ಮುಮೈತ್ ಖಾನ್ 
ಸಿನಿಮಾ ಸುದ್ದಿ

ಉಮ್ಮ್ ... ಮುಮ್ಮ್!

'ಟೈಟು ಟೈಟು.. ಫುಲ್ಲು ಟೈಟು..' ಎಂಬ ಹಾಡು ನೆನಪಿಲ್ಲದಿದ್ದರೂ, ಅದರಲ್ಲಿ ನೋಡಿದರೆ ಟೈಟಾಗುವಂತೆ ಟೈಟ್ ಉಡುಗೆ ಧರಿಸಿ ನರ್ತಿಸಿದ್ದ ಸುಂದರಿ ನೆನಪಿರುತ್ತದೆ. ಕೇವಲ ಮುಖದ ನೆನಪಿದ್ದರೆ ಸಾಲದು, ಹೆಸರನ್ನು ತಿಳಿದುಕೊಂಡಿರಬೇಕಾದ್ದು ನ್ಯಾಯ. ಆಕೆಯ ಹೆಸರು ಮುಮೈತ್ ಖಾನ್. ಈಗ ನಿಮಗೆ ಆಕೆಯನ್ನು ಅಂತರ್ಜಾಲದಲ್ಲಿ ಜಾಲಾಡಲು ಸುಲಭವಾಯಿತಲ್ಲವೇ! ಇದರಿಂದ ನೀವು ತಿಳಿಯಬೇಕಾದ್ದೇನೆಂದರೆ ನಿಮಗೆ ನಾವು ಸಹಾಯವನ್ನೂ ಮಾಡುತ್ತೇವೆ ಎಂಬ ವಿಚಾರವನ್ನು. 'ಮುನ್ನಾಭಾಯಿ ಎಂಬಿಬಿಎಸ್‌' ಚಿತ್ರದ ಐಟಮ್ ಸಾಂಗಿಗಾಗಿ ಆಡಿಷನ್ ಮಾಡುತ್ತಿದ್ದಾಗ ಘಟಾನುಘಟಿ ಗಟ್ಟಿಗಿತ್ತಿಯರನ್ನು ನೂಕಿ ಸೆಲೆಕ್ಟ್ ಆದವಳು ಮುಮೈತ್. ಮೊತ್ತ ಮೊದಲ ಐಟಮ್ ಹಾಡಿನಲ್ಲಿ 'ದೇಖ್ ಲೇ' ಎನ್ನುತ್ತಾ, ಬಂದ ಹೊಸದರಲ್ಲೇ ಹೆಚ್ಚು ದಿಖಾವೆಗಳನ್ನು ತೋರಿಸಿದ್ದಳು. ಅಲ್ಲಿಂದ ತೆಲುಗಿನ 'ಪೋಕಿರಿ'ಯಲ್ಲಿ ಆಕೆಯನ್ನು ಕಂಡ ಪೋಕ್ರಿ ಗುರುಹಿರಿಯರೆಲ್ಲರೂ ಹಿರಿಹಿರಿ ಹಿಗ್ಗಿದ್ದರು. ಇಲ್ಲಿಯ ತನಕ ಸುಮಾರು ಎಪ್ಪತ್ತಕ್ಕೂ ಹೆಚ್ಚು ದಕ್ಷಿಣದ ಚಿತ್ರಗಳಲ್ಲಿ ನಟಿಸಿರುವ ಆಕೆಯನ್ನು ಬೃಹತ್ ಪರದೆಯ ಮೇಲೆ ಕಾಣಲು ಯಾವ ಪ್ರೇಕ್ಷಕರೂ ದಾಕ್ಷಿಣ್ಯ ಮಾಡಲಿಲ್ಲ, ಬದಲಾಗಿ ದಕ್ಷಿಣೆ ಕೊಟ್ಟು ಮುಗಿಬಿದ್ದು ನೋಡಿದರು. ನೀವಿಷ್ಟೂ ಮಂದಿ ಆಕೆಯನ್ನು ಸೆಕ್ಸಿ ಎಂದುಕೊಳ್ಳುತ್ತೀರಲ್ಲವೆ, ಆಕೆ ಅದನ್ನು ಅಲ್ಲಗಳೆಯುತ್ತಾಳೆ. ಆಕೆಯ ಪ್ರಕಾರ ಆಕೆ ಸೆಕ್ಸಿ ಅಲ್ಲವಂತೆ, ಅದೆಲ್ಲಾ ಮೇಕಪ್ ಮ್ಯಾಜಿಕ್ ಅಂತೆ. ಲಾಜಿಕ್ಕೇನೆಂದರೆ ಸುಂದರ ವದನವನ್ನು ಮೇಕಪ್ಪಿನಿಂದಾದರೂ ಪಡೆಯಬಹುದು ಆದರೆ ಆದಕ್ಕೆ ಹೊರತಾದ್ದನ್ನು ಮುಂಚಿನಿಂದಲೇ ಪಡೆದುಕೊಂಡು ಬಂದಿರಬೇಕು. ಅವಳ ರೋಲ್ ಮಾಡೆಲ್ 'ಶಕೀರಾ' ಅಂತೆ, ದಯವಿಟ್ಟು ನಿಮ್ಮಲ್ಲೊಂದು ವಿನಂತಿ, ನಿಮಗೆ ರ ಮತ್ತು ಲ ಉಚ್ಛಾರ ದೋಷವಿದ್ದರೆ ಆ ಹೆಸರನ್ನು ಉಚ್ಚಾರ ಮಾಡಲು ಹೋಗದಿರಿ. ಹಿಂದೊಮ್ಮೆ ವರದಿಗಾರನೊಬ್ಬ ಮದುವೆ ಬಗ್ಗೆ ಪ್ರಸ್ತಾಪಿಸಿದ್ದ. ಗೊತ್ತು, ನಿಮಗೆ ಮದುವೆಯ ಬಗ್ಗೆ ತಿರಸ್ಕಾರವಿದೆಯೆಂದು, ಅದರಲ್ಲೂ ಮುಮೈತ್ ಮದುವೆಯ ವಿಚಾರ! ಆಕೆಗೂ ಮದುವೆಯಾಗುವ ಯಾವುದೇ ಇಚ್ಛೆ ಸದ್ಯಕ್ಕಿಲ್ಲ. ಈ ಪ್ರಶ್ನೆ ವ್ಯಂಗ್ಯಭರಿತವಾದ್ದರಿಂದ ಆಕೆ ತಿರುಗಿ ಆತನನ್ನೇ ತನ್ನನ್ನು ಮದುವೆ ಆಗುತ್ತೀಯಾ ಎಂದು ಕೇಳಿದ್ದಳು. ಛೆ! ಒಳ್ಳೆ ಚಾನ್ಸು ಮಿಸ್ಸಾದ ನಿಮ್ಮ ದುಃಖ ನಮಗೂ ಅರ್ಥವಾಗುತ್ತದೆ. ಆಕೆಯನ್ನು ಮುಂಬೈನಲ್ಲಿ ಯಾರೂ ಗುರುತು ಹಿಡಿಯದಿರುವುದರಿಂದ ಅಲ್ಲಿನ ಬೀದಿಗಳಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟವಂತೆ. ದಕ್ಷಿಣದಲ್ಲಿ ಹಾಗಾಗದು, ಆಕೆ ವೇಷ ಧರಿಸಿ ಓಡಾಡುವ ಪರಿಸ್ಥಿತಿ ಇಲ್ಲಿದೆ, ನಿಮ್ಮಗಳ ದೆಸೆಯಿಂದ!

- ಹವನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT