ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ 
ಸಿನಿಮಾ ಸುದ್ದಿ

ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ, ಆದರೆ ಮದುವೆ ಸದ್ಯಕ್ಕಿಲ್ಲ: ರಣಬೀರ್ ಕಪೂರ್

ನಟಿ ಕತ್ರಿನಾ ಕೈಫ್ ಜೊತೆಗಿನ ಸಂಬಂಧದ ಜೊತೆ ಸುದ್ದಿಯಲ್ಲಿರುವ ನಟ ರಣಬೀರ್ ಕಪೂರ್ ತಾವು ಪ್ರೇಮದಲ್ಲಿ ಬಿದ್ದಿರುವುದನ್ನು

ಮುಂಬೈ: ನಟಿ ಕತ್ರಿನಾ ಕೈಫ್ ಜೊತೆಗಿನ ಸಂಬಂಧದ ಜೊತೆ ಸುದ್ದಿಯಲ್ಲಿರುವ ನಟ ರಣಬೀರ್ ಕಪೂರ್ ತಾವು ಪ್ರೇಮದಲ್ಲಿ ಬಿದ್ದಿರುವುದನ್ನು ಒಪ್ಪಿಕೊಂಡಿದ್ದಾರೆ ಆದರೆ ಸದ್ಯಕ್ಕೆ ಮದುವೆಯಾಗುವ ಯಾವುದೇ ಯೋಜನೆಯಿಲ್ಲ ಎಂದಿದ್ದಾರೆ.

ತಮ್ಮ ಮದುವೆ ಖಾಸಗೆ ವಿಷಯವೇ ಎಂಬ ಪ್ರಶ್ನೆಗೆ "ಅದನ್ನು ಖಾಸಗಿಯಾಗಿ ಇಡಲು ಸಾಧ್ಯವಿಲ್ಲ. ನಾವು ನಟರು. ಆರು ವರ್ಷದ ಮೊದಲೇ ನನ್ನ ಮಾಡುವೆ ದಿನಾಂಕ ಗೊತ್ತುಪಡಿಸಲಾಗಿತ್ತು. ಇದು ವಿಶೇಷ ದಿನ. ಅದಕ್ಕೆ ನಾನೇ ಘೋಷಿಸುತ್ತೇನೆ. ಆದರೆ ಸದ್ಯಕ್ಕೆ ಅಂತಹ ಯೋಜನೆಗಳ್ಯಾವುವೂ  ಇಲ್ಲ" ಎಂದಿದ್ದರೆ ರಣಬೀರ್.

"ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ, ನಾನು ಅದಕ್ಕೆ ಬದ್ಧನಾಗಿದ್ದೇನೆ ಹಾಗೂ ಜವಾಬ್ದಾರಿ ಬಂದಿದೆ ಎಂದೆನಿಸುತ್ತಿದೆ. ಆದರೆ ಮದುವೆಯ ವಿಷಯಕ್ಕೆ ಬಂದಾಹ ಊಹೆ ಸಂತೋಷವನ್ನು ಕೆಡಿಸುತ್ತದೆ. ಆದುದರಿಂದ ನನ್ನ ಮದುವೆ ದಿನಾಂಕವನ್ನು ಊಹಿಸದಂತೆ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ" ಎಂದಿದ್ದಾರೆ ರಣಬೀರ್.

ತಮ್ಮ ಕಳೆದ ಎರಡು ಚಲನಚಿತ್ರಗಳು 'ಬೇಶರಮ್' ಮತ್ತು 'ರಾಯ್' ಅಷ್ಟೇನು ಒಳ್ಳೆಯ ಫಲಿತಾಂಶ ನೀಡದಿದ್ದರಿಂದ ಮುಂಬರಲಿರುವ ಸಿನೆಮಾ 'ಬಾಂಬೆ ವೆಲ್ವೆಟ್' ಬಗ್ಗೆ ಒತ್ತಡವಿದೆ. ಎಲ್ಲವೂ ಸರಿಹೋಗುತ್ತದೆ ಎಂದು ನಂಬಿದ್ದೇನೆ ಎನ್ನುತ್ತಾರೆ.

ಅನುರಾಗ್ ಕಶ್ಯಪ್ ನಿರ್ದೇಶಿಸಿರುವ 'ಬಾಂಬೆ ವೆಲ್ವೆಟ್' ಸಿನೆಮಾದಲ್ಲಿ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಕರಣ್ ಜೋಹರ್ ನಟಿಸಿದ್ದಾರೆ. ಈ ಸಿನೆಮಾ ಮೇ ೧೫ ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT