ಶ್ರದ್ಧಾ ಕಪೂರ್‍ 
ಸಿನಿಮಾ ಸುದ್ದಿ

ನಗ್ಮಾ ಆಗಲಿರುವ ಶ್ರದ್ಧಾ

ಆಶಿಕಿ-2ನಲ್ಲಿ ಮಿಂಚಿದ ಶ್ರದ್ಧಾ ಕಪೂರ್‍ಗೆ ಸೀಕ್ವೆಲ್ ಚಿತ್ರಗಳ ಆಫರ್‍ಗಳು ಹೆಚ್ಚುತ್ತಿವೆ. ಟೈಗರ್ ಜೊತೆಗೆ ಬಾಘಿ, ಫರ್ಹಾನ್ ಅಖ್ತರ್ ಜೊತೆ ರಾಕ್ ಆನ್ .. ಎರಡೂ ಸೀಕ್ವೆಲ್‍ಗಳೇ!

ಆಶಿಕಿ-2ನಲ್ಲಿ ಮಿಂಚಿದ ಶ್ರದ್ಧಾ ಕಪೂರ್‍ಗೆ ಸೀಕ್ವೆಲ್ ಚಿತ್ರಗಳ ಆಫರ್‍ಗಳು ಹೆಚ್ಚುತ್ತಿವೆ. ಟೈಗರ್ ಜೊತೆಗೆ ಬಾಘಿ, ಫರ್ಹಾನ್ ಅಖ್ತರ್ ಜೊತೆ ರಾಕ್ ಆನ್.. ಎರಡೂ ಸೀಕ್ವೆಲ್‍ಗಳೇ!
ಇಪ್ಪತ್ತೈದು ವರ್ಷಗಳ ಹಿಂದೆ ದೀಪಕ್ ಶಿವದಾಸನಿ ಒಂದು ಚಿತ್ರ ನಿರ್ದೇಶಿಸಿದ್ದರು. `ಬಾಘಿ: ಎ ರೆಬೆಲ್ ಫಾರ್ ಲವ್' ಹೆಸರಿನ ಈ ಚಿತ್ರ ಭಾರಿ ಹಿಟ್ ಆಯಿತು. ಆ್ಯಕ್ಷನ್, ರೊಮ್ಯಾನ್ಸ್,  ಡ್ರಾಮಾದಿಂದ ಗಮನ ಸೆಳೆದ ಈ ಚಿತ್ರ ಕ್ಕೆ ಸಲ್ಮಾನ್ ಹೀರೋ ಆಗಿದ್ದರು.ಹದಿನೈದು ವರ್ಷದ ನಗ್ಮಾ ನಾಯಕಿ! 90ರ ದಶಕದಲ್ಲಿ ಬಂದ ಈ ಚಿತ್ರ, ಇಡೀ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ  ಏಳನೆಯ ಚಿತ್ರ ಎನಿಸಿಕೊಂಡಿತ್ತಂತೆ.
ಈಗೇನುಸುದ್ದಿ? ಅದೇ ಹೆಸರಿನ ಚಿತ್ರ ಬರುವ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ! ಈ ಚಿತ್ರದಲ್ಲಿ ನಗ್ಮಾ ಜಾಗದಲ್ಲಿ ಕಾಣಿಸಿಕೊಳ್ಳಲಿರುವವರು ಶ್ರದ್ಧಾ ಕಪೂರ್.  ಗಾಯಕಿಯಾಗಿ, ನಾಯಕಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರದ್ಧಾ ಮುಂದಿನ ವರ್ಷ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಚಾಲನೆ ನೀಡಲಿರುವುದು `ಬಾಘಿ'  ಚಿತ್ರ. ಇದಾದ ಮೇಲೆ `ರಾಕ್‍ಆನ್ -2' ಬಿಡುಗಡೆ ಆಗಲಿದೆಯಂತೆ. ಚಿಕ್ಕವಯಸ್ಸಿಗೇ ವೇಶ್ಯಾವೃತ್ತಿಗೆ ಇಳಿದ ಮುಗ್ಧ ಬಾಲಕಿಯನ್ನು ಪ್ರೀತಿಸುವ ನಾಯಕ, ಆಕೆಯನ್ನು ಪಾಪ ಕೂಪದಿಂದ  ಹೊರತರುವ ಪ್ರಯತ್ನವೇ ಹಳೆಯ `ಬಾಘಿ' ಚಿತ್ರದ ಕಥೆ. ಇದೇ ಕಥೆಯ ಎಳೆಯನ್ನಿಟ್ಟುಕೊಂಡು ಶಬ್ಬೀರ್ ಖಾನ್ ಹೊಸ ಚಿತ್ರ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.
ಆಶಿಕಿ-2ನಲ್ಲಿ ನಟಿಸಿ ಸೈ ಎನಿಸಿಕೊಂಡ ಶ್ರದ್ಧಾ ಕಪೂರ್‍ಗೆ ಸೀಕ್ವೆಲ್ ಚಿತ್ರಗಳಿಗೆ ಹೆಚ್ಚು ಆಫರ್‍ಗಳು ಬರು ತ್ತಿವೆ. ಬಾಘಿ ಒಂದು ರೀತಿಯ ಸೀಕ್ವೆಲ್ ಆದರೆ, ಫರ್ಹಾನ್ ಅಖ್ತರ್ ಜೊತೆ ನಟಿಸುತ್ತಿರುವ  ರಾಕ್ ಆನ್ -2 ಕೂಡ ಸೀಕ್ವೆಲ್. ಯಶಸ್ಸು ಸೀಕ್ವೆಲ ಆಗುತ್ತದೆ ಎಂಬುದು ನಿರ್ಮಾಪಕರ ಲೆಕ್ಕಚಾರವಿರಬಹುದು. ಅಂದ ಹಾಗೆ, ಬಾಘಿಯಲ್ಲಿ ಸಲ್ಮಾನ್ ಪಾತ್ರವನ್ನು ನಿರ್ವಹಿಸುತ್ತಿರುವವರು  ಟೈಗರ್ ಶ್ರಾಫ್ .ಭರಪೂರ ಆ್ಯಕ್ಷನ್‍ನಿಂದ ಚಿತ್ರ ತುಂಬಿ ತುಳುಕಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಶ್ರದ್ಧಾ ಕಪೂರ್ 2016ರಲ್ಲಿ ಆವರಿಸಿಕೊಳ್ಳುವ ನಟಿಯಾಗುವ  ಮುನ್ಸೂಚನೆಯಂತೂ ಕೊಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT