ಕೃತಿ ಖರಬಂಧ, ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣನಿಗೆ ಕೃತಿ ಜೋಡಿ

ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣನ ಅವತಾರದಲ್ಲಿ ಪ್ರತ್ಯಕ್ಷ ಆಗುತ್ತಿರುವ ಸುದ್ದಿಈಗಾಗಲೇ ಎರಡು ದಿನ ಹಳತು.

ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣನ ಅವತಾರದಲ್ಲಿ ಪ್ರತ್ಯಕ್ಷ ಆಗುತ್ತಿರುವ ಸುದ್ದಿಈಗಾಗಲೇ ಎರಡು ದಿನ ಹಳತು. ಆದರೆ ಶ್ರೀಮನ್ನಾರಾಯಣನ ಜೋಡಿ ಶ್ರೀಲಕ್ಷ್ಮಿ ಆಗುವಾಕೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಸದ್ಯದ ಬಹುಬೇಡಿಕೆಯ ಗ್ಲಾಮರ್ ಡಾಲ್ ಕೃತಿ ಖರಬಂಧ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಆಯ್ಗೆಯಾಗುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷದಲ್ಲಿ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಇರುವ ಕೃತಿಗೆ ಈ ವರ್ಷವೂ ಒಂದಾದಮೇಲೊಂದು ಆಫರ್ ಗಳು ಬರುತ್ತಿದ್ದು, ರಕ್ಷಿತ್ ಶೆಟ್ಟಿ- ಕೃತಿ ಕಾಂಬಿನೇಷನ್ ಸಿನಿಪ್ರಿಯರಿಗೆ ಇಷ್ಟವಾಗುವುದು ಖಚಿತ.

ಈ ಚಿತ್ರವನ್ನೂ ರಕ್ಷಿತ್ ಗೆಳೆಯ ರಿಷಭ್ ಶೆಟ್ಟಿಯೇ ನಿರ್ದೇಶಿಸುತ್ತಿರುವುದು ವಿಶೇಷ. ಈಗಾಗಲೇ ಈ ಕಾಂಬಿನೇಷನ್ ರಿಕ್ಕಿ ಚಿತ್ರದ ಚಿತ್ರೀಕರಣ ಮುಗಿಸಿದ್ದು, ನಿರ್ಮಾಪಕ ಎಸ್.ವಿ.ಬಾಬು ಅವರ ಆಸೆಯಂತೆ ಹಾಡುಗಳನ್ನು ರಿಚ್ಚಾಗಿ ಶೂಟ್ ಮಾಡುವ  ಸಲುವಾಗಿ ಫಾರಿನ್ನಿಗೆ ಹಾರುವ ಆಲೋಚನೆ ಇಟ್ಟುಕೊಂಡಿದ್ದಾರೆ.ಈ ಗ್ಯಾಪಲ್ಲಿ ಶ್ರೀಮನ್ನಾರಾಯಣ ಚಿತ್ರದ ಸ್ಕ್ರಿಪ್ಟ್ ತಯಾರಿಸಿದ್ದಾರೆ ರಿಷಭ್.

