ಕರೀನಾ ಕಪೂರ್, ಸಲ್ಮಾನ್ ಖಾನ್, ಕಂಗನಾ ರಣಾವತ್ 
ಸಿನಿಮಾ ಸುದ್ದಿ

ಇವರ ಡಿಮ್ಯಾಂಡ್ ಏನೇನು ಗೊತ್ತಾ?

ಆ್ಯಕ್ಟ್ ಮಾಡ್ತೀವಿ. ಆದ್ರೆ, ಕಂಡಿಶನ್ಸ್ ಅಪ್ಲೈ!- ಇದು ಬಾಲಿವುಡ್ ತಾರೆಗಳ ಪಾಲಿಸಿ. ಈ ಕಂಡಿಶನ್ನುಗಳನ್ನು ಪೂರೈಸಿದರಷ್ಟೇ ಅವರು ನಟಿಸ್ತಾರೆ....

ಆ್ಯಕ್ಟ್ ಮಾಡ್ತೀವಿ. ಆದ್ರೆ, ಕಂಡಿಶನ್ಸ್ ಅಪ್ಲೈ!- ಇದು ಬಾಲಿವುಡ್ ತಾರೆಗಳ ಪಾಲಿಸಿ. ಈ ಕಂಡಿಶನ್ನುಗಳನ್ನು ಪೂರೈಸಿದರಷ್ಟೇ ಅವರು ನಟಿಸ್ತಾರೆ. ಇಲ್ಲಾಂದ್ರೆ ಕೈ ಕೊಡ್ತಾರೆ. ಹಾಗೆ ನೋಡಿದರೆ, ನಮ್ಮ ಕನ್ನಡದ ಶಿವಣ್ಣ ಎಷ್ಟೋ ಬೆಟರ್. ಡೈರೆಕ್ಟರ್ ಹೇಳಿದಂತೆ ಮಗುವಿನಂತೆ ಕೇಳಿ ನಟಿಸುವ ಈ ಪಾಠವನ್ನು ಶಿವಣ್ಣ ಕಲಿತಿದ್ದು ಅಣ್ಣಾವ್ರಿಂದ. ಆದರೆ, ಶಿವರಾಜ್ ಕುಮಾರ್ ಅವರ ಈ ಪಾಲಿಸಿ ಎಷ್ಟು ನಟರಿಗೆ ಮಾದರಿ ಆಗಿದೆ? ಕನ್ನಡದ ಹೊರತಾಗಿ, ಬಾಲಿವುಡ್ಡಿನಲ್ಲಿ ನೋಡೋದಾದ್ರೆ ಈ ಅರ್ಹತೆಗೆ ನಿಲುಕುವವರು ತೀರಾ ಕಮ್ಮಿ. ಹಾಗಾದರೆ, ಹಿಂದಿ ನಟರ ಆ ಡಿಮ್ಯಾಂಡುಗಳೇನು? ಬಾಲಿವುಡ್‍ನ ಮಟ್ಟಿಗೆ ಕರೀನಾ ಕಪೂರ್ ಹೈ ಸೊಫಿಸ್ಟಿಕೇಟೆಡ್ ನಟಿ. ಸಣ್ಣಪುಟ್ಟ ನಟರೊಂದಿಗೆ ಈಕೆ ನಟಿಸೋದೇ ಇಲ್ಲ. ಇದರಿಂದ ಅವಳ ಇಮೇಜ್ ಕುಗ್ಗುತ್ತದಂತೆ. ಬಾಲಿವುಡ್‍ನಲ್ಲಿ `ಎ ಲಿಸ್ಟ್' ನಟರೊಂದಿಗಷ್ಟೇ ತಾನು ನಟಿಸೋದು, ಬಿ ಲಿಸ್ಟ್ ನಟರ ಕಥೆಯನ್ನು ತಂದಿಡಬೇಡಿ ಅಂತಾಳೆ. ಅಂದಹಾಗೆ, ಈಕೆ ಹೇಳಿದ `ಎ' ಲಿಸ್ಟ್ ಅನ್ನು `ಕಿಸ್ಸರ್‍ಬಾಯ್' ಇಮ್ರಾನ್ ಹಶ್ಮಿ ಏನಾದ್ರೂ ತಪ್ಪು ತಿಳ್ಕೋತ್ತಾನಾ? ಗೊತ್ತಿಲ್ಲ!
ಹಿಂದಿಯ ಹಿರಿತಾರೆ ರೇಖಾ ಚಿರಯವ್ವನೆ ಹೌದು. ಆದರೆ, ಮೊದಲಿನಂತೆ ಸುಂದರಿಯೇನಲ್ಲ. ಇದು ಆಕೆಗೂ ಗೊತ್ತಿದೆ. ಅಭಿಷೇಕ್ ಕಪೂರ್ ನಿರ್ದೇಶನದ `ಫಿತೂರ್' ಸಿನಿಮಾಕ್ಕೆ ರೇಖಾ ಒಪ್ಪಿಕೊಂಡಳು. ಶೂಟಿಂಗೂ ಆಯಿತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ತನ್ನ ರೂಪವನ್ನು ಸೆರೆಹಿಡಿಯಲು ಕ್ಯಾಮೆರಾಮನ್ ಸೋತಿದ್ದಾನೆಂದು ಅರ್ಧಕ್ಕೇ ಸಿನಿಮಾದಿಂದ ಹೊರ ನಡೆದಳು. ಹೀಗಾಗಿ, ರೇಖಾಗೆ ಈಗ ಆಫರ್‍ಗಳು ಕಮ್ಮಿ ಇಲ್ವಂತೆ. ಒಳ್ಳೆಯ ಕ್ಯಾಮೆರಾಮನ್‍ಗಳ ಕೊರತೆ ಇದೆಯಷ್ಟೇ!

