ಸದ್ಯದಲ್ಲೇ ಹಾಡುಗಳ ಚಿತ್ರೀಕರಣಕ್ಕೆ ತೆರಳಲಿರುವ ಈ ಚಿತ್ರದ ಹೆಸರು 'ಸೋಡಾಬುಡ್ಡಿ'. ಮೊದಲಿನಿಂದಲೂ ತಮ್ಮ ಚಿತ್ರದ ಕಥೆ ತುಂಬಾ ಅದ್ಭುತ ಅಂತ ಹೇಳಿಕೊಳ್ಳುತ್ತಲೇ ಮಾತನಿ ಭಾಗದ ಚಿತ್ರೀಕರಣ ಮುಗಿಸಿರುವ ಸೋಡಾಬುಡ್ಡಿ, ಮುಂದೆ ಹಾಡುಗಳ ಚಿತ್ರೀಕರಣಕ್ಕೆ ತಯಾರಿ ನಡೆಸಿಕೊಳ್ಳುತ್ತಿದೆ. ಮಾತನಿ ಭಾಗದ ಚಿತ್ರೀಕರಣ ಮುಗಿದಿರುವ ಹೊತ್ತಿನಲ್ಲಿ ಇಡೀ ಚಿತ್ರ ತಂಡ ಮಾಧ್ಯಮಗಳ ಮುಂದೆ ಹಾಜರಾಯಿತು.
ಚಿತ್ರದ ನಿರ್ದೇಶಕರು ಜೋತಿರಾವ್ ಮೋಹಿತ್, ಇವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಹಾಸ್ಯ, ಪ್ರೀತಿ ಮತ್ತು ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡ ಸಿನಿಮಾ ಇದಾಗಿದೆ. ಎಲ್ಲ ವರ್ಗದ ಪ್ರೇಕ್ಷಕರ ದೃಷ್ಟಿಯಿಂದ ಈ ಚಿತ್ರವನ್ನು ಮಾಡಿದ್ದು, ಈ ಸಿನಿಮಾ ಬಿಡುಗಡೆಯಾಗಿ ಆರಂಭದ ಮೂರು ದಿನ ಜನ ಬಂದರೆ ಕೊನೆ ತನಕ ಅದೇ ಜನ ಬರುತ್ತಾರೆ. ಅಷ್ಟು ಚೆನ್ನಾಗಿದೆ ಸಿನಿಮಾ ಎಂಬುದು ಚಿತ್ರ ತಂಡದ ಅಭಿಪ್ರಾಯ.
ಉತ್ಪಲ್ ಹಾಗೂ ಅನುಷಆ ಚಿತ್ರದ ಜೋಡಿ. ಇಬ್ಬರಿಗೂ ಮೊದಲ ಸಿನಿಮಾ. ಈ ಚಿತ್ರದ ನಿರ್ಮಾಪಕರು ಉದಯ್. ಇವರಿಗೆ ಸಿನಿಮಾ ಮಾಡುವ ಯೋಚನೆ ಇರಲಿಲ್ಲವಂತೆ. ಆದರೂ, ತಮ್ಮ ಪುತ್ರ ಉತ್ಪಲ್ ನನ್ನು ಹೀರೋ ಮಾಡುವುದಕ್ಕಾಗಿ ಚಿತ್ರರಂಗಕ್ಕೆ ಬಂದಿದ್ದೇನೆ ಎಂಬುದು ನಿರ್ಮಾಪಕರ ಮಾತು.
ನನಗೆ ಈ ಸಿನಿಮಾ ಮಾಡುವ ವಿಶ್ವಾಸವರಿಲಿಲ್ಲ. ಆದರೆ, ನಿರ್ದೇಶಕ ಜೋತಿರಾವ್ ಅವರು ಮಾಡಿಕೊಂಡಿರುವ ಕಥೆ ಕೇಳಿದ ಮೇಲೆ ಸಿನಿಮಾ ಮಾಡುವ ಧೈರ್ಯ ಬಂತು ಎಂಬುದು ಉದಯ್ ಅವರ ಮಾತು. ನನಗೆ ಇದು ಮೊದಲ ಸಿನಿಮಾ, ಆದರೂ ನಿರ್ದೇಶಕರು ನನ್ನಿಂದ ಉತ್ತಮ ನಟನೆ ತೆಗೆಸಿದ್ದಾರೆ.
ಆ ನಂಬಿಕೆ ಸಿನಿಮಾ ನೋಡಿದ ಮೇಲೆ ನಿಮಗೂ ಮೂಡುತ್ತದೆ. ನನ್ನ ಪ್ರಕಾರ ಸಿನಿಮಾಗೆ ಎಲ್ಲ ರೀತಿಯ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಾರೆಂಬ ನಂಬಿಕೆ ಚಿತ್ರದ ನಾಯಕ ಉತ್ಪಲ್ ಅವರದ್ದು. ವೆಂಕಟ್ ರಾಜ್ ಚಿತ್ರದ ಮತ್ತೊಬ್ಬ ನಿರ್ಮಾಪಕರು. ಇವತ್ತಿನ ಜನರೇಷನ್ ಸಿನಿಮಾ. ಈಗಿನ ಕಾಲಕ್ಕೆ ತಕ್ಕಂತೆ ಕಥೆ ಮಾಡಿಕೊಂಡಿರುವ ನಿರ್ದೇಶಕರು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುತ್ತಾರೆ ಎಂಬುದು ವೆಂಕಟ್ ರಾಜ್ ಮಾತು.
ಚಿತ್ರಕ್ಕೆ ಹರಿ ನಾಯಕ್ ಕ್ಯಾಮೆರಾ ಹಿಡಿದ್ದಾರೆ. ಚಿತ್ರದ ಪ್ರತಿ ದೃಶ್ಯವೂ ಚೆನ್ನಾಗಿ ಬಂದಿದೆ. ಎಲ್ಲ ರೀತಿಯ ಅಂಶಗಳು ಚಿತ್ರದಲ್ಲಿ ಇರುವುದರಿಂದ ಸಿನಿಮಾ ಕಮರ್ಷಿಯಲ್ ಆಗಿಯೂ ಗೆಲ್ಲುತ್ತದೆ ಎಂದರು ಹರಿ ನಾಯಕ್. ಚಿತ್ರದ ನಾಯಕ ಉತ್ಪಲ್ ಈ ಚಿತ್ರಕ್ಕಾಗಿ ನಡೆಸಿಕೊಂಡ ತಯಾರಿ ಬಗ್ಗೆ ಎಲ್ಲರು ಮೆಚ್ಚುಗೆ ಸೂಚಿಸಿದರು. ಪಾತ್ರಕ್ಕೆ ತಕ್ಕಂತೆ ತಮ್ಮನ್ನು ಸಿದ್ಧ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಕ್ಕಾಗಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂಬುದು ಚಿತ್ರತಂಡ ಅಭಿಮತ.
ನಾಯಕಿ ಅನುಷಾ ಚಿತ್ರದಲ್ಲಿ ತಮ್ಮ ಪಾತ್ರ ತುಂಬಾ ಇಷ್ಟವಾಗಿದೆಯಂತೆ. ಅನುಷಾ ಗೋಕುಲದಲ್ಲಿ ಸೀತೆ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಾಗಿ ಹೆಸರು ಮಾಡಿದವರು. 'ನಿರ್ದೇಶಕ ಜೋತಿರಾಜ್ ಅವರು ತುಂಬಾ ಚೆನ್ನಾಗಿ ಸ್ಕ್ರೀನ್ ಪ್ಲೇ ಮಾಡಿಕೊಂಡಿದ್ದಾರೆ. ಕಾಲೇಜಿಗೆ ಹೋಗದೆ ಮನೆಯಲ್ಲೇ ಇರುವ ಪಾತ್ರ ನನ್ನದು. ಪಾತ್ರದ ಹೆಸರು ಭಾಗ್ಯ' ಎಂದರು ಅನುಷಾ. ಚಿತ್ರಕ್ಕೆ ಮತ್ತೊಬ್ಬ ನಾಯಕಿ ಖುಷಿ. ಈಕೆಗೆ ಇದು ಎರಡನೇ ಸಿನಿಮಾ. ರಂಗಭೂಮಿಯಿಂದ ಬಂದ ಖುಷಿ, ಬೋಲ್ಡ್ ಅಂಡ್ ಗ್ಲಾಮರ್ ಪಾತ್ರ ಮಾಡಿದ್ದಾರಂತೆ.