ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ 100 ಕೋಟಿ ಬಜೆಟ್ ಸಿನಿಮಾಕ್ಕೆ 'ಕಲಿ' ಎಂದು ಟೈಟಲ್ ಇಡಲಾಗಿದೆ.
ಜೋಗಿ ಖ್ಯಾತಿಯ ಪ್ರೇಮ್ ಮೊದಲ ಬಾರಿಗೆ ಮಲ್ಟಿ ಸ್ಟಾರ್ ಗಳನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಗಿಮೀಕ್ ಮೂಲಕವೇ ತಮ್ಮ ಚಿತ್ರವನ್ನು ಹಿಟ್ ಲಿಸ್ಟ್ ಗೆ ಸೇರಿಸುವುದನ್ನು ಕರಗತ ಮಾಡಿಕೊಂಡಿರುವ ಪ್ರೇಮ್ ತಮ್ಮ ಮುಂದಿನ ಹೈ ಬಜೆಟ್ ಚಿತ್ರದ ಆರಂಭವನ್ನು ತಮ್ಮದೇ ಸ್ಟೈಲ್ ನಲ್ಲಿ ಮಾಡಿದ್ದಾರೆ. ಈ ಮೂಲಕ ಚಿತ್ರ ಪ್ರತಿ ಹಂತದಲ್ಲಿಯೂ ಪ್ರಚಾರ ಪಡೆಯುವುದು ಅವರ ತಂತ್ರವಾಗಿದೆ.
ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳನ್ನು ಒಂದೇ ತೆರೆ ಮೇಲೆ ತರಲಿರುವ ಪ್ರೇಮ್ ಮುಂದೆ ಯಾವ ಕಮಾಲ್ ಮಾಡುತ್ತಾರೋ ನೋಡಬೇಕು. ಚಿತ್ರಕ್ಕೆ ಕಲಿ ಎಂದು ಹೆಸರಿಡುವ ಮೂಲಕ ಕಲಿಯುಗ ಚಿತ್ರಣವನ್ನು ಕಣ್ಣ ಮುಂದೆ ತರುತ್ತಾರೋ ಕಾದು ನೋಡಬೇಕಿದೆ.