`ಕಾಸಿಗೆ ತಕ್ಕ ಕಡ್ಲೆಕಾಯಿ' ಎಂಬ ಕನ್ನಡದ ಗಾದೆಯನ್ನು ಕಂಗನಾ ರಾಣೌತ್ ಎಲ್ಲಾದ್ರೂ ಕೇಳಿಸಿಕೊಂಡಿದ್ದಾಳಾ? ಚಿತ್ರಕ್ಕೆ 11 ಕೋಟಿ ರು. ತೆಗೆದುಕೊಳ್ಳುವ ಕಂಗನಾಳದ್ದು ವಿಚಿತ್ರ ಸ್ವಭಾವವೊಂದಿದೆ. ಈಕೆ ಯಾರೊಂದಿಗೂ ನೇರವಾಗಿ ಮಾತಾಡಲ್ಲ! ಡೈರೆಕ್ಟರ್, ಸಹ
ಕಲಾವಿದರು ಏನೇ ಹೇಳೋದಿದ್ರೂ ಈಕೆಯ ಪರ್ಸನಲ್ ಸೆಕ್ರೇಟರಿಗೆ ಹೇಳಬೇಕು. ಹೀಗಾಗಿ, ತನ್ನೆಲ್ಲ ಶೂಟಿಂಗ್ ಸ್ಪಾಟ್‍ಗಳಿಗೆ ಪರ್ಸನಲ್ ಸೆಕ್ರೆಟರಿಯನ್ನು ಕರೆದೊಯ್ಯುತ್ತಾಳೆ. ಆ ಸಂಭಾವನೆಯನ್ನೂ ಆಯಾ ಚಿತ್ರ ನಿರ್ಮಾಪಕರೇ ನೋಡ್ಕೊಳ್ಬೇಕು. ನಟ ಅಕ್ಷಯ್ ಕುಮಾರ್ ದಿನದಲ್ಲಿ ಎಷ್ಟು ಗಂಟೆ ಬೇಕಾದ್ರೂ ಶೂಟಿಂಗಿಗೆ ತಯಾರು. ಆದರೆ, `ಭಾನುವಾರ ಮಾತ್ರ ನನ್ನ ಫ್ರೀ ಬಿಟ್ಬಿಡಿ' ಎನ್ನುತ್ತಾನೆ. ಒಮ್ಮೆ ಸಂಡೇ ಶೂಟಿಂಗಿಗೆ ಹೋದಾಗ ಹೆಂಡ್ತಿ ಟ್ವಿಂಕಲ್ ಖನ್ನಾಗೆ ಚೆನ್ನಾಗಿ ಕ್ಲಾಸ್ ತಗೊಂಡು, ಕೋಪ ಮಾಡ್ಕೊಂಡಿದ್ಲಂತೆ. ಅದೇ ಕೊನೆ.

ಬಾಲಿವುಡ್‍ನಲ್ಲಿ ಬಹುತೇಕರಿಗೆ ಕಿಸ್ಸಿಂಗ್  ಫೋಬಿಯಾನು ಇದೆ. ಸೋನಾಕ್ಷಿ ಸಿನ್ಹಾ, ಸಲ್ಮಾನ್‍ಖಾನ್, ಅಲಿ ಜಾಫರ್ ಮತ್ತು ಶಾರೂಖ್‍ಖಾನ್ (ಜಬ್‍ತಕ್ ಹೈ ಜಾನ್ ವರೆಗೆ) ಕಿಸ್ಸಿಂಗ್ ದೃಶ್ಯಗಳಿಗೆ ಯಾವತ್ತೂ ಒಪ್ಪಿಗೆ ಕೊಡಲ್ಲ. ಅಂಥ ಚಿತ್ರಗಳಿಗೆ ಸಹಿಯೂ ಹಾಕಲ್ಲ. ಇನ್ನು ಹೃತಿಕ್ ರೋಶನ್‍ಗೆ ತನ್ನ ದೇಹಾರೋಗ್ಯದ ಮೇಲೆ ವ್ಯಾಪಕ ಕಾಳಜಿ. ತನ್ನ ಖಾಸಗಿ ಬಾಣಸಿಗನೇ ಅಡುಗೆ ಮಾಡಿ ಹಾಕ್ಬೇಕು. ಬೇರೆಯವ್ರು ಮಾಡಿದ ಫುಡ್ಡನ್ನು ಈತ ತಿನ್ನೋದಿಲ್ಲ. ಇನ್ನು ಸಲ್ಮಾನ್‍ಖಾನ್‍ಗೊಂದು ವಿಚಿತ್ರ ಡಿಮ್ಯಾಂಡಿದೆ. ಐಶ್ವಯರ್ ರೈ, ಶಾರೂಖ್ ಖಾನ್ ನಟಿಸೋ ಸಿನಿಮಾಗಳಲ್ಲಿ ಈತ ನಟಿಸೋದಿಲ್ಲ. ಸಿನಿಮಾ ಅಷ್ಟೇ ಅಲ್ಲ, ಟಿವಿಯಲ್ಲಿ ಅಂಥ ಡ್ಯಾನ್ಸಿಂಗ್ ಶೋ ಇದ್ರೂ ಅದಕ್ಕೆ ಒಪ್ಪಿಕೊಳ್ಳೋದು ಕಷ್ಟ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

ಗಲ್ಲು ಶಿಕ್ಷೆ ಬೆನ್ನಲ್ಲೇ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ರಾಜಕೀಯ ಅಂದ್ರೆ ಅದು.... ಸಿಎಂ ಕುರ್ಚಿ ಗುದ್ದಾಟದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಂಸದೆ ರಮ್ಯಾ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

SCROLL FOR NEXT