ಸ್ಯಾಂಡಲ್ ವುಡ್ ನಟ ಕಾರ್ತಿಕ್ ಜಯರಾಂ 
ಸಿನಿಮಾ ಸುದ್ದಿ

ಖಳ ನಾಯಕನ ಪಾತ್ರದ ಮೂಲಕ ಕಾರ್ತಿಕ್ ಜಯರಾಂ ಕಾಲಿವುಡ್ ಗೆ ಎಂಟ್ರಿ

ಕನ್ನಡದ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ, ತಮಿಳು ಚಿತ್ರರಂದಲ್ಲೂ ನಟನೆ ಮಾಡಲಿದ್ದಾರೆ.

ಕನ್ನಡದ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ, ತಮಿಳು ಚಿತ್ರರಂದಲ್ಲೂ ನಟನೆ ಮಾಡಲಿದ್ದಾರೆ.

ವಿಲನ್ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ಕಾರ್ತಿಕ್ ಜಯರಾಂ, ಖಳನಾಯಕನ ಪಾತ್ರದ ಮೂಲಕವೇ ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಕಾಲಿವುಡ್ ನಟ ಕಾರ್ತಿಯೊಂದಿಗೆ ಶಕುನಿ ಚಿತ್ರ ಮಾಡಿದ್ದ ಶಂಕರ್ ದಯಾಳ್ ಕಾರ್ತಿಕ್ ಜಯರಾಂ ನಟಿಸುತ್ತಿರುವ ಚಿತ್ರವನ್ನೂ ನಿರ್ದೇಶಿಸುತ್ತಿದ್ದು ವಿಷ್ಣು ವಿಶಾಲ್ ನಾಯಕರಾಗಿ ನಟಿಸುತ್ತಿದ್ದಾರೆ.

ಚಿತ್ರೀಕರಣಕ್ಕಾಗಿ ಚೆನ್ನೈ ನಲ್ಲಿರುವ ಕಾರ್ತಿಕ್, ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು "ನಿರ್ದೇಶಕ ಶಂಕರ್ ದಯಾಳ್, ತಮ್ಮ ಮುಂದಿನ ಚಿತ್ರದ ಖಳ ನಾಯಕನ ಪಾತ್ರಕ್ಕಾಗಿ ಅನುಭವಿ ನಟನನ್ನು ಹುಡುಕುತ್ತಿದ್ದರಂತೆ, ಆದರೆ ಪಾತ್ರಕ್ಕೆ ಸರಿಹೊಂದುವ ವ್ಯಕ್ತಿ ಸಿಕ್ಕಿರಲಿಲ್ಲ. ತಮಗೆ ಸಿಸಿಎಲ್ ಮೂಲಕ ಪರಿಚಯವಿದ್ದ ಚಿತ್ರದ ನಾಯಕ ವಿಷ್ಣು ವಿಶಾಲ್, ನನ್ನ ಬಗ್ಗೆ ನಿರ್ದೇಶಕರಿಗೆ ತಿಳಿಸಿದ್ದರು. ಖಳನಾಯಕನ ಪಾತ್ರವಾಗಿದ್ದರಿಂದ, ನನ್ನನ್ನು ಸಂಪರ್ಕಿಸಲು ವಿಷ್ಣು ವಿಶಾಲ್ ಹಿಂದೇಟು ಹಾಕಿದ್ದರು. ಖಳನಾಯಕನ ಪಾತ್ರ ನನಗೆ ಹೇಳಿಮಾಡಿಸಿದಂತಿದ್ದ ಕಾರಣ ನಟನೆಗೆ ಒಪ್ಪಿದೆ ಎಂದು ಹೇಳಿದ್ದಾರೆ.    
ತಮಿಳಿನ ಚಿತ್ರದಲ್ಲಿ ಕಾರ್ತಿಕ್ ಜಯರಾಂ ಯುವ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದು ಚಿತ್ರಕಥೆಯನ್ನು ಖಳನಾಯಕನ ಪಾತ್ರದ ಸುತ್ತಲೇ ಹೆಣೆಯಲಾಗಿದೆಯಂತೆ. ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಕಾರ್ತಿಕ್, ಚಿತ್ರ ಬಿಡುಗಡೆ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಚಿತ್ರಗಳ ನಡುವೆ ಅಥವಾ ಅನ್ಯ ಭಾಷ್ಯಾ ಚಿತ್ರಗಳ ನಡುವೆ ಘರ್ಷಣೆ ಉಂಟಾಗಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT