ಶ್ರೀ ಮುರಳಿ 
ಸಿನಿಮಾ ಸುದ್ದಿ

'ರತಾವರ' ಶೂಟಿಂಗ್ ಪ್ರಗತಿಯಲ್ಲಿದೆ: ಶ್ರೀಮುರಳಿ

ಶ್ರೀಮುರಳಿ ಮತ್ತು ರಚಿತಾ ರಾಮ್ ನಟಿಸುತ್ತಿರುವ ರತಾವರ ಸಿನೆಮಾ ಬಿಡುಗಡೆಗೆ ತಡವಾಗುತ್ತಿರುವ ಮಾತು ಕೇಳಿಬರುತ್ತಿದ್ದರೂ ಚಿತ್ರದ...

ಬೆಂಗಳೂರು: ಶ್ರೀಮುರಳಿ ಮತ್ತು ರಚಿತಾ ರಾಮ್ ನಟಿಸುತ್ತಿರುವ ರತಾವರ ಸಿನೆಮಾ ಬಿಡುಗಡೆಗೆ ತಡವಾಗುತ್ತಿರುವ ಮಾತು ಕೇಳಿಬರುತ್ತಿದ್ದರೂ ಚಿತ್ರದ ನಾಯಕ ಮುರಳಿ ಆ ಮಾತನ್ನು ಒಪ್ಪುವುದಿಲ್ಲ. ಇನ್ನೆ ರಡು ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಚಿತ್ರದಲ್ಲಿ ಒಂದು ಹಾಡು ಮುಖ್ಯವಾಗಿದ್ದು, ಅದಕ್ಕೆ ನಾನು ಧ್ವನಿ ನೀಡಿದ್ದೇನೆ. ಅನೇಕ ಸಮಯಗಳಿಂದ ಆ ಹಾಡಿನ ಸಾಹಿತ್ಯಕ್ಕಾಗಿ ದೀರ್ಘ ಸಮಯ ತೆಗೆದುಕೊಂಡೆ. ಹಾಡನ್ನು ಹಾಡುವಾಗ ಮೂಲಭೂತವಾದ ಅಂಶವನ್ನು ಚಿತ್ರಪ್ರೇಮಿಗಳಿಗೆ ಹೆಚ್ಚು ಇಷ್ಟವಾಗುವ ರೀತಿಯಲ್ಲಿ ಸೇರಿಸಿ ಅದರ ದೃಶ್ಯಗಳನ್ನು ಸೆರೆಹಿಡಿಯಬೇಕಾಗಿತ್ತು. ಆ ಹಾಡಿನ ಸಾಹಿತ್ಯ ನನ್ನನ್ನು ಬಹಳ ಕಾಡಿತ್ತು, ಅದು ಖಂಡಿತವಾಗಿಯೂ ಸಿನಿಮಾದಲ್ಲಿ ಬಹಳ ಮುಖ್ಯ ಆಕರ್ಷಣೆಯಾಗಲಿದೆ ಎಂದು ವಿವರಿಸುತ್ತಾರೆ.

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದ ಹಾಡಿನ ಶೂಟಿಂಗ್ ನಾಳೆಯಿಂದ ಆರಂಭವಾಗಲಿದೆ. ಇದಕ್ಕಾಗಿ ದೊಡ್ಡ ಸೆಟ್ ನ್ನು ನಿರ್ಮಿಸಲಾಗಿದ್ದು, ಟಪಂಗುಚಿ ಸ್ಟೈಲ್ ನಲ್ಲಿ ನೃತ್ಯವಿರುತ್ತದೆ. ಇದು ಖಂಡಿತಾ ಜನರನ್ನು ಆಕರ್ಷಿಸುತ್ತದೆ. ತಮಟೆ ಬೀಟ್ ಹೊಂದಿದ್ದು, ಹಾಡಿಗೆ ಭಾರತೀಯ ಶೈಲಿಯ ಉಡುಪನ್ನು ನನ್ನ ಪತ್ನಿ ವಿದ್ಯಾ ವಿನ್ಯಾಸಗೊಳಿಸಿದ್ದಾರೆ ಎನ್ನುತ್ತಾರೆ ಶ್ರೀ ಮುರಳಿ.

ಚಿತ್ರದಲ್ಲಿ ಹೆಚ್ಚಿನ ಅಲಂಕಾರವಾಗಲಿ, ಹೆಚ್ಚಿನ ಕಮರ್ಷಿಯಲ್ ಅಂಶ ಮತ್ತು ಹೆಚ್ಚಿನ ಫೈಟ್ ಗಳು ಕೂಡ ಇರುವುದಿಲ್ಲ. ವಿದೇಶಗಳಲ್ಲಿ ಕೂಡ ಚಿತ್ರೀಕರಿಸಿಲ್ಲ. ಚಿತ್ರದ ಆರಂಭದಿಂದಲೂ ಕರ್ನಾಟಕದ ಸೊಗಡನ್ನು ಇಟ್ಟು ಕೊಂಡು ಚಿತ್ರಿಸಲಾಗಿದೆ. ಚಿತ್ರದ ಸ್ಕ್ರಿಪ್ಟ್ ಗೆ ಬೇಕಾಗಿ ಒಂದು ಹಾಡನ್ನು ಕೂಡ ತೆಗೆದಿದ್ದೇವೆ. ಚಿತ್ರದಲ್ಲಿ ಮೂರಕ್ಕಿಂತ ಹೆಚ್ಚಿನ ಹಾಡುಗಳಿಲ್ಲ ಎಂದು ವಿವರಣೆ ನೀಡಿದರು.

 ಸ್ಯಾಂಡಲ್ ವುಡ್ ನ ಪದ್ಧತಿಯಂತೆ ನನಗೆ ಒಂದರ ನಂತರ ಇನ್ನೊಂದು ಚಿತ್ರ ಬಿಡುಗಡೆಯಾಗಬೇಕೆಂಬ ಆತುರವಿಲ್ಲ. ನನ್ನ ಇತ್ತೀಚಿನ ಚಿತ್ರ ಬಿಡುಗಡೆಯಾದ ನಂತರ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ ಎಂದು ಜನರು ಭಾವಿಸಿರಬಹುದು. ಒಂದು ಚಿತ್ರ ಬಿಡುಗಡೆಗೊಂಡ ಮೂರೇ ತಿಂಗಳಲ್ಲಿ ಇನ್ನೊಂದು ಬಿಡುಗಡೆಯಾಗಬೇಕೆಂಬ ಆತುರ ನನಗಿಲ್ಲ. ರತಾವರ ಚಿತ್ರ ಈ ವರ್ಷದ ಕೊನೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಶ್ರೀಮುರಳಿ ತಿಳಿಸಿದರು.

ತಮ್ಮ ಬಿಡುವಿನ ವೇಳೆಯನ್ನು ಮಕ್ಕಳೊಂದಿಗೆ ಕಳೆಯುತ್ತಿರುವುದಾಗಿ ಹೇಳಿದ ಮುರಳಿ ಇತರ ಸ್ಕ್ರಿಪ್ಟ್ ಗಳ ಕಥೆಗಳನ್ನು ಕೂಡ ಕೇಳುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT