ರಿಕ್ಕಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ರಿಕ್ಕಿ' ಟ್ರೇಲರ್ ಬಿಡುಗಡೆಗೆ ಭರದ ಸಿದ್ಧತೆ

ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟಿಸಿರುವ ಸಿನೆಮಾ 'ರಿಕ್ಕಿ' ಚಿತ್ರೀಕರಣ ಕಳೆದ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಿತ್ತು. ಈಗ ಒಂದು ವರ್ಷದ ನಂತರ ಮೊದಲ ಟ್ರೇಲರ್

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟಿಸಿರುವ ಸಿನೆಮಾ 'ರಿಕ್ಕಿ' ಚಿತ್ರೀಕರಣ ಕಳೆದ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಿತ್ತು. ಈಗ ಒಂದು ವರ್ಷದ ನಂತರ ಮೊದಲ ಟ್ರೇಲರ್ ಬಿಡುಗಡೆಗೆ ತಂಡ ಸಜ್ಜಾಗುತ್ತಿದೆ. ಗೆಳೆಯರಾಗ ರಕ್ಷಿತ್ ಮತ್ತು ರಿಶಬ್ ಅವರನ್ನು ಈ ಯೋಜನೆಯ ಮೂಲಕ ಒಟ್ಟಾಗಿ ತಂದ ನಿರ್ಮಾಪಕ ಎಸ್ ವಿ ಬಾಬು ಇಷ್ಟು ತಡವಾದರೂ ಸಂಯಮದಿಂದ ಕಾಯ್ದರಂತೆ. ನಿರ್ದೇಶಕ ರಿಶಬ್ ಶೆಟ್ಟಿ ಹೇಳುವಂತೆ ಹಲವಾರು ಪ್ರಬಲ ಕಾರಣಗಳಿಂದ ಯೋಜನೆ ತಡವಾಯಿತು ಎನ್ನುತಾರೆ.

"ಈಗ ಟ್ರೇಲರ್ ಬಿಡುಗಡೆ ಘಟ್ಟಕ್ಕೆ ಬಂದಿರುವುದಕ್ಕೆ ಅತೀವ ಸಂತಸವಾಗುತ್ತಿದೆ" ಎನ್ನುತಾರೆ ಚೊಚ್ಚಲ ನಿರ್ದೇಶಕ. ಇದರ ನಂತರ ಆಡಿಯೋ ಬಿಡುಗಡೆ ಕೂಡ ಆಗಲಿದ್ದು ಸೆಪ್ಟಂಬರ್ ಕೊನೆಗೆ ಚಲನಚಿತ್ರ ಕೂಡ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ನೈಜ್ಯ ಘಟನೆಗಳನ್ನು ಆಧರಿಸಿ ಪ್ರೇಮ ಕಥೆ ಹೆಣೆದಿರುವುದಾಗಿ ಹೇಳುವ ರಿಶಬ್ "ಟ್ರೇಲರ್ ನೋಡಿ ಜನ ಈ ಸಿನೆಮಾ ಯಾವುದರ ಬಗ್ಗೆ ಎಂದು ತಿಳಿಯಲಿ" ಎನ್ನುತ್ತಾರೆ.

ರಿಶಬ್ ಮತ್ತು ರಕ್ಷಿತ್ ಈಗ 'ಅವನೇ ಶ್ರೀಮಾನ್ ನಾರಾಯಣ' ಎಂಬ ಎಂಬ ಸಿನೆಮಾ ತಂಡವನ್ನು ಒಟ್ಟಿಗೆ ಸೇರಲಿದ್ದಾರೆ. "ಈ ಯೋಜನೆ ಬಗ್ಗೆ ಈಗಲೇ ಅಧಿಕೃತವಾಗಿ ಏನು ಹೇಳಲಾರೆ. ನಿರ್ಮಾಪಕರ ಜೊತೆ ಒಪ್ಪಂದವಾದ ನಂತರವಷ್ಟೇ ಏನಾದರು ಹೇಳಲು ಸಾಧ್ಯ" ಎನ್ನುತಾರೆ ರಿಶಬ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT