ಕೃಷ್ಣಾ- ರುಕ್ಕು ಸಿನಿಮಾ ಫೋಟೋ ಶೂಟ್ 
ಸಿನಿಮಾ ಸುದ್ದಿ

ಮತ್ತೆ ಪ್ರಾರಂಭವಾಗಲಿದೆ 'ಕೃಷ್ಣ'ನ ಮೇನಿಯಾ

ಕೃಷ್ಣಾ ಅಜಯ್ ರಾವ್ ಎಂದೇ ಮರುನಾಮಕರಣ ಮಾಡಿಕೊಂಡಿರುವ ಅಜಯ್ ರಾವ್ ಅವರ ಮುಂದಿನ ಸಿನಿಮಾ ಕೃಷ್ಣ-ರುಕ್ಕು ಚಿತ್ರೀಕರಣ ಆಗಸ್ಟ್ 19 ಕ್ಕೆ ಪ್ರಾರಂಭವಾಗಲಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರಿಗೆ ಕೃಷ್ಣ ಎಂಬುದು ಲಕ್ಕಿ ನೇಮ್. ಅಜಯ್ ರಾವ್ ಗೆ ಹಾಗೂ ಅವರ ಸಿನಿಮಾಗಳಿಗೆ ಕೃಷ್ಣಾ ಎಂಬುದು ಪರ್ಯಾಯ ಪದವಾಗಿದೆ. ಕೃಷ್ಣಾ ಅಜಯ್ ರಾವ್ ಎಂದೇ ಮರುನಾಮಕರಣ ಮಾಡಿಕೊಂಡಿರುವ ಅಜಯ್ ರಾವ್ ಅವರ ಮುಂದಿನ ಸಿನಿಮಾ ಕೃಷ್ಣ-ರುಕ್ಕು ಚಿತ್ರೀಕರಣ ಆಗಸ್ಟ್ 19 ಕ್ಕೆ ಪ್ರಾರಂಭವಾಗಲಿದೆ.

ಕೃಷ್ಣ- ರುಕ್ಕು ಸಿನಿಮಾಗೆ ಈ ಮುನ್ನ "ಮಾವ ಐ ಲವ್ ಯು" ಎಂಬ ಶೀರ್ಷಿಕೆ ನೀಡಲಾಗಿತ್ತು. ಆದರೆ ಅಜಯ್ ರಾವ್ ಅವರಿಗೆ ಕೃಷ್ಣ ಎಂಬುದು ಅದೃಷ್ಟದ ಹೆಸರಾಗಿದ್ದು ಕೃಷ್ಣ-ರುಕ್ಕುಎಂದು ಬದಲಾವಣೆ ಮಾಡಲಾಗಿದೆ. ಪ್ರತಿ ನಟನಿಗೂ ತನ್ನನ್ನು ಗುರುತಿಸಿಕೊಳ್ಳುವುದು ಅಗತ್ಯವಿರುತ್ತದೆ. ಕೆಲವೊಮ್ಮೆ ವಿಶಿಷ್ಠ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವ ನಟನ ಹೆಸರು ಬ್ರಾಂಡ್ ಆಗಲಿದೆ. ನನಗಿಂತಲೂ ನಿರ್ಮಾಪಕರಿಗೆ 'ಕೃಷ್ಣ' ಅದೃಷ್ಟದ ಹೆಸರಾಗಿದೆ. ಸಿನಿಮಾದ ಪಾತ್ರಗಳಿಗೆ ನಿರ್ದಿಷ್ಟ ಹೆಸರನ್ನು ಕೇಳುವುದಿಲ್ಲ. ಆದರೆ ನಿರ್ಮಾಪಕರೇ ಕೃಷ್ಣ ಎಂಬ ಹೆಸರನ್ನು ಸೂಚಿಸುತ್ತಾರೆ ಎಂದು ಅಜಯ್ ರಾವ್ ತಿಳಿಸಿದ್ದಾರೆ.   
ಕೃಷ್ಣನ್ ಲವ್ ಸ್ಟೋರಿ ಸಿನಿಮಾದ ಮೂಲಕ ಅಜಯ್ ರಾವ್ ಗೆ ಈ ಹೆಸರು ಬ್ರಾಂಡ್ ಆಗಿದ್ದರೂ, ಕೃಷ್ಣ ಲೀಲಾ ಸಿನಿಮಾದ ಯಶಸ್ಸಿನಿಂದ ಮತ್ತಷ್ಟು ಅದೃಷ್ಟದ ಹೆಸರಾಗಿದೆ. ನನಗೆ ಕೃಷ್ಣನ ಆಶೀರ್ವಾದ ಇದೆ ಎಂದು ಅಜಯ್ ರಾವ್ ಹೇಳಿದ್ದಾರೆ.  ಕೃಷ್ಣ- ರುಕ್ಕು ಸಿನಿಮಾದಲ್ಲಿ ಬೇರೆಲ್ಲಾ ಸಿನಿಮಾಗಳಿಗಿಂತಲೂ ವಿಭಿನ್ನ ಪ್ರೇಮಕಥೆಯಿದೆ. ಕಳೆದಲ್ಲಾ ಸಿನಿಮಾಗಳಲ್ಲೂ ಮೃಧುಸ್ವಭಾವದ ಪಾತ್ರಗಳನ್ನು ಮಾಡಿದ್ದೇನೆ, ಆದರೆ ಈ ಚಿತ್ರದಲ್ಲಿ ನನ್ನ ಪಾತ್ರ ಸಂಪೂರ್ಣವಾಗಿ ಬದಲಾಗಿದೆ ಎಂದಿದ್ದಾರೆ ಅಜಯ್ ರಾವ್.  ಅಮೂಲ್ಯ ಅಜಯ್ ರಾವ್ ಗೆ ನಾಯಕಿಯಾಗಿದ್ದು, ಮೊದಲ ಶೆಡ್ಯೂಲ್ ನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT