ಸಿನಿಮಾ ಸುದ್ದಿ

ಡಬ್ಬಿಂಗ್ ವಿರೋಧಿಸಿ ನಿರ್ದೇಶಕರ ಮೌನ ಪ್ರತಿಭಟನೆ: ಕಲಾವಿದರು, ಕಾರ್ಮಿಕ ಒಕ್ಕೂಟದ ಬೆಂಬಲ

Srinivas Rao BV

ಬೆಂಗಳೂರು: ಡಬ್ಬಿಂಗ್ ವಿರೋಧಿಸಿ ನಿರ್ದೇಶಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಧರಣಿ ಪ್ರಾರಂಭಿಸಿರುವ ಸ್ಯಾಂಡಲ್ ವುಡ್ ನಿರ್ದೇಶಕರು, ಕಪ್ಪು ಪಟ್ಟಿ ಧರಿಸಿ ರಾಜ್ ಸ್ಮಾರದ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ನಿರ್ದೇಶಕರ ಪ್ರತಿಭಟನೆಗೆ ಕಿರುತೆರೆ ಕಲಾವಿದರು, ಚಲನಚಿತ್ರ ಕಾರ್ಮಿಕ ಒಕ್ಕೂಟದ ಸದಸ್ಯರು ಬೆಂಬಲ ನೀಡಿದ್ದು, ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ  ನಿರ್ದೇಶಕ ಪಿ.ಶೇಷಾದ್ರಿ, ಯೋಗೇಶ್ ಹುಣಸೂರು, ರವಿ ಶ್ರೀವತ್ಸ, ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದು ಮಳವಳ್ಳಿ ಸಾಯಿಕೃಷ್ಣ, ಶರಣ್ ಭಾಗಿಯಾಗಿದ್ದಾರೆ.  

ಪರ ಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದನ್ನು ನಿರ್ದೇಶಕರ ಸಂಘ ಹಾಗೂ ಚಲನಚಿತ್ರ  ಕಾರ್ಮಿಕರ ಒಕ್ಕೂಟ ನಿರಂತರವಾಗಿ ವಿರೋಧಿಸುತ್ತಿದೆ. ಡಬ್ಬಿಂಗ್ ಗೆ ಅವಕಾಶ ನೀದಬಾರದು ಎಂದು ಆಗ್ರಹಿಸಿ ಈಗ ನಿರ್ದೇಶಕರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಕಲಾವಿದರೂ ಬೆಂಬಲ ಸೂಚಿಸಿದ್ದಾರೆ.

SCROLL FOR NEXT