ಮುಂಬೈನ ಹೋಟೆಲ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದನ್ನು ವಿರೋಧಿಸಿರುವ ಬಾಲಿವುಡ್ ನಟ ಅಭಯ್ ಡಿಯೋಲ್ ಪೊಲೀಸರ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಮಧ್ ಐಲ್ಯಾಂಡ್ ಎಂಬ ಹೋಟೆಲ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಕೆಲವು ಜೋಡಿಗಳನ್ನು ಬಂಧಿಸಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿ, ಪೊಲೀಸರ ಈ ನೈತಿಕ ಪೋಲಿಸ್ ಗಿರಿಯ ವಿರುದ್ಧ ಹಲವಾರು ಜನ ತಿರುಗಿಬಿದ್ದಿದ್ದರು.
೩೯ ವರ್ಷದ 'ಜಿಂದಗಿ ನ ಮಿಲೇಗಿ ದುಬಾರ' ಸಿನೆಮಾದ ನಟ ತನ್ನ ಫೇಸ್ ಬುಕ್ ಪುಟದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸೌಜನ್ಯವಿಲ್ಲದ ನಡತೆ ಎಂದಿದ್ದಾರೆ.
ಸಂಭೋಗ ಒಂದು ಕೆಟ್ಟ ಕ್ರಿಯೆ ಎಂಬಂತೆ ಅದನ್ನು ವಿಪರೀತ ಹಚ್ಚಿಕೊಂಡಿರುವ ಜನರನ್ನು ಕೂಡ ಅವರು ವಿರೋಧಿಸಿದ್ದಾರೆ.
"ಮಕ್ಕಳು ತಾವು ಮಾಡದ ತಪ್ಪಿಗೆ ಅವರ ಮೇಲೆ ಸಾರ್ವಜನಿಕವಾಗಿ ಕೈಮಾಡೂವುದು, ಮಾನಸಿಕ ತೊಂದರೆ ಕೊಡುವುದು ಎಷ್ಟು ಸರಿ? ಇದು ಪೋಲೀಸರ ಅಸೌಜನ್ಯದ ನಡೆ" ಎಂದು ಕಿಡಿಕಾರಿದ್ದಾರೆ.