ ಸಾರಾ ಸ್ಕ್ರೀನ್ ಶೇರ್ ಮಾಡಲಿದ್ದು ಈ ಮೂಲಕ ಹಿಂದಿ ಸಿನಿಮಾರಂಗಕ್ಕೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾರಾ ಆಗಾಗ ತಂದೆ ತಾಯಿ ಜತೆ ಬಾಲಿವುಡ್​ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸಾರಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಬಗ್ಗೆ  ಹಲವಾರು ತಿಂಗಳುಗಳಿಂದ ಊಹಾಪೋಹಗಳು ಅಬ್ಬಿದ್ದವು. ಇದೀಗ ಶಾಹಿದ್  ಕಪೂರ್ ಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಸಚಿನ್​ ಕುಟುಂಬದಿಂದ ಅಧಿಕೃತವಾಗಿ ಮಾತ್ರ ಯಾವುದೇ ಮಾಹಿತಿ ಇಲ್ಲ.

SCROLL FOR NEXT