ಚಿರಂಜೀವಿ-ಅಮಿತಾಬ್ ಬಚ್ಚನ್(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಚಿರಂಜೀವಿ ಹುಟ್ಟುಹಬ್ಬಕ್ಕೆ ಬಿಗ್ ಬಿ, ಅಮೀರ್ ಖಾನ್ ಪಾಲ್ಗೊಳ್ಳುವ ನಿರೀಕ್ಷೆ

ಶನಿವಾರ, (ಆ.22 ) ರಂದು ನಡೆಯಲಿರುವ ಮೇಘಾ ಸ್ಟಾರ್ ಚಿರಂಜೀವಿ 60 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹೈದರಾಬಾದ್: ಶನಿವಾರ, (ಆ.22 ) ರಂದು ನಡೆಯಲಿರುವ ಮೇಘಾ ಸ್ಟಾರ್ ಚಿರಂಜೀವಿ 60 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತಂದೆಯ ಹುಟ್ಟುಬದ ಅಂಗವಾಗಿ ಟಾಲಿವುಡ್ ನ ನಟ ರಾಮ್ ಚರಣ್ ತೇಜ್  ಔತಣಕೂಟ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಗೆ ಆಮಂತ್ರಣ ನೀಡಲಾಗಿದ್ದು, ಬರುವಿಕೆಯನ್ನು ಇಬ್ಬರೂ ನಟರು ಖಚಿತಪಡಿಸಿದ್ದಾರೆ ಎಂದು ರಾಮ್ ಚರಣ್ ಅವರ ಆಪ್ತರು ಸುದ್ದಿ ಸಂಸ್ಥೆಗಳಿಗೆ ತಿಳಸಿದ್ದಾರೆ.

ಬಚ್ಚನ್ ಕುಟುಂಬದೊಂದಿಗೆ  ರಾಮ್ ಚರಣ್ ತೇಜ್ ನಿಕಟ ಸಂಪರ್ಕಹೊಂದಿದ್ದು ಸ್ವತಃ ಆಹ್ವಾನಿಸಿದ ಕೂಡಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತಾಬ್ ಬಚ್ಚನ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಿರಂಜೀವಿ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಟಾಲಿವುಡ್ ನ ಇತರ ನಟರಾದ ವೆಂಕಟೇಶ್, ನಾಗಾರ್ಜುನ, ಜಗಪತಿ ಬಾಬು ಹಾಗೂ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಅವರೂ ಔತಣಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇಳೆ ರಾಮ್ ಚರಣ್ ತೇಜ್ ನಟನೆಯ  ಚಿತ್ರದಲ್ಲಿ ಚಿರಂಜೀವಿ ಕಿರು ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಚಿತ್ರ ತಂಡ ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಸಂಪೂರ್ಣ 'ಕುಸಿಯುತ್ತಿದೆ'; ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

IPL 2026: Marcus Stoinis ಸ್ಫೋಟಕ ಬ್ಯಾಟಿಂಗ್, RR ಗೆ ಗೆಲ್ಲಲು 223 ರನ್ ಬೃಹತ್ ಗುರಿ ನೀಡಿದ PBKS!

Iran War: ಜಗತ್ತಿಗೆ ಶಾಕ್ ಕೊಟ್ಟ UAE, ತೈಲ ರಫ್ತು ಗುಂಪುಗಳಿಂದ ಏಕಾಏಕಿ ಹೊರಕ್ಕೆ! ಆಗಿದ್ದೇನು?

SCROLL FOR NEXT