ರಕ್ಷಿತ್ ಮತ್ತವರ ಖಾಸಾ ಗೆಳೆಯರು. ಚಿತ್ರದ ಒನ್‍ಲೈನ್ ಐಡಿಯಾ ರಕ್ಷಿತ್ ಶೆಟ್ಟಿಯದ್ದೇ ಆಗಿದ್ದು, ಈ ಚಿತ್ರವನ್ನು ನಿರ್ದೇಶಿಸಬೇಕೆಂದಿದ್ದು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಸದ್ಯಕ್ಕೆ ಅವರು ಕೋರಿಯೋಗ್ರಾಫಿಯಲ್ಲೇ ಹೆಚ್ಚು ಬ್ಯುಸಿ ಇರೋದ್ರಿಂದ ರಿಷಭ್ ಅಂಡ್ ಟೀಮ್ ಈ ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡಿ ಸಿನಿಮಾ ಮಾಡಲು ಹೊರಟಿದೆ. ರಿಕ್ಕಿ ಪೂರ್ತಿಯಾಗುತ್ತಿದ್ದಂತೆಯೇ ಚಿತ್ರದ ಇತರೆ ವಿವರಗಳು ಹೊರಬರಲಿದ್ದು,  ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಕರಪ್ಟ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಮರ್ಷಿಯಲ್ಲಲ್ಲಿ ಕಮರ್ಷಿಯಲ್  ಅನ್ನೋ ಮಟ್ಟಕ್ಕೆ ಮನರಂಜನೆ ನೀಡಲಿದೆ ಎನ್ನುತ್ತಾರೆ ರಿಷಭ್.

ಮುಂದ...? ಮಕ್ಕಳ ಚಿತ್ರ
ಬ್ಯಾಕ್ ಟು ಬ್ಯಾಕ್ ನಿರ್ದೇಶನ ಮಾಡುತ್ತಿರುವ ಹೀರೋ ಲುಕ್ಕಿನ ರಿಷಭ್ ನಟನೆಗೆ ಗುಡ್ ಬೈ ಏನಾದ್ರೂ ಹೇಳಿದ್ರಾ ಅಂತ ಕೇಳಿದ್ರೆ ರಿಷಭ್ `ನಾನು ಹೀರೋ ಆಗಿ ಮಾಡ್ತಿರೋ ಆರು ಸಿನಿಮಾಗಳು ಇನ್ನಾದರೂ ಹಾಗೇ ಇವೆ. ಅದಕ್ಕೆ ಮೊದಲೇ ನನ್ನನ್ನು ಇಂಡಸ್ಟ್ರಿಗೆ ಉಳಿದವರು ಕಂಡಂತೆ, ಲೂಸಿಯಾ ಚಿತ್ರಗಳು ಪರಿಚಯಿಸಿಬಿಟ್ಟಿವೆ. ಈ ಮೊದಲು ಬರವಣಿಗೆ ಸಹಾಯಕ ನಿರ್ದೇಶನ ಅಂತ ನಾನು ಪಳಗಿರೋದ್ರಿಂದ, ಸದ್ಯಕ್ಕೆ ಇವೆರಡು ಚಿತ್ರ ನಿರ್ದೇಶಿಸಿ ಮತ್ತೆ ನಟನೆಗೆ ವಾಪಸಾಗಲಿದ್ದೇನೆ. ಶ್ರೀಮನ್ನಾರಾಯಣ ನಂತರ ಒಂದು ಮಕ್ಕಳ ಚಿತ್ರ ಮಾಡಲಿದ್ದೇನೆ. ಸಬ್ಸಿಡಿಗಲ್ಲ.. ಮಕ್ಕಳು ಹಾಗೂ ಮನೆಮಂದಿ ನೋಡೋ ಅಂಥ ಚಿತ್ರ. ರಾಜ್ಯ ಸರ್ಕಾರಕ್ಕೆ ಸಂದೇಶ ರವಾನಿಸುವ ಚಿತ್ರ. ಕನ್ನಡ ಶಾಲೆ ಮುಚ್ಚುತ್ತಿರುವ ಆತಂಕದ ಪರಿಸ್ಥಿತಿ ಇಟ್ಟುಕೊಂಡು ಸಬ್ಜೆಕ್ಟ್ ಮಾಡಿದ್ದೇನೆ. ಟೈಟಲ್ ಸದ್ಯದಲ್ಲೇ ಫೈನಲ್ ಆಗಲಿದೆ. ಮಿಕ್ಕ ವಿವರಗಳನ್ನು ಆ ಸಮಯದಲ್ಲಿ ತಿಳಿಸ್ತೀನಿ.' ಅಂತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!