ವಜ್ರಕಾಯ ತಂಡ 
ಸಿನಿಮಾ ಸುದ್ದಿ

ಬಹು ನಿರೀಕ್ಷಿತ 'ವಜ್ರಕಾಯ' ಆಡಿಯೋ ಬಿಡುಗಡೆ

ಭಜರಂಗಿ ಚಿತ್ರದ ಯಶಸ್ಸಿನ ನಂತರ ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ವಜ್ರಕಾಯದ ಹಾಡುಗಳು ಇಂದು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಭಜರಂಗಿ ಚಿತ್ರದ ಯಶಸ್ಸಿನ ನಂತರ ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ವಜ್ರಕಾಯದ ಹಾಡುಗಳು ಇಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಚಿತ್ರದ ಪ್ರಮೋಷನ್ ಗೂ ಮುನ್ನ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನವನ್ನು ಚಿತ್ರದತ್ತ ಸೆಳೆಯಲು ಚಿತ್ರತಂಡ ಮಾಡುವ ಮೊದಲ ಕಸರತ್ತು. ಈ ನಿಟ್ಟಿನಿಂದ ವಜ್ರಕಾಯ ಚಿತ್ರದ ಧ್ವನಿಸುರುಳಿ ಅದ್ಧೂರಿಯಾಗಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ನಿರ್ದೇಶಕ ಹರ್ಷ.

ಬೆಂಗಳೂರು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ಸಂಜೆ ಧ್ವನಿಸುರುಳಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ನಟ ನಟಿಯರು ಭಾಗವಹಿಸಲಿದ್ದಾರೆ.

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದು, ಇದು ಅವರ ಸಂಗೀತ ನಿರ್ದೇಶನದ 50ನೇ ಸಿನಿಮಾ. ಸಿ.ಆರ್‌ ಮನೋಹರ್‌ ಈ ಚಿತ್ರದ ನಿರ್ಮಾಪಕರಾಗಿದ್ದು, ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ. ಮತ್ತೂಂದು ವಿಶೇಷವೆಂದರೆ ತಮಿಳು ನಟ ಧನುಶ್‌ "ವಜ್ರಕಾಯ' ದ ಒಂದು ಹಾಡನ್ನು ಹಾಡಿದ್ದಾರೆ. ಜೊತೆಗೆ ನಟ ಶರಣ್‌ ಕೂಡಾ ಒಂದು ಹಾಡನ್ನು ಹಾಡಿದ್ದಾರೆನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿಯೂ "ವಜ್ರಕಾಯ' ಆಡಿಯೋ ಮೇಲೆ ಒಂದಷ್ಟು ನಿರೀಕ್ಷೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?