ಅತಿ ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕೇರಿದ ರಾಧಿಕಾ ಆಪ್ಟೆ ಅವರ ವೃತ್ತಿಪರ ಜೀವನದಲ್ಲಿ ಮತ್ತೊಂದು ಪ್ರಮುಖ ಘಟ್ಟ. ಅವರು ತಮಿಳು ಚಿತ್ರವೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ನಟಿಸಲಿದ್ದಾರೆ.
'ಅಹಲ್ಯ' ಎಂಬ ಸಣ್ಣ ಸಿನೆಮಾದಲ್ಲಿನ ನಟನೆಗೆ ಈ ೨೯ ವರ್ಷದ ನಟಿಗೆ ಈಗ ಬಾಲಿವುಡ್ ಕೇಂದ್ರಬಿಂದುವಾಗಿದ್ದಾರೆ. ಅಲ್ಲದೆ ಇನ್ನೂ ಬಿಡುಗಡೆಯಾಗಬೇಕಿರುವ 'ಮಾಂಜಿ-ದ ಮೌಂಟೇನ್ ಮ್ಯಾನ್' ಸಿನೆಮಾದಲ್ಲಿ ಕೂಡ ತಮ್ಮ ಝಳಕು ತೋರಿಸಿದ್ದಾರೆ.
ಈಗ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಕ್ಕಿರುವ ವಿಷಯವನ್ನು ಇನ್ನೂ ಮನನ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಅತೀವ ಸಂತಸದಲ್ಲಿರುವ ಈ ನಟಿ ತಿಳಿಸಿದ್ದಾರೆ. ಈ ಯೋಜನೆ ಅತೀವ ಸಂತಸ ತಂದಿದ್ದು ರಜನಿಕಾಂತ್ ಅವರಿಗಿಂತಲೂ ದೊಡ್ಡ ತಾರೆ ಇನ್ನೊಬ್ಬರಿಲ್ಲ ಎಂದಿದ್ದಾರೆ. ಈ ಸಿನೆಮಾದ ನಿರ್ದೇಶಕ ಪಾ ರಂಜಿತ್ ಅವರನ್ನು ಕೂಡ ಅದ್ಭುತ ನಿರ್ದೇಶಕ ಎಂದಿದ್ದಾರೆ.
ತಮಿಳು ಚಿತ್ರದ ತಮ್ಮ ಪಾತ್ರದ ಬಗ್ಗೆ ಪ್ರಶ್ನಿಸಿದಾಗ, ನಟನೆ ಅವಕಾಶ ಇರುವ ಒಳ್ಳೆಯ ಪಾತ್ರ ಇದು. ಆಗಸ್ಟ್ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದಾರೆ.