ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ದಿಗಂತ್ ಹಾಗೂ ರಮ್ಯಾ ನಟಿಸುತ್ತಿರುವ ಹೊಸ ಚಿತ್ರಕ್ಕೆ ನಾಗರಹಾವು ಹೆಸರಿಡಲಾಗಿದ್ದು, ಈ ಚಿತ್ರದ ಆಡಿಯೋ ಬಿಡುಗಡೆಯನ್ನು ನಟಿ ಅನುಷ್ಕಾ ಶೆಟ್ಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ತೆಲುಗಿನಲ್ಲಿ ಆರುಂಧತಿ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿಗೆ ಬಿಗ್ ಬ್ರೇಕ್ ನೀಡಿದ್ದ ಕೋಡಿ ರಾಮಕೃಷ್ಣ ಅವರು ತಮ್ಮ ನಾಗರಹಾವು ಚಿತ್ರದ ಆಡಿಯೋ ಬಿಡುಗಡೆಯನ್ನು ಅನುಷ್ಕಾರಿಂದ ಮಾಡಿಸಲಿದ್ದಾರೆ. ಜನವರಿಯ ಕೊನೆಯಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.
ಡಿಸೆಂಬರ್ 30 ಸ್ಯಾಂಡಲ್ ವುಡ್ ನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದೆ ಬೃಹತ್ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಲಿದೆ.
ಕನ್ನಡ ಚಿತ್ರರಂಗದಲ್ಲಿ ನಾಗರಹಾವು ಹೆಸರಿನಲ್ಲಿ ಬರುತ್ತಿರುವ ಮೂರನೇ ಚಿತ್ರ ಇದಾಗಿದೆ. 1970 ರಲ್ಲಿ ಡಾ. ವಿಷ್ಣು ವರ್ಧನ್ ಅಭಿನಯಿಸಿದ ನಾಗರಹಾವು ಚಿತ್ರ ತೆರೆಕಂಡಿತ್ತು. ನಂತರ ಹಿಂದಿಯ ಬಾಜಿಗಾರ್ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿತ್ತು, ಉಪೇಂದ್ರ ನಟನೆಯ ಈ ಚಿತ್ರಕ್ಕೂ ನಾಗರಹಾವು ಎಂದು ಶೀರ್ಷಿಕೆ ಕೊಡಲಾಗಿತ್ತು. ಈಗ ರಮ್ಯಾ ಮತ್ತು ದಿಗಂತ್ ಅಭಿನಯದ ಚಿತ್ರಕ್ಕೂ ನಾಗರ ಹಾವು ಎಂದು ಹೆಸರಿಡಲಾಗಿದ್ದು, ಈ ಚಿತ್ರವೂ ಗೆಲವು ಸಾಧಿಸುವುದೇ ನೋಡಬೇಕು.