ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರೊಂದಿಗೆ ಶಾರೂಖ್ ಖಾನ್ 
ಸಿನಿಮಾ ಸುದ್ದಿ

ನನ್ನ ಮಕ್ಕಳ ಜೊತೆ ಬೆಂಗಳೂರಿನಲ್ಲಿ ಬದುಕುವ ಆಸೆಯಿದೆ: ಶಾರೂಖ್ ಖಾನ್

‘ನಾನು ನನ್ನ ಬಾಲ್ಯವನ್ನು ಇದೇ ಊರಿನಲ್ಲಿ ಕಳೆದಿದ್ದೇನೆ. ನನ್ನ ಅಜ್ಜಿ ಮನೆ ಸಂಬಂಧಿಕರೂ ಇಲ್ಲಿ ಇದ್ದಾರೆ. ಹಾಗಾಗಿ ಇಲ್ಲಿ ಮನೆಯೊಂದನ್ನು ಕಟ್ಟಿ ನನ್ನ ಮಕ್ಕಳ ಜೊತೆ ಸಂಬಂಧಿಕರ ಜೊತೆ ಕೆಲವು ಕಾಲ...

ಬೆಂಗಳೂರು: ‘ನಾನು ನನ್ನ ಬಾಲ್ಯವನ್ನು ಇದೇ ಊರಿನಲ್ಲಿ ಕಳೆದಿದ್ದೇನೆ. ನನ್ನ ಅಜ್ಜಿ ಮನೆ ಸಂಬಂಧಿಕರೂ ಇಲ್ಲಿ ಇದ್ದಾರೆ. ಹಾಗಾಗಿ ಇಲ್ಲಿ ಮನೆಯೊಂದನ್ನು ಕಟ್ಟಿ ನನ್ನ ಮಕ್ಕಳ ಜೊತೆ ಸಂಬಂಧಿಕರ ಜೊತೆ ಕೆಲವು ಕಾಲ ಕಳೆಯಬೇಕು ಎಂಬ ಆಸೆ ನನಗಿದೆ'  ಹೀಗೆಂದು ಹೇಳಿದ್ದು ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್.

ಬೆಂಗಳೂರಿನ ಐಐಎಂ-ಬಿ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿರುವ ನಾಯಕತ್ವ ಶೃಂಗ 'ಇಂಬ್ಯೂ'ನ ಉಧ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪ್ರೇಕ್ಷಕರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ, ನಾನು ಬಾಲ್ಯವನ್ನು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಳೆದಿದ್ದೇನೆ. ನಾನು ಚಿಕ್ಕವನಿರುವಾಗ ಬೆಂಗಳೂರಿನ ಹವಾಮಾನ ಇದಕ್ಕಿಂತಲೂ ಸುಂದರವಾಗಿತ್ತು, ಇಲ್ಲಿ ನನ್ನ ಅಜ್ಜಿ ಮನೆಯಿತ್ತು. ಅದನ್ನು ಇನ್ನು ಪುನಃ ನಿರ್ಮಿಸಿ ಅಲ್ಲಿ ನನ್ನ ಕುಟುಂಬದವರ ಜೊತೆ ಕಾಲ ಕಳೆಯುವ ಇಚ್ಛೆಯಿದೆ ಎಂದರು.

ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಸಂಸದ ಶಶಿ ತರೂರ್‌ ಶಾರುಖ್‌ರನ್ನು ಪ್ರಶ್ನಿಸಿ, ‘ಸಾಮಾಜಿಕ ಜಾಲತಾಣಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?’ ಎಂದು ಕೇಳಿದರು. ‘ಅದೊಂಥರಾ ಪ್ರೇಮ ಸಂಬಂಧ ಇದ್ದಂತೆ!’ಮೊದಲಿಗೆ ಅಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ನಂತರ ಎಲ್ಲದರ ಬಗ್ಗೆಯೂ ಅಪಸ್ವರ ಆರಂಭವಾಗುತ್ತದೆ. ಟ್ವಿಟರ್‌, ಫೇಸ್‌ಬುಕ್‌ಗಳ ಕತೆ ಕೂಡ ಇಷ್ಟೆ. ಒಮ್ಮೆ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಪಡೆದ ನಂತರ ಅವುಗಳ ಬಗ್ಗೆ ದೂರಿ ಪ್ರಯೋಜನ ಇಲ್ಲ. ‘ನಿಮಗೆ ಇರುವಂಥ ಮಾತಿನ ಹಕ್ಕು ಅಲ್ಲಿ ಎಲ್ಲರಿಗೂ ಇರುತ್ತದೆ. ನಾನು ಮಾತ್ರ ಇಲ್ಲಿ ಮಾತನಾಡುವೆ, ನೀವು ಮಾತನಾಡಬಾರದು’ ಎಂದು ಹೇಳಲಾಗುವುದಿಲ್ಲ ಎಂದರು.

ನನಗೆ ಇಷ್ಟವಾದ ಚಿತ್ರಗಳನ್ನು ಮಾಡುವುದು ನನ್ನ ಇಚ್ಚೆ. ಬಾಝಿಗರ್‌, ಢರ್‌, ಕಭಿ ಹಾಂ ಕಭಿ ನಾ ಮೊದಲಾದ ಚಿತ್ರಗಳು ನನ್ನ ವೃತ್ತಿ ಜೀವನವನ್ನೇ ಬದಲಿಸಿದವು. ಮೊದಲು ಬೇಡ ಎನಿಸಿದ್ದ, ಕಷ್ಟ ಎನಿಸಿದ್ದ ‘ಪ್ರೀತಿ–ಪ್ರೇಮ ಇರುವ ಚಿತ್ರಗಳಲ್ಲಿ ನಟಿಸುವುದು ನಂತರ ಸುಲಭವಾಯಿತು. ಅದರಿಂದ ಜೀವನಕ್ಕೆ ಬೇಕಾದ ಅಂಶಗಳನ್ನು ಕೂಡ ಕಲಿತುಕೊಂಡೆ. ಹಾಗಾಗಿ ನಿಮಗೆ ಬೇಡ ಅಂತ ಅನಿಸಿದ್ದನ್ನೂ ಮಾಡಿ, ಅದರಲ್ಲಿ ಕಲಿಯುವುದು ಬೇಕಾದಷ್ಟಿರುತ್ತದೆ ಎಂದು ನುಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT