ಸಿನಿಮಾ ಸುದ್ದಿ

ರಾಜಕೀಯ ಭವಿಷ್ಯಕ್ಕಾಗಿ ಲಂಡನ್ನಿನಲ್ಲಿ ಮನೆ ಹುಡುಕುತ್ತಿರುವ ಏಂಜಲೀನ ಜೋಲಿ

Guruprasad Narayana

ನ್ಯೂಯಾರ್ಕ್: ರಾಜಕಾರಣದಲ್ಲಿ ಆಸಕ್ತಿ ತಳೆದಿರುವ ಹಾಲಿವುಡ್ ನಟಿ ಏಂಜಲೀನ ಜೋಲಿ, ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ತಮ್ಮ ಪತಿ ಬ್ರ್ಯಾಡ್ ಪಿಟ್ ಅವರೊಂದಿಗೆ ಲಂಡನ್ನಿನಲ್ಲಿ ಮನೆ ಹುಡುಕುತ್ತಿದ್ದಾರಂತೆ.

ಯೂರೋಪಿಯನ್ ಯೂನಿಯನ್ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಈಗಾಗಲೇ ಅಮೆರಿಕಾದಲ್ಲಿ ಮನೆಗಳನ್ನು ಹೊಂದಿರುವ ಜೋಲಿ ಈಗ ಲಂಡನ್ ನಲ್ಲಿ ಮನೆ ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಸಬಲೀಕರಣಕ್ಕಾಗಿ ಈಗಾಗಲೇ ವಿಶ್ವಸಂಸ್ಥೆಯ ರಾಯಭಾರಿಯಾಗಿ ಜೋಲಿ ಕೆಲಸ ಮಾಡುತ್ತಿದ್ದು 'ಲೈಂಗಿಕ ಕಿರುಕುಳ ಮತ್ತು ಸಂಘರ್ಷದ ಕೊನೆ' ಎಂಬ ನಾಲ್ಕು ದಿನಗಳ ಸಮಾವೇಶದಲ್ಲಿ ಭಾಗವಿಸಿದ್ದಾರೆ ಕೂಡ.  

SCROLL FOR NEXT