'ಲಕ್ಷ್ಮಣ' ಸಿನೆಮಾದಲ್ಲಿ ಅನೂಪ್ ಮತ್ತು ಮೇಘನಾ ರಾಜ್ 
ಸಿನಿಮಾ ಸುದ್ದಿ

'ಲಕ್ಷ್ಮಣ' ಟೀಸರ್ ಬಿಡುಗಡೆ ಮಾಡಲಿರುವ ಎಸ್ ಎಸ್ ರಾಜಮೌಳಿ

ಅನೂಪ್ ಮತ್ತು ಮೇಘನಾ ರಾಜ್ ನಟಿಸಿರುವ, ಆರ್ ಚಂದ್ರು ಅವರ 'ಲಕ್ಷ್ಮಣ' ಸಿನೆಮಾ ಡಬ್ಬಿಂಗ್ ಹಂತದಲ್ಲಿದ್ದು 'ಬಾಹುಬಲಿ' ಖ್ಯಾತಿಯ ಎಸ್ ಎಸ್ ರಾಜಮೌಳಿ ಅವರು ಟೀಸರ್

ಬೆಂಗಳೂರು: ಅನೂಪ್ ಮತ್ತು ಮೇಘನಾ ರಾಜ್ ನಟಿಸಿರುವ, ಆರ್ ಚಂದ್ರು ಅವರ 'ಲಕ್ಷ್ಮಣ' ಸಿನೆಮಾ ಡಬ್ಬಿಂಗ್ ಹಂತದಲ್ಲಿದ್ದು 'ಬಾಹುಬಲಿ' ಖ್ಯಾತಿಯ ಎಸ್ ಎಸ್ ರಾಜಮೌಳಿ ಅವರು ಟೀಸರ್ ಬಿಡುಗಡೆ ಮಾಡಲಿದ್ದಾರೆ. "ಇದು ರಾಜಮೌಳಿ ಅವರಿಗೆ ನಮ್ಮ ಕೆಲಸವನ್ನು ತೋರಿಸುವ ಅವಕಾಶ. ಮುಂಬೈನಲ್ಲಿ ಟೀಸರ್ ನಿರ್ಮಾಣ ಕೆಲಸ ನಡೆಯುತ್ತಿದ್ದು ಮುಂದಿನ ೧೦ ದಿನಗಳಲ್ಲಿ ಲಭ್ಯವಾಗಲಿದೆ" ಎನ್ನುತ್ತಾರೆ ಚಂದ್ರು.

ನಾಯಕ ನಟನ ಬಗ್ಗೆ ಮಾತನಾಡುವ ಚಂದ್ರು "ಅನೂಪ್ ಅವರಿಗೆ ಒಳ್ಳೆಯ ಕಂಠವಿದೆ ಆದುದರಿಂದ ಅವರೇ ಡಬ್ ಮಾಡಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಮುಂದಿನ ದಿನಗಳಲ್ಲಿ ಬೆಳಗಲಿರುವ ನಟ ಅವರು. ಅವರು ಹೊಸಬರಾಗಿದ್ದರೂ ನುರಿತವರಂತೆ ನಟಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ. ಸಿನೆಮಾ ಚಿತ್ರೀಕರಣ ಸಂಪೂರ್ಣಗೊಳ್ಳಲು ಇನ್ನು ೩ ಹಾಡುಗಳಷ್ಟೇ ಬಾಕಿ ಉಳಿದಿರುವುದಂತೆ.

ಮೇಘನಾ ರಾಜ್ ಅನೂಪ್ ಅವರಿಗೆ ಸರಿಯಾದ ಜೋಡಿ ಎಂದು ತಿಳಿಸುವ ಚಂದ್ರು ಕನ್ನಡ ಚೆನ್ನಾಗಿ ಬಲ್ಲ ನಟಿ ಅವರು ಎನ್ನುತ್ತಾರೆ. ಲಕ್ಷ್ಮಣದಲ್ಲಿ ರವಿಚಂದ್ರನ್ ಪೊಲೀಸ್ ಅಧಿಕಾರಿಯ ಪೋಷಾಕು ಧರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!