ನರ್ತಕಿ ಚಿತ್ರಮಂದಿರದ ಮುಂದೆ ಉಪ್ಪಿ೨ ಉಲ್ಟಾ ಕಟೌಟ್ 
ಸಿನಿಮಾ ಸುದ್ದಿ

ಉಪ್ಪಿ೨: ಎಲ್ಲಾನು ಉಲ್ಟಂಪಲ್ಟ ಕಾಣ್ತದೆ

ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಲನಚಿತ್ರ ಆಗಸ್ಟ್ ೧೪ ರಂದು ಕರ್ನಾಟಕದಾದ್ಯಂತ

ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಲನಚಿತ್ರ ಆಗಸ್ಟ್ ೧೪ ರಂದು ಕರ್ನಾಟಕದಾದ್ಯಂತ ೬೦೦ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಗಾಂಧಿನಗರದ ನರ್ತಕಿ ಚಿತ್ರಮಂದಿರದ ಎದುರು ಕಟೌಟ್ ನಿಲ್ಲಿಸಲಾಗಿದೆ. ಆದರೆ ಇಲ್ಲಿ ವಿಶೇಷವಿರುವುದು ಕಟೌಟ್ ನಿಲ್ಲಿಸಿರುವ ರೀತಿಯಲ್ಲಿ. ಗಾಂಧಿನಗರ ಹಿಂದೆಂದು ಕಂಡರಿಯದ ರೀತಿಯಲ್ಲಿ. ಹೌದು ಕಟೌಟ್ ತಲೆಕೆಳಕಾಗಿ ನಿಲ್ಲಿಸಿದ್ದು, ಇದು ಭಾರಿ ಜನಪ್ರಿಯತೆ ಪಡೆದು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಉಪ್ಪಿ ಗಿಮಿಕ್ ಇಷ್ಟಕ್ಕೆ ನಿಂತಿಲ್ಲ. ನೆನ್ನೆಯಷ್ಟೇ ಬಿಡುಗಡೆಯಾಗಿರುವ ಮತ್ತೊಂದು ಟೀಸರ್ ನಲ್ಲಿ ಉಪೇಂದ್ರ ದೇವಸ್ಥಾನದಲ್ಲಿ ಉಪ್ಪಿ ವಿಗ್ರಹ ತಲೆಕೆಳಕಾಗಿ ನಿಂತಿದೆ. ಹೀಗೆ ತಮ್ಮ ಅಭಿಮಾನಿಗಳಲ್ಲಿ ಕುತೂಹಲವನ್ನು ಸಿಕ್ಕಾಪಟ್ಟೆ ಏರಿಸಿರುವ ಉಪೇಂದ್ರರ ಪ್ಲ್ಯಾನ್ ಸಿನೆಮಾ ಬಿಡುಗಡೆಯ ನಂತರ ಉಲ್ಟಂಪಲ್ಟ ಆಗಬಾರದಷ್ಟೇ!

ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಟನೆ ಎಲ್ಲವೂ ಉಪೇಂದ್ರರದ್ದೇ. ರಷ್ಯಾ ಮೂಲಕ ಮಾಡೆಲ್ ಕ್ರಿಸ್ಟಿನಾ ಚಿತ್ರದ ನಾಯಕಿ. ಪಾರೂಲ್ ಯಾದವ್ ಚಿತ್ರದ ಮತ್ತೊಬ್ಬ ನಾಯಕಿ. ಅಶೋಕ್ ಕಶ್ಯಪ್ ಕ್ಯಾಮೆರಾಮ್ಯಾನ್. ಗುರುಕಿರಣ್ ಸಂಗೀತದ ಈ ಸಿನೆಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!