ನಟಿ ಧಾನ್ಸಿಕಾ 
ಸಿನಿಮಾ ಸುದ್ದಿ

ರಜನಿಕಾಂತ್ ಮಗಳ ಪಾತ್ರ ನಿರ್ವಹಿಸಲಿರುವ ಧಾನ್ಸಿಕಾ

'ಆವರಣ್' ಮತ್ತು 'ಪರದೇಶಿ' ಸಿನೆಮಾಗಳ ನಟನೆಗೆ ಹೆಚ್ಚು ಜನಪ್ರಿಯವಾದ ನಟಿ ಧಾನ್ಸಿಕಾ ಅವರು ಇನ್ನೂ ಹೆಸರಿಡದ ಸೂಪರ್ ಸ್ಟಾರ್ ರಜನಿಕಾಂತ್ ಅವರ ೧೫೯ನೆ

ಚೆನ್ನೈ: 'ಆವರಣ್' ಮತ್ತು 'ಪರದೇಶಿ' ಸಿನೆಮಾಗಳ ನಟನೆಗೆ ಹೆಚ್ಚು ಜನಪ್ರಿಯವಾದ ನಟಿ ಧಾನ್ಸಿಕಾ ಅವರು ಇನ್ನೂ ಹೆಸರಿಡದ ಸೂಪರ್ ಸ್ಟಾರ್ ರಜನಿಕಾಂತ್ ಅವರ ೧೫೯ನೆ ಸಿನೆಮಾದಲ್ಲಿ ಮಗಳ ಪಾತ್ರ ನಿರ್ವಹಿಸಲಿದ್ದಾರೆ.

"ಈ ಯೋಜನೆಗೆ ರಜನಿಕಾಂತ್ ಇತ್ತೀಚಿಗೆ ಸಹಿ ಮಾಡಿದ್ದಾರೆ. ಅವರು ರಜನಿಕಾಂತ ಅವರ ಮಗಳ ಪಾತ್ರ ನಿರ್ವಹಿಸಲಿದ್ದು, ರಾಧಿಕಾ ಆಪ್ಟೆ ಅವರ ಪತ್ನಿಯ ಪತ್ರ ನಿರ್ವಹಿಸಲಿದ್ದಾರೆ" ಎಂದು ಮೂಲಗಳಿಂದ ತಿಳಿದುಬಂದಿದೆ.

ಪ ರಂಜಿತ್ ನಿರ್ದೇಶಿಸಲಿರುವ ಈ ಸಿನೆಮಾ ಮಲೇಶಿಯಾದಲ್ಲಿ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಲಿದೆ.

"ಆಗಸ್ಟ್ ನಲ್ಲೇ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಕೆಲವು ಸದಸ್ಯರ ವೀಸಾ ತೊಂದರೆಗಳಿಂದ ಇದನ್ನು ಮುಂದೂಡಲಾಗಿದೆ" ಎಂದು ಮೂಲಗಳು ತಿಳಿಸಿವೆ.

ಈ ಸಿನೆಮಾದಲ್ಲಿ ರಜನಿಕಾಂತ್ ಗ್ಯಾಂಗ್ಸ್ಟರ್ ಪಾತ್ರ ನಿರ್ವಹಿಸುತ್ತಿದ್ದು, ಸಂತೋಶ್ ನಾರಾಯಣನ್ ಅವರ ಸಂಗೀತ ಒದಗಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