ನಟ ದುನಿಯಾ ವಿಜಯ್ 
ಸಿನಿಮಾ ಸುದ್ದಿ

ದುನಿಯಾ ವಿಜಯ್-ನಾಗಶೇಖರ್ ಜೋಡಿಯಲ್ಲಿ 'ಮಾಸ್ತಿ ಗುಡಿ' - ಗಂಧದಗುಡಿ ಭಾಗ ೩

ನಿರ್ದೇಶಕ ನಾಗಶೇಖರ್ ನಿರ್ದೇಶಿಸಬೇಕಿದ್ದ ಬಹುಭಾಷಾ ಚಲನಚಿತ್ರ ಮುದಿನ ವರ್ಷ ಜೂನ್ ಗೆ ಮೂಂದೂಡಲಾಗಿದ್ದು, ಅಲ್ಲಿಯವರೆಗೆ ಸಮಯಹರಣ ಮಾಡದೆ ಹೊಸ ಸಿನೆಮಾವೊಂದನ್ನು

ಬೆಂಗಳೂರು: ನಿರ್ದೇಶಕ ನಾಗಶೇಖರ್ ನಿರ್ದೇಶಿಸಬೇಕಿದ್ದ ಬಹುಭಾಷಾ ಚಲನಚಿತ್ರ ಮುದಿನ ವರ್ಷ ಜೂನ್ ಗೆ ಮೂಂದೂಡಲಾಗಿದ್ದು, ಅಲ್ಲಿಯವರೆಗೆ ಸಮಯಹರಣ ಮಾಡದೆ ಹೊಸ ಸಿನೆಮಾವೊಂದನ್ನು ಘೋಷಿಸಿದ್ದಾರೆ. ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಲಿರುವ ಚಿತ್ರದ ಹೆಸರು 'ಮಾಸ್ತಿ ಗುಡಿ' ಮತ್ತು ಅಡಿ ಶೀರ್ಷಿಕೆ 'ಗಂಧದ ಗುಡಿ ಭಾಗ ೩'. ಸದ್ಯಕ್ಕೆ ವಿಜಯ್ ಅವರಿಗೆ ಒಂದು ಸಾಲಿನ ಕಥೆ ಹೇಳಿರುವ ನಾಗಶೇಖರ್, ಇಬ್ಬರೂ ಒಟ್ಟಿಗೆ ಸ್ಕ್ರೀನ್ ಪ್ಲೇ ಬರೆಯಲಿದ್ದಾರತೆ.

"ನಾನು ನನ್ನ ಬಹುಭಾಷಾ ಚಲನಚಿತ್ರ 'ಗಡಿಯಾರ'ಕ್ಕೆ ಹಸಿರು ನಿಶಾನೆ ಕೊಡಲು ನಿರ್ಮಾಪಕರಿಗೆ ಕಾಯುತ್ತಿದ್ದೆ. ಈ ನಡುವೆ ವಿಜಯ್ ಗಾಗಿ ಒಂದು ಸಾಲಿನ ಕಥೆ ಹೆಣೆಯಲು ಅವಕಾಶ ಸಿಕ್ಕಿತು. ಅವರು ಬೇರೊಬ್ಬ ನಿರ್ದೇಶಕನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ನನಗೆ ಸಮಯ ಇರುವುದನ್ನು ತಿಳಿದ ಅವರು ಸಿನೆಮಾ ನಿರ್ದೇಶಿಸಲು ನನಗೆ ತಿಳಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.

ಕಬಿನಿ ಅಣೆಕಟ್ಟಿನ ಬಳಿಯಿರುವ 'ಮಾಸ್ತಿಗುಡಿ' ದೇವಸ್ಥಾನದ ಬಳಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವಂತೆ ಇದು. ದುನಿಯಾ ವಿಜಯ್ ಗೆಳೆಯರಾದ ಸುಂದರ್ ಪಿ ಗೌಡ ಮತ್ತು ಅನಿಲ್ ಕುಮಾರ್ ವಿ ಚಿತ್ರದ ನಿರ್ಮಾಪಕರು.

ಸಾಧು ಕೋಕಿಲಾ ಸಿನೆಮಾಗೆ ಸಂಗೀತ ನೀಡಲಿದ್ದು ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ಇಬ್ಬರು ನಾಯಕನಟಿಯರ ಶೋಧನೆ ನಡೆಯುತ್ತಿದೆಯಂತೆ. "ಹುಲಿಗಳನ್ನು ಉಳಿಸಿ ಕಾಡು ಉಳಿಸಿ" ಎಂಬ ಧ್ಯೇಯ ಸಿನೆಮಾದಲ್ಲಿ ಧ್ವನಿಸಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